Night Skin Care: ಹೊಳೆಯುವ ತ್ವಚೆಗಾಗಿ ಸರಳ ಮನೆಮದ್ದು

Skin Care Tips: ನೈಸರ್ಗಿಕವಾಗಿ ಕಾಂತಿಯುತ ತ್ವಚೆಗಾಗಿ ಅಡುಗೆಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ಸಹಕಾರಿ ಆಗಿವೆ. ಅಂತಹ ಆಹಾರ ಪದಾರ್ಥಗಳಲ್ಲಿ ಹಾಲು, ಅಕ್ಕಿ ಸಹ ಪ್ರಮುಖವಾಗಿವೆ. 

Written by - Yashaswini V | Last Updated : Jun 22, 2022, 02:21 PM IST
  • ಮುಖದ ಮೈಬಣ್ಣವನ್ನು ಸುಂದರವಾಗಿಸಲು ಈ ನೈಟ್ ಸ್ಕಿನ್ ಕೇರ್ ಟಿಪ್ಸ್ ನಿಮಗೆ ಪ್ರಯೋಜನಕಾರಿ
  • ನೈಟ್ ಸ್ಕಿನ್ ಕೇರ್ ಟಿಪ್ಸ್ ಅಳವಡಿಸಿಕೊಂಡರೆ ತ್ವಚೆಯನ್ನು ಆರೋಗ್ಯಕರವಾಗಿ ಮತ್ತು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಬಹುದು
  • ನೈಸರ್ಗಿಕವಾಗಿ ಕಾಂತಿಯುತ ತ್ವಚೆಗಾಗಿ ಅಡುಗೆಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ಸಹಕಾರಿ ಆಗಿವೆ
Night Skin Care: ಹೊಳೆಯುವ ತ್ವಚೆಗಾಗಿ ಸರಳ ಮನೆಮದ್ದು  title=
Night skin care

ಚರ್ಮದ ಆರೈಕೆ:  ಇತ್ತೀಚಿನ ಒತ್ತಡದ ಜೀವನಶೈಲಿಯಿಂದಾಗಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಹಲವರು ವಯಸ್ಸಾದಂತೆ ಕಾಣುತ್ತಾರೆ. ಇದಲ್ಲದೆ, ಇನ್ನೂ ಕೆಲವರಲ್ಲಿ ಚರ್ಮದ ಟೋನ್ ಮರೆಯಾಗಲು ಪ್ರಾರಂಭಿಸುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲು ಮಾರುಕಟ್ಟೆಯಲ್ಲಿ ಹಲವು ಬಗೆಯ ಕ್ರೀಮ್ ಗಳು ಲಭ್ಯವಿವೆ. ಆದರೂ, ನೈಟ್ ಸ್ಕಿನ್ ಕೇರ್ ಟಿಪ್ಸ್ ಅಳವಡಿಸಿಕೊಂಡರೆ ತ್ವಚೆಯನ್ನು ಆರೋಗ್ಯಕರವಾಗಿ ಮತ್ತು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಬಹುದು. ನೈಸರ್ಗಿಕವಾಗಿ ಕಾಂತಿಯುತ ತ್ವಚೆಗಾಗಿ ಅಡುಗೆಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ಸಹಕಾರಿ ಆಗಿವೆ. ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಹಾಲು ಮತ್ತು ಅಕ್ಕಿಯಿಂದ ಮೈಬಣ್ಣವನ್ನು ಸುಧಾರಿಸಬಹುದು. ಅದು ಹೇಗೆ ಎಂದು ತಿಳಿಯೋಣ...

ರಾತ್ರೋರಾತ್ರಿ ಕಾಂತಿಯುತ ತ್ವಚೆ ಪಡೆಯಲು ಸಹಕಾರಿ ಹಾಲು-ಅಕ್ಕಿ!
ಮುಖದ  ಬಣ್ಣವನ್ನು ಸುಂದರವಾಗಿಸಲು ಈ ನೈಟ್ ಸ್ಕಿನ್ ಕೇರ್ ಟಿಪ್ಸ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಆದರೆ, ಈ ನೈಸರ್ಗಿಕ ಆರೈಕೆಯು ಸಹಜವಾಗಿ ಹೊಳಪನ್ನು ಪಡೆಯಲು ಸಹಕಾರಿಯೇ ಹೊರತು ತುಂಬಾ ಬೆಳ್ಳಗಾಗುವುದು ಎಂದರ್ಥವಲ್ಲ ಎಂಬುದನ್ನು ನೆನಪಿನಲ್ಲಿಡಿ. 

