Palmistry: ಉಬ್ಬರ ಹೊಂದಿರುವ ಮತ್ತು ಉತ್ತಮ ಸ್ಥಿತಿಯಲ್ಲಿರುವ ಈ ಪರ್ವತ ಜನರನ್ನು ಶ್ರೀಮಂತರನ್ನಾಗಿಸುತ್ತದೆ

Palmistry - ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈಯಲ್ಲಿನ ಪರ್ವತಗಳಿಗೆ ವಿಶೇಷ ಮಹತ್ವವಿದೆ. ಜೀವನದಲ್ಲಿನ ಸಂಪತ್ತಿನ ಸ್ಥಿತಿಯು ಹಸ್ತದ ಕೇತು ಪರ್ವತದಿಂದ ತಿಳಿಯುತ್ತದೆ. ಮಣಿಕಟ್ಟುವಿನ ಬಳಿ ಕೇತು ಪರ್ವತವಿರುತ್ತದೆ ಮತ್ತು ಅದು ನಿಮಗಿರುವ ಅದೃಷ್ಟದವನ್ನು ಸೂಚಿಸುತ್ತದೆ.  

Written by - Nitin Tabib | Last Updated : Mar 22, 2022, 03:55 PM IST
  • ಜೀವನದಲ್ಲಿಯ ಪ್ರಗತಿಯ ಸೂಚಕ ಇದು
  • ಈ ಜನರು ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ.
  • ಈ ಜನರು ಬೇಗ ಶ್ರಿಮಂತರಾಗುತ್ತಾರೆ.
Palmistry: ಉಬ್ಬರ ಹೊಂದಿರುವ ಮತ್ತು ಉತ್ತಮ ಸ್ಥಿತಿಯಲ್ಲಿರುವ ಈ ಪರ್ವತ ಜನರನ್ನು ಶ್ರೀಮಂತರನ್ನಾಗಿಸುತ್ತದೆ title=
Palmistry (File Photo)

ನವದೆಹಲಿ: Palmistry - ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹಸ್ತ ಪರ್ವತಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ತೋರು ಬೆರಳಿನ ಕೆಳಗಿನ ಭಾಗವನ್ನು ಗುರು ಪರ್ವತ ಎಂದು ಕರೆಯಲಾಗುತ್ತದೆ. ಮಧ್ಯದ ಬೆರಳಿನ ಕೆಳಗಿನ ಭಾಗವನ್ನು ಶನಿ ಪರ್ವತ (Saturn Mountain) ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ, ಉಂಗುರದ ಬೆರಳಿನ ಕೆಳಗೆ ಸೂರ್ಯನ ಪರ್ವತವಿದ್ದರೆ, ಕಿರುಬೆರಳಿನ ಕೆಳಗೆ ಬುಧದ ಪರ್ವತವಿದೆ. ಇದಲ್ಲದೇ ಅಂಗೈಯಲ್ಲಿ ಕೇತು ಪರ್ವತವೂ ಇದೆ. ಈ ಪರ್ವತದಿಂದ ಜೀವನದಲ್ಲಿನ ಸಂಪತ್ತಿನ ಸ್ಥಿತಿಯ ಕುರಿತು ಮಾಹಿತಿ ಸಿಗುತ್ತದೆ. ಅಂಗೈಯಲ್ಲಿರುವ ಕೇತು ಪರ್ವತವು ಇನ್ನೂ ಯಾವ ಯಾವ ಸಂಗತಿಗಳನ್ನು ಹೇಳುತ್ತದೆ ತಿಳಿದುಕೊಳ್ಳೋಣ ಬನ್ನಿ,

