Diabetes & BP: ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹವನ್ನು ಕೂಡ ನಿಯಂತ್ರಿಸುತ್ತೆ ಈ ಎಣ್ಣೆ!

Diabetes BP Control: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹಾಳಾದ  ಜೀವನಶೈಲಿಯಿಂದ ಹೃದ್ರೋಗ, ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಎಳ್ಳೆಣ್ಣೆ ಒಂದು ವರದಾನ ಎಂಬಂತೆ ಸಾಬೀತಾಗುತ್ತದೆ.  ಇದನ್ನು ದಿನನಿತ್ಯ ಸೇವಿಸುವುದರಿಂದ ನಿಮಗೆ ಅದ್ಭುತವಾದ ಲಾಭಗಳು ಸಿಗುತ್ತವೆ.  

Written by - Nitin Tabib | Last Updated : Mar 31, 2023, 02:05 PM IST
  • ಇದು ಸೂರ್ಯನ ಕಿರಣಗಳಿಂದ ಚರ್ಮವನ್ನು ಹಾನಿಗೊಳಗಾಗಲು ಬಿಡುವುದಿಲ್ಲ.
  • ವರದಿಯೊಂದರ ಪ್ರಕಾರ, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳು ಎಳ್ಳಿನ ಎಣ್ಣೆಯಲ್ಲಿ ಕಂಡುಬರುತ್ತವೆ,
  • ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಎಳ್ಳಿನ ಎಣ್ಣೆಯ ಪ್ರಯೋಜನಗಳನ್ನು ಇಲ್ಲಿ ತಿಳಿಯಿರಿ.
Diabetes & BP: ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹವನ್ನು ಕೂಡ ನಿಯಂತ್ರಿಸುತ್ತೆ ಈ ಎಣ್ಣೆ! title=
ಎಳ್ಳೆಣ್ಣೆ ಆರೋಗ್ಯ ಲಾಭಗಳು

Sesame Oil Benefits: ಎಳ್ಳೆಣ್ಣೆಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಹೃದಯದ ಆರೋಗ್ಯದಿಂದ ಹಿಡಿದು ಮಧುಮೇಹ ನಿಯಂತ್ರಣದವರೆಗೆ ಎಳ್ಳೆಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಪ್ರತಿದಿನ ಅಡುಗೆ ಎಣ್ಣೆಯಾಗಿ ಎಳ್ಳಿನ ಎಣ್ಣೆಯನ್ನು ಬಳಸುತ್ತಿದ್ದರೆ, ಅದರಲ್ಲಿರುವ ಪೋಷಕಾಂಶಗಳು ಹೃದಯವನ್ನು ಬಲಪಡಿಸುತ್ತದೆ ಮತ್ತು ಉರಿಯೂತದಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಸೂರ್ಯನ ಕಿರಣಗಳಿಂದ ಚರ್ಮವನ್ನು ಹಾನಿಗೊಳಗಾಗಲು ಬಿಡುವುದಿಲ್ಲ. ವರದಿಯೊಂದರ ಪ್ರಕಾರ, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳು ಎಳ್ಳಿನ ಎಣ್ಣೆಯಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಎಳ್ಳಿನ ಎಣ್ಣೆಯ ಪ್ರಯೋಜನಗಳನ್ನು ಇಲ್ಲಿ ತಿಳಿಯಿರಿ.