ಇದನ್ನೂ ಓದಿ- Weight loss By Garlic: ಬೆಳ್ಳುಳ್ಳಿಯಿಂದಲೂ ತೂಕ ಇಳಿಕೆ ಸಾಧ್ಯ- ಇಲ್ಲಿದೆ ಸರಿಯಾದ ಮಾರ್ಗ

ತ್ವಚೆಗೆ ಅಕ್ಕಿ ಮತ್ತು ಎಳ್ಳು:
ಸೂರ್ಯನ ಬೆಳಕು ಮತ್ತು ಕೊಳಕಿನಿಂದಾಗಿ, ಸತ್ತ ಜೀವಕೋಶಗಳು ಮುಖದ ಮೇಲೆ ಸಂಗ್ರಹವಾಗುತ್ತವೆ, ಇದರಿಂದಾಗಿ ಮೈಬಣ್ಣವು ಕಪ್ಪಾಗಿ ಕಾಣಲು ಪ್ರಾರಂಭಿಸುತ್ತದೆ. ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕಲು, ಒಂದು ಬಟ್ಟಲಿನಲ್ಲಿ 3-3 ಚಮಚ ಅಕ್ಕಿ ಮತ್ತು ಎಳ್ಳನ್ನು ನೆನೆಸಿಡಿ. ಅವುಗಳನ್ನು ದಿನವಿಡೀ ನೆನೆಯಲು ಬಿಡಿ ಮತ್ತು ನಂತರ ರಾತ್ರಿಯಲ್ಲಿ ಅವುಗಳನ್ನು ಪೇಸ್ಟ್ ಮಾಡಿ ಮತ್ತು 15 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ಸ್ಕ್ರಬ್ ಮಾಡಿದ ನಂತರ ಮುಖವನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮುಖಕ್ಕೆ ಹಾಲಿನ ಪ್ರಯೋಜನಗಳು:
ನೈಸರ್ಗಿಕ ಹೊಳಪನ್ನು ಪಡೆಯಲು, ಮಲಗುವ ಮುನ್ನ ಹಾಲನ್ನು ಬಳಸಬಹುದು. ರಾತ್ರಿಯ ಚರ್ಮದ ಆರೈಕೆಯಲ್ಲಿ ಈ ಪರಿಹಾರವನ್ನು ಅಳವಡಿಸಿಕೊಳ್ಳಲು, ಹಸಿ ಹಾಲಿನಲ್ಲಿ ಹತ್ತಿಯ ತುಂಡನ್ನು ನೆನೆಸಿ ಮುಖ ಮತ್ತು ಕುತ್ತಿಗೆಗೆ ಚೆನ್ನಾಗಿ ಅನ್ವಯಿಸಿ. ಇಡೀ ರಾತ್ರಿ ಹಾಗೇ ಬಿಡಿ. ಮರುದಿನ ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಮನೆಮದ್ದಿನಿಂದ, ಕಲೆಗಳನ್ನು ತೆಗೆದುಹಾಕುವುದರೊಂದಿಗೆ ನೈಸರ್ಗಿಕ ಹೊಳಪು ಬರುತ್ತದೆ.

ಇದನ್ನೂ ಓದಿ- ಈ ನಾಲ್ಕು ವಸ್ತುಗಳಿಂದ ದೂರವಿದ್ದರೆ ಕೊಲೆಸ್ಟ್ರಾಲ್ ಸಮಸ್ಯೆ ಕಾಡುವುದೇ ಇಲ್ಲ

ತ್ವಚೆಯ ಆರೈಕೆಗೆ ತೆಂಗಿನಎಣ್ಣೆ:
ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಆಂಟಿಬ್ಯಾಕ್ಟೀರಿಯಲ್ ಮತ್ತು ಆರ್ಧ್ರಕ ಏಜೆಂಟ್ ಚರ್ಮವನ್ನು ಆರೋಗ್ಯಕರವಾಗಿಸುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ. ನೀವು ಡಾರ್ಕ್ ಸರ್ಕಲ್ ಅನ್ನು ತೆಗೆದುಹಾಕಲು ಬಯಸಿದರೆ, ತೆಂಗಿನ ಎಣ್ಣೆಯಲ್ಲಿ ವಿಟಮಿನ್-ಸಿ ಎಣ್ಣೆಯನ್ನು ಬೆರೆಸಿ, ಮಲಗುವ ಮೊದಲು ನೀವು ಅದನ್ನು ಮುಖಕ್ಕೆ ಅನ್ವಯಿಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News