ರಾಹು ಪರ್ವತ (Rahu Mountain) ಜೀವನದಲ್ಲಿನ ಸಿರಿವಂತಿಕೆ ಸೂಚಕ
ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ಅಂಗೈಯಲ್ಲಿರುವ ಕೇತು ಪರ್ವತವು ಮಣಿಕಟ್ಟು ಮತ್ತು ಚಂದ್ರ ಪರ್ವತದ ಮೇಲ್ಭಾಗವನ್ನು ವಿಭಜಿಸುವ ವಿಧಿಯ ರೇಖೆಯ (Rahu Line In Hand,) ಮೂಲದಲ್ಲಿದೆ. ಕೈಯಲ್ಲಿರುವ ಕೇತು ಪರ್ವತವು ಬಲಿಷ್ಠ ಮತ್ತು ಉಬ್ಬರವಾಗಿ ಕಾಣಿಸುತ್ತಿದ್ದು, ಜೊತೆಗೆ ಅದೃಷ್ಟ ರೇಖೆಯು ಉತ್ತಮವಾಗಿದ್ದರೆ, ವ್ಯಕ್ತಿಯು ತುಂಬಾ ಅದೃಷ್ಟಶಾಲಿಯಾಗಿರುತ್ತಾನೆ. ಇಂತಹ ಜನರಿಗೆ ಅವರ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷಗಳು ಪ್ರಾಪ್ತಿಯಾಗುತ್ತವೆ. ಒಂದು ವೇಳೆ ಈ ಜನರು ಬಡ ಕುಟುಂಬದಲ್ಲಿ ಜನಿಸಿದರೂ ಕೂಡ ಇವರು ತಮ್ಮ ಕಾರ್ಯ ಹಾಗೂ ಅದೃಷ್ಟದ ಕಾರಣ ಶ್ರೀಮಂತರ ವರ್ಗದಲ್ಲಿ ಪರಿಗಣಿಸಲ್ಪಡುತ್ತಾರೆ. ವ್ಯಕ್ತಿಯ ಅಂಗೈಯಲ್ಲಿರುವ ಕೇತು ಪರ್ವತವು ತುಂಬಾ ಬಲವಾಗಿದ್ದರೆ ಮತ್ತು ಅದೃಷ್ಟ ರೇಖೆಯು ದುರ್ಬಲವಾಗಿದ್ದರೆ, ಅಂತಹ ವ್ಯಕ್ತಿ ಬಾಲ್ಯದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ, ವ್ಯಕ್ತಿಯ ಮನೆಯ ಆರ್ಥಿಕ ಸ್ಥಿತಿಯು ಕ್ರಮೇಣ ದುರ್ಬಲಗೊಳ್ಳುತ್ತದೆ ಮತ್ತು ಶಿಕ್ಷಣ ಪಡೆಯುವಲ್ಲಿ ಕೂಡ ಅಡಚಣೆ ಎದುರಾಗುತ್ತದೆ. ಕೆಲವರು ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ನಿಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ-ಮಲಗುವ ಮುನ್ನ ಈ ಆಹಾರ ಸೇವಿಸಿದರೆ ಸುಖ ನಿದ್ದೆ ಪ್ರಾಪ್ತಿಯಾಗುತ್ತದೆ

ಹಸ್ತದ ಕೇತು ಪರ್ವತವು ಉಬ್ಬರವಾಗಿರದಿದ್ದರೆ ಅಥವಾ ಬಲವಾಗಿರದಿದ್ದರೆ ಮತ್ತು ಅದೃಷ್ಟ ರೇಖೆಯು ಬಲವಾಗಿರದಿದ್ದರೆ, ವ್ಯಕ್ತಿಯು ಬಡತನವನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಕೇತು ಪರ್ವತದ ಉಬ್ಬರದ ಜೊತೆಗೆ ಅದೃಷ್ಟದ ರೇಖೆಯು (Bhagya Rekha) ಸ್ಪಷ್ಟವಾಗಿದ್ದರೆ ವ್ಯಕ್ತಿಯು ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾನೆ.

ಇದನ್ನೂ ಓದಿ-ಈ 5 ಕಾಯಿಲೆಗಳಿಂದ ಬಳಲುತ್ತಿದ್ದಾರಂತೆ ದೇಶದ ಶೇ. 35ರಷ್ಟು ಜನ... ನಿಮಗಿದೆಯೇ ತಿಳಿದುಕೊಳ್ಳಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News