ಹೃದಯದ ಆರೋಗ್ಯಕ್ಕೆ ಉತ್ತಮ
ಎಳ್ಳೆಣ್ಣೆ ಹೃದಯದ ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ. ಒಮೆಗಾ-3, ಒಮೆಗಾ-6 ಮತ್ತು ಒಮೆಗಾ-9 ಕೊಬ್ಬಿನಾಮ್ಲಗಳ ಸಮತೋಲಿತ ಅನುಪಾತವು ಈ ಎಣ್ಣೆಯಲ್ಲಿ ಕಂಡುಬರುತ್ತದೆ. ಒಮೆಗಾ-3 ಮತ್ತು ಒಮೆಗಾ-6 ಬಹುಅಪರ್ಯಾಪ್ತವಾಗಿವೆ. ಆದರೆ, ಒಮೆಗಾ-9 ಕೊಬ್ಬಿನಾಮ್ಲವು ಮೊನೊಸಾಚುರೇಟೆಡ್ ಆಗಿದೆ. ಅಧ್ಯಯನದ ಪ್ರಕಾರ, ಈ ಆರೋಗ್ಯಕರ ಕೊಬ್ಬನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿದರೆ, ಹೃದ್ರೋಗದ ಅಪಾಯವು ಕಡಿಮೆಯಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಎಳ್ಳಿನ ಎಣ್ಣೆಯು LDL ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉರಿಯೂತವನ್ನು ಕಡಿಮೆ ಮಾಡುತ್ತದೆ
ಎಳ್ಳಿನ ಎಣ್ಣೆಯನ್ನು ಉರಿಯೂತದ ಔಷಧವಾಗಿ ಬಳಸಲಾಗುತ್ತದೆ. ಇದನ್ನು ಕೀಲು ನೋವು, ಹಲ್ಲುನೋವು, ಕಡಿತ ಅಥವಾ ಪ್ರೀ ಮೆನ್ಸ್ಟ್ರುವಲ್ ಸೆಳೆತಗಳಿಗೆ ಬಳಸಲಾಗುತ್ತದೆ. ಇದನ್ನು ಬಹಳ ಹಿಂದಿನಿಂದಲೂ ಭಾರತೀಯ ಮನೆಗಳಲ್ಲಿ ಬಳಸಲಾಗುತ್ತಿದೆ.

ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
ಎಳ್ಳೆಣ್ಣೆ ಮಧುಮೇಹ ರೋಗಿಗಳಿಗೆ ರಾಮಬಾಣ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಯಸ್ಕರು ಎಳ್ಳಿನ ಎಣ್ಣೆಯನ್ನು ಸೇವಿಸಿದರೆ, ಅವರ ಫಾಸ್ಟಿಂಗ್ ಬ್ಲಡ್ ಶುಗರ್ ಮಟ್ಟ ಮತ್ತು ಹಿಮೋಗ್ಲೋಬಿನ್ A1C ನಲ್ಲಿ ಇಳಿಕೆ ಕಂಡುಬರುತ್ತದೆ ಎಂದು ಅಧ್ಯಯನವೊಂದರಲ್ಲಿ ಕಂಡುಬಂದಿದೆ.

ಒತ್ತಡ-ಖಿನ್ನತೆ ಮಾಯವಾಗುತ್ತವೆ
ಇಂದಿನ ಜೀವನಶೈಲಿಯಿಂದಾಗಿ ಖಿನ್ನತೆಯ ಸಮಸ್ಯೆ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಯುವಜನತೆಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಕಂಡು ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಎಳ್ಳಿನ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ಬಳಸುವುದರಿಂದ ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದು ಒತ್ತಡ ಮತ್ತು ಖಿನ್ನತೆಯಿಂದ ಹೊರಬರಲು ನಮಗೆ ಸಾಕಷ್ಟು ಸಹಾಯ ಮಾಡುತ್ತದೆ.

ಇದನ್ನೂ ಓದಿ-Health Tips: ಶರೀರವನ್ನು ನಿರ್ವಿಷಗೊಳಿಸಬೇಕೆ? ಈ ಸೂಪರ್ ಫುಡ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ!

ಚರ್ಮದ ಹಾನಿ
ಸೂರ್ಯನ ಬೆಳಕಿನಿಂದ ಅನೇಕ ಜನರು ಚರ್ಮಕ್ಕೆ ಹಾನಿಯಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಎಳ್ಳು ಎಣ್ಣೆಯು ಪ್ರಯೋಜನಕಾರಿಯಾಗಿದೆ. ಎಳ್ಳಿನ ಎಣ್ಣೆಯಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಯುವಿ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯಕವಾಗಿವೆ ಎಂದು ಹಲವು ಸಂಶೋಧನೆಗಳು ಕಂಡುಕೊಂಡಿವೆ. ಈ ತೈಲವು ಯುವಿ ಕಿರಣಗಳನ್ನು ಶೇಕಡಾ 30 ರಷ್ಟು ತಡೆಯುವ ಸಾಮರ್ಥ್ಯವನ್ನು ಹೊಂದಿವೆ. ಉಳಿದ ತೈಲಗಳು ಇದನ್ನು ಶೇ. 20 ರಷ್ಟು ಮಾತ್ರ ತಡೆಯಲು ಶಕ್ತವಾಗಿವೆ. 

ಇದನ್ನೂ ಓದಿ-ಕೆಲವೇ ಗಂಟೆಗಳಲ್ಲಿ ಮೇಷ ರಾಶಿಯಲ್ಲಿ ತ್ರಿಗ್ರಹಿ ಯೋಗ, 5 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿಯ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿವೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News