Nag Panchami 2022: ಪಂಚಮಿಯ ದಿನ ಅಪ್ಪಿ-ತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ, ಜೀವನವಿಡಿ ಕಷ್ಟ ಅನುಭವಿಸಬೇಕಾಗುತ್ತದೆ

Nag Panchami 2022 Date: ನಾಗ ಪಂಚಮಿಯ ದಿನದಂದು ಹಾವಿನ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ದಿನವನ್ನು ಜಾತಕದಲ್ಲಿನ ಕಾಲಸರ್ಪ ದೋಷವನ್ನು ತೊಡೆದುಹಾಕಲು ಉತ್ತಮ ದಿನವೆಂದು ಪರಿಗಣಿಸಲಾಗುತ್ತದೆ. ಆದರೆ ಈ ದಿನ ತಿಳಿದು ಅಥವಾ ತಿಳಿಯದೆ ಮಾಡಲಾಗುವ ಕೆಲ ತಪ್ಪುಗಳು ಜೀವನದಲ್ಲಿ ದುಬಾರಿಯಾಗಿ ಪರಿಣಮಿಸಲಿವೆ.  

Written by - Nitin Tabib | Last Updated : Jul 31, 2022, 03:12 PM IST
  • ನಾಗ ಪಂಚಮಿಯ ದಿನ ಪೂಜೆ-ವ್ರತ ಕೈಗೊಳ್ಳಲು ಮರೆಯಬೇಡಿ
  • ನಾಗ ದೇವತೆಯ ಜೊತೆಗೆ ಶಿವನ ಕೃಪಾಕಟಾಕ್ಷ ಕೂಡ ಲಭಿಸಲಿದೆ
  • ನಾಗ ಪಂಚಮಿಯ ದಿನ ಕೆಲ ನಿಯಮಗಳನ್ನು ಅನುಸರಿಸುವುದು ತುಂಬಾ ಮುಖ್ಯ
Nag Panchami 2022: ಪಂಚಮಿಯ ದಿನ ಅಪ್ಪಿ-ತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ, ಜೀವನವಿಡಿ ಕಷ್ಟ ಅನುಭವಿಸಬೇಕಾಗುತ್ತದೆ title=
Nag Panchami 2022

Nag Panchami Vrat Niyam Puja Vidhi: ನಾಗ ಪಂಚಮಿಯ ದಿನ ನಾಗದೇವತೆಯನ್ನು ಪೂಜಿಸಿ, ಹಾಲು ನೈವೇದ್ಯ ಮಾಡಬೇಕೆಂಬ ನಿಯಮವಿದೆ. ಹಾವುಗಳ ಆರಾಧನೆಯ ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ನಾಗ ಪಂಚಮಿ 2ನೇ ಆಗಸ್ಟ್ 2022ರಂದು, ಮಂಗಳವಾರದಂದು ಬರಲಿದೆ. ಸನಾತನ ಧರ್ಮದಲ್ಲಿ, ಅನೇಕ ದೇವ-ದೇವತೆಗಳ ಸಂಬಂಧವನ್ನು ನಾಗದೇವರ ಜೊತೆ ಕಲ್ಪಿಸಲಾಗಿದೆ. ನೀಗಾಗಿ ನಾಗರ ಹಾವನ್ನು ಪೂಜಿಸಲಾಗುತ್ತದೆ. ದೇವಾಧಿದೇವ ಮಹಾದೇವ ತನ್ನ ಕುತ್ತಿಗೆಗೆ ಹಾವನ್ನು ಹೊತ್ತಿದ್ದಾನೆ, ವಿಷ್ಣುವು ಶೇಷನಾಗನ ಹಾಸಿಗೆಯ ಮೇಲೆ ಮಲಗುತ್ತಾನೆ. ಗಣಪತಿಯು ಹಾವನ್ನು ಜನಿವಾರದ ರೂಪದಲ್ಲಿ ಧರಿಸಿದ್ದಾನೆ. ಹೀಗಾಗಿ, ನಾಗರ ಪಂಚಮಿಯ ದಿನ ಹಾವನ್ನು ಪೂಜಿಸಬೇಕು ಮತ್ತು ನಾಗದೇವತೆಗೆ ಕಿರಿಕಿರಿ ಉಂಟುಮಾಡುವ ಯಾವುದೇ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು. .

ನಾಗ ಪಂಚಮಿಯ ದಿನ ಈ ವಿಷಯಗಳನ್ನು ನೆನಪಿನಲ್ಲಿಡಿ
ನಾಗ ಪಂಚಮಿಯ ದಿನವು ಸರ್ಪಗಳನ್ನು ಮೆಚ್ಚಿಸಲು ಉತ್ತಮ ದಿನವಾಗಿದೆ. ನಾಗ ಪಂಚಮಿಯ ದಿನದಂದು ಉಪವಾಸ ಕೈಗೊಳ್ಳಬೇಕು. ಅವುಗಳ ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಪೂಜಿಸಬೇಕು. ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಮತ್ತು ನಾಗ ದೇವರನ್ನು ಪ್ರಾರ್ಥಿಸುವುದು ಕೂಡ ಉತ್ತಮ ಪರಿಹಾರವಾಗಿದೆ. ಹೀಗೆ ಮಾಡುವುದರಿಂದ ಶಿವ, ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತಿಯಾಗುತದೆ. ಇದಲ್ಲದೆ ಈ ದಿನ ಕೆಲ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು.

>> ನಾಗ ಪಂಚಮಿಯ ದಿನ ಸೂಜಿ ದಾರ ಬಳಸುವದನ್