Palmistry: ನೀವು ಯಾವ ಕೆಲಸದಲ್ಲಿ ಪ್ರಾವಿಣ್ಯತೆ ಹೊಂದಿರುವಿರಿ? ನಿಮ್ಮ ಕೈಗಳನ್ನು ನೋಡಿ ತಿಳಿದುಕೊಳ್ಳಿ

Palmistry: ನಮ್ಮ ಅಂಗೈ ಗಾತ್ರ (Palm Size) ಮತ್ತು ಬೆರಳುಗಳ ಉದ್ದಳತೆ (Finger Length) ನಮ್ಮ ವ್ಯಕ್ತಿತ್ವದ (Personality) ಅನೇಕ ರಹಸ್ಯಗಳನ್ನು ಬಹಿರಂಗಪಡಿಸುತ್ತವೆ. ವ್ಯಕ್ತಿಯ ಇಚ್ಛಾಶಕ್ತಿಯಿಂದ ಹಿಡಿದು ಆ ವ್ಯಕ್ತಿ  ಸಮಾಜದಲ್ಲಿ ಹೇಗೆ ಬೆರೆಯುತ್ತಾನೆ ಎಂಬುದನ್ನು ಕೂಡ ಅವು ಹೇಳುತ್ತವೆ.

Written by - Nitin Tabib | Last Updated : Jun 12, 2021, 03:30 PM IST
  • ಅಂಗೈ ಆಕಾರ ನಮ್ಮ ಪರ್ಸನಾಲಿಟಿ ಜೊತೆಗೆ ನೇರ ಸಂಬಂಧ ಹೊಂದಿದೆ.
  • ಬೆರಳುಗಳು ನಮ್ಮಲ್ಲಿರುವ ಇಚ್ಚಾಶಕ್ತಿಯ ಕುರಿತು ಹೇಳುತ್ತವೆ.
  • ಬಲಗೈ ವರ್ತಮಾನ ಸ್ಥಿತಿಯ ಕುರಿತು ಹೇಳಿದರೆ, ಎಡಗೈ, ಭವಿಷ್ಯದ ಕುರಿತು ಹೇಳುತ್ತದೆ.
Palmistry: ನೀವು ಯಾವ ಕೆಲಸದಲ್ಲಿ ಪ್ರಾವಿಣ್ಯತೆ ಹೊಂದಿರುವಿರಿ? ನಿಮ್ಮ ಕೈಗಳನ್ನು ನೋಡಿ ತಿಳಿದುಕೊಳ್ಳಿ title=
Palmistry (File Photo)

ನವದೆಹಲಿ: ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ (Palmistry) ಅಂಗೈನಲ್ಲಿರುವ ರೇಖೆಗಳು ಹಾಗೂ ಆಕೃತಿಗಳ ಜೊತೆಗೆ ಅಂಗೈ ಆಕಾರ (Palm Size) ಹಾಗೂ ಬೆರಳುಗಳ ಉದ್ದಳತೆಯ (Finger Length) ಸಹಾಯದಿಂದಲೂ ಕೂಡ ಸಾಕಷ್ಟು ಸಂಗತಿಗಳನ್ನು ಹೇಳಲಾಗುತ್ತದೆ. ವ್ಯಕ್ತಿಗಳ ಅಂಗೈ ಆಕಾರ ಹಾಗೂ ಬೆರಳುಗಳ ಉದ್ದಳತೆಯಿಂದ ಯಾವುದೇ ಒಂದು ವ್ಯಕ್ತಿಯ ಸ್ವಭಾವ (Personality) ಹಾಗೂ ಅವರ ಭಾಗ್ಯದ (Luck) ಕುರಿತು ತಿಳಿದುಕೊಳ್ಳಬಹುದು. ಹಾಗಾದರೆ, ಬನ್ನಿ ನಮ್ಮ ಅಂಗೈ ನಮ್ಮ ಕುರಿತು ಏನನ್ನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅಂಗೈ ಹಾಗೂ ಬೆರಳುಗಳ ಆಕಾರ ಹಲವು ರಹಸ್ಯಗಳನ್ನು ಹೇಳುತ್ತವೆ 
ಹಸ್ತಸಾಮುದ್ರಿಕ ಶಾಸ್ತ್ರದ (Palmistry) ವ್ಯಕ್ತಿಯ ಬಲಗೈ ವರ್ತಮಾನ ಪರಿಸ್ಥಿತಿಯ ಕುರಿತು ಹೇಳಿದರೆ, ಎಡ ಅಂಗೈ ವ್ಯಕ್ತಿಯ ಮಹತ್ವಾಕಾಂಕ್ಷೆ (Ambition) ಮತ್ತು ಪ್ರಗತಿಯ (Growth)ಬಗ್ಗೆ ಹೇಳುತ್ತದೆ.

>> ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ ದೊಡ್ಡ ಅಂಗೈ ಅನ್ನು ಹೊಂದಿದ ಜನರು ಪ್ರತಿಯೊಂದು ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಇಂತಹ ವ್ಯಕ್ತಿಗಳು ತಮ್ಮ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿರುತ್ತಾರೆ ಹಾಗೂ ಪ್ರತಿಯೊಂದು ಕೆಲಸದಲ್ಲಿ ನಿಯಮಗಳನ್ನು ಪಾಲಿಸುತ್ತಾರೆ. ಈ ಜನರು ಆಡಿಟ್ (Audit) ಹಾಗೂ ಇನ್ಸ್ಪೆಕ್ಶನ್ (Inspection) ಕೆಲಸದಲ್ಲಿ ನಿಪುಣರಾಗಿರುತ್ತಾರೆ.

