Palmistry: ಕೈಯಲ್ಲಿ ನಿರ್ಮಾಣಗೊಂಡ ಈ ಆಕೃತಿ, ಸ್ಥಿತಿವಂತ ಜೀವನ ಸಂಗಾತಿ ಸಿಗುವ ಸಂಕೇತ

Palmistry: ಅಂಗೈಯಲ್ಲಿ (Palm) ಮೂಡುವ ಕ್ರಾಸ್ (Cross Symbol) ಚಿಹ್ನೆ ಅಥವಾ ಗುರುತು ವ್ಯಕ್ತಿಯೋರ್ವನಿಗೆ ಪ್ರಪಂಚದ ಎಲ್ಲಾ ಸುಖಗಳನ್ನು  ನೀಡುತ್ತದೆ ಅಥವಾ ಅಕಾಲಿಕ ಮೃತ್ಯುಗೆ ಕಾರಣವಾಗುತ್ತದೆ. ಆದರೆ, ಅಂಗೈಯಲ್ಲಿ ಈ ಕ್ರಾಸ್ ಎಲ್ಲಿದೆ? ಅದರ ಶುಭ-ಅಶುಭ (Good-Bad Impact) ಫಲಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Aug 17, 2021, 10:49 AM IST
  • ಹಸ್ತ ಸಾಮುದ್ರಿಕದಲ್ಲಿ ಕಾರ್ಸ್ ಚಿಹ್ನೆಗೆ ತುಂಬಾ ಮಹತ್ವ ನೀಡಲಾಗಿದೆ.
  • ಗುರುಪರ್ವತದ ಮೇಲಿರುವ ಕ್ರಾಸ್ ಚಿಹ್ನೆ ಎಲ್ಲಾ ರೀತಿಯ ಸುಖಗಳನ್ನು ನೀಡುತ್ತ್ತದೆ.
  • ಇತರೆ ಯಾವುದೇ ಜಾಗದಲ್ಲಿದ್ದರೆ ಅದು ಅಶುಭ ಫಲಗಳನ್ನು ನೀಡುತ್ತದೆ.
Palmistry: ಕೈಯಲ್ಲಿ ನಿರ್ಮಾಣಗೊಂಡ ಈ ಆಕೃತಿ, ಸ್ಥಿತಿವಂತ ಜೀವನ ಸಂಗಾತಿ ಸಿಗುವ ಸಂಕೇತ title=
Palmistry (File Photo)

ನವದೆಹಲಿ: Palmistry - ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಕೆಲವು ಚಿಹ್ನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಏಕೆಂದರೆ ಅವುಗಳು ಜೀವನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಸೂಚಿಸುತ್ತವೆ. ಉದಾಹರಣೆಗೆ- ತ್ರಿಕೋನ, ಸ್ವಸ್ತಿಕ, ನಕ್ಷತ್ರಗಳು ಅಥವಾ ಅಡ್ಡ ಗುರುತುಗಳು. ಅಂಗೈಯಲ್ಲಿ ಈ ಗುರುತುಗಳು ಇರುವ ಸ್ಥಳದ ಪ್ರಕಾರ, ಅವು ಫಲ ನೀಡುತ್ತವೆ. ಕ್ರಾಸ್ ಚಿಹ್ನೆಯ ಕುರಿತು ಹೇಳುವುದಾದರೆ, ಈ ಗುರುತು ಬಹಳ ವಿಶೇಷವಾಗಿದೆ ಏಕೆಂದರೆ ಇದು ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಹೊಂದಿದೆ. ಅದರ ಶುಭ ಮತ್ತು ಅಶುಭ ಪರಿಣಾಮಗಳನ್ನು ತಿಳಿಯಲು, ಅಂಗೈಯಲ್ಲಿ ಅದರ ಸ್ಥಾನವನ್ನು ತಿಳಿದುಕೊಳ್ಳುವುದು ಅವಶ್ಯಕ.

ಈ ರೀತಿಯ ಕ್ರಾಸ್ ಶುಭ ಫಲಗಳನ್ನು ನೀಡುತ್ತದೆ
ಒಬ್ಬ ವ್ಯಕ್ತಿಯು ತನ್ನ ಅಂಗೈಯಲ್ಲಿ ಗುರು ಪರ್ವತದ (Guru Parvat) ಮೇಲೆ ಕ್ರಾಸ್ ಗುರುತು ಹೊಂದಿದ್ದರೆ, ಅದು ತುಂಬಾ ಮಂಗಳಕರವಾಗಿರುತ್ತದೆ. ಕೈಯ ಮೊದಲ ಬೆರಳು ಅಥವಾ ತೋರು ಬೆರಳಿನ ಕೆಳಗಿರುವ ಉಬ್ಬನ್ನು ಗುರು ಪರ್ವತ ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಕ್ರಾಸ್ ಉಪಸ್ಥಿತಿಯು ವ್ಯಕ್ತಿಗೆ ಎಲ್ಲಾ ರೀತಿಯ ಸಂತೋಷವನ್ನು ನೀಡುತ್ತದೆ. ಅಷ್ಟೇ ಅಲ್ಲ, ಅಂತಹ ವ್ಯಕ್ತಿಯು ಉತ್ತಮ ಜೀವನ ಸಂಗಾತಿಯನ್ನು (Life Partner)ಕೂಡ ಪಡೆಯುತ್ತಾನೆ. ಅವನ ಜೀವನ ಸಂಗಾತಿ ಕೇವಲ ಉನ್ನತ ಶಿಕ್ಷಣ ಪಡೆದವನಾಗಿರದೆ, ಸ್ಥಿತಿವಂತ ಕುಟುಂಬಕ್ಕೂ ಸಂಬಂಧ ಹೊಂದಿರುತ್ತಾನೆ. ಇದೇ ವೇಳೆ, ಅವರ ವೈವಾಹಿಕ  (Marriage) ಜೀವನವೂ ಜೀವನವೂ ಕೂಡ ಸುಖದಿಂದ ಕೂಡಿರುತ್ತದೆ. ಒಟ್ಟಾರೆಯಾಗಿ, ಅಂತಹ ಜನರು ಪ್ರತಿಯೊಂದು ವಿಷಯದಲ್ಲೂ ಮತ್ತು ವಿಶೇಷವಾಗಿ ಮದುವೆಯ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ (Lucky).