>> ಚಿಕ್ಕದಾದ ಅಂಗೈ ಹೊಂದಿದ ಜನರು ಹಿಂದೆ-ಮುಂದೆ ಯೋಚಿಸದೆಯೇ ಮಾತನಾಡುತ್ತಾರೆ.

ಇದನ್ನೂ ಓದಿ-ನಿಮ್ಮ ಕೈಯಲ್ಲೂ ಈ ರೇಖೆಗಳಿದ್ದರೆ ಅದೃಷ್ಟವೂ ಅದೃಷ್ಟ..!

>> ಸಾಮಾನ್ಯಗಾತ್ರಕ್ಕಿಂತ ದೊಡ್ಡ ಗಾತ್ರದ ಅಂಗೈ ಅನ್ನು ಹೊಂದಿದವರಿಗೆ, ಇತರರ ಮಾತುಗಳ ಮಧ್ಯೆಯ ಮಾತನಾಡುವ ಸ್ವಭಾವ ಇರುತ್ತದೆ.

>> ಯಾರ ಅಂಗೈ ಬೆರಳುಗಳು ಉದ್ದ, ತಿಳು ಹಾಗೂ ಸಮಾನ ಅಳತೆಯದ್ದಾಗಿರುತ್ತವೆಯೋ, ಅವರಲ್ಲಿ ಇಚ್ಛಾಶಕ್ತಿ (Will Power) ಹೆಚ್ಚಾಗಿರುತ್ತದೆ. ತಾವು ಅಂದುಕೊಂಡದ್ದನ್ನು ಇವರು ಸಾಧಿಸಿಯೇ ತೀರುತ್ತಾರೆ.

>> ವ್ಯಕ್ತಿಯ ಬಲಗೈ ಅಂಗೈ ಹಾಗೂ ಎಡಗೈ ಅಂಗೈ ಸಮನಾಗಿದ್ದರೆ, ಇಂತಹ ಜನರು ವ್ಯವಹಾರ ನಿಪುಣರಾಗಿರುತ್ತಾರೆ. ಇವರು ಸಮಾಜದಲ್ಲಿ ಪ್ರಸಿದ್ಧಿ ಪಡೆಯುತ್ತಾರೆ.

ಇದನ್ನೂ ಓದಿ- Vastu Tips: ಬೇಗ ಕಂಕಣ ಬಲ ಕೂಡಿ ಬರಲು ಮಲಗುವಾಗ ಈ ದಿಕ್ಕಿನೆಡೆ ತಲೆ ಇಟ್ಟು ಮಲಗಿ

>> ಯಾವ ವ್ಯಕ್ತಿಗಳ ಅಂಗೈ ಅವರ ಎತ್ತರದ ಹೋಲಿಕೆಯಲ್ಲಿ ಸಾಮಾನ್ಯವಾಗಿ ಉದ್ದಾಗಿದ್ದರೆ, ಅವರಲ್ಲಿ ಸಹಜ ಬುದ್ಧಿ (Common Sense) ಹೆಚ್ಚಾಗಿರುತ್ತದೆ. ಇಂತಹ ವ್ಯಕ್ತಿಗಳು ಕಲ್ಪನೆಗಳನ್ನು ಮಾಡುವ ಬದಲು ಕೆಲಸ ಮಾಡುವುದರಲ್ಲಿ ಹೆಚ್ಚು ಭರವಸೆ ಹೊಂದಿರುತ್ತಾರೆ.

>> ಇನ್ನೊಂದೆಡೆ ಎತ್ತರಕ್ಕೆ ಅನುಗುಣವಾಗಿ ಚಿಕ್ಕ ಅಂಗೈ ಹೊಂದಿರುವ ಜನರು ಯಾವುದೇ ಒಂದು ಸಂಗತಿಯನ್ನು ದೊಡ್ಡದಾದ ರೀತಿಯಲ್ಲಿ ತಿಳಿದುಕೊಳ್ಳಲು ಬಯಸುತ್ತಾರೆ. ಇಂತಹ ಜನರು ಯಾವುದೇ ರೀತಿಯ ಅಳತೆ ಇಲ್ಲದೆ ವಸ್ತುಗಳ ಪ್ರಮಾಣದ ಅಂದಾಜು ಹಚ್ಚುವಲ್ಲಿ ಹೆಚ್ಚು ನಿಪುಣರಾಗಿರುತ್ತಾರೆ.

ಇದನ್ನೂ ಓದಿ-Saturday Born Child: ಈ ದಿನ ಜನಿಸಿದವರ ಮೇಲೆ ಶನಿದೇವ ವಿಶೇಷ ಕೃಪೆ ತೋರುತ್ತಾನೆ

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಯನ್ನು ಹಾಗೂ ನಂಬಿಕೆಗಳ ಮೇಲೆ ಆಧರಿಸಿವೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News