ಈ ರೀತಿಯ ಕ್ರಾಸ್ ಗುರುತು ಅಶುಭವಾಗಿರುತ್ತದೆ
Palmistry
- ಕ್ರಾಸ್ ಚಿಹ್ನೆ ಕೇವಲ ಗುರುಪರ್ವದದ ಮೇಲೆ ಮಾತ್ರ ಇದ್ದರೆ ಅದು ಶುಭವಾಗಿರುತ್ತದೆ. ಒಂದು ವೇಳೆ ಅದು ಅಂಗಿಯ ಬೇರೆ ಜಾಗದಲ್ಲಿದ್ದರೆ, ಅದು ಉತ್ತಮ ಸಂಕೇತಗಳನ್ನು ನೀಡುವುದಿಲ್ಲ. 

>> ಕೇತು ಪರ್ವತದ ಮೇಲೆ ಕ್ರಾಸ್ ಚಿಹ್ನೆ ಇದ್ದರೆ, ಅದು ಜಾತಕದ ವ್ಯಕ್ತಿಯ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಲು ಕಾರಣವಾಗುತ್ತದೆ. 
>> ತಮ್ಮ ಕೈಯಲ್ಲಿ ಬುಧ ಪರ್ವತದ ಮೇಲೆ ಕ್ರಾಸ್  ಹೊಂದಿರುವ ಜನರು, ವಿಶ್ವಾಸಾರ್ಹರಲ್ಲ. ಅಂತಹ ಜನರು ಮೋಸ ಮತ್ತು ಸುಳ್ಳು ಹೇಳುವುದರಲ್ಲಿ ನಿಪುಣರು.
>> ಶನಿ ಪರ್ವತದ ಮೇಲಿನ ಕ್ರಾಸ್ ಚಿಹ್ನೆಯು  ದೊಡ್ಡ ಜಗಳದಲ್ಲಿ ಸಿಕ್ಕಿಹಾಕಿಕೊಳ್ಳುವ ಅಥವಾ ದೊಡ್ಡ ಅಪಘಾತಕ್ಕೆ ಬಲಿಯಾಗುವ ಸಂಕೇತವಾಗಿದೆ. ಅಂತಹ ಜನರು ಅಕಾಲದಲ್ಲಿ ಜಗತ್ತನ್ನು ತೊರೆಯುತ್ತಾರೆ.
>> ಪ್ರತಿಷ್ಠೆಯ ಅಂಶವಾಗಿರುವ ಸೂರ್ಯನ ಬೆಟ್ಟದ ಮೇಲೆಇರುವ ಕ್ರಾಸ್ ಚಿಹ್ನೆಯು ಮಾನಹಾನಿಗೆ ಕಾರಣವಾಗುತ್ತದೆ. ಇದೇ ವೇಳೆ, ಈ ಗುರುತು ಉದ್ಯಮಿಗಳಿಗೆ ಮತ್ತೆ ಮತ್ತೆ ನಷ್ಟವನ್ನು ಉಂಟುಮಾಡುತ್ತದೆ.
>> ಇದಲ್ಲದೇ, ಹೃದಯದ ರೇಖೆಯಲ್ಲಿ ಕ್ರಾಸ್ ಚಿಹ್ನೆ ಇದ್ದರೆ,  ಆ ವ್ಯಕ್ತಿಗೆ ಹೃದಯ ಸಂಬಂಧಿ ಕಾಯಿಲೆಗಳಿರಬಹುದು.
>> ಇದೇ ವೇಳೆ, ಲೈಫ್‌ಲೈನ್‌ನಲ್ಲಿ ಕ್ರಾಸ್ ಚಿಹ್ನೆ ಇದ್ದರೆ ಅ ವ್ಯಕ್ತಿಗೆ ಸಾವಿನಂತಹ ನೋವನ್ನು ನೀಡುತ್ತದೆ.

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಹಿಂದೂಸ್ತಾನ್ ಖಚಿತಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ಕ್ಷೇತ್ರಕ್ಕೆ ಸಂಬಂಧಪಟ್ಟ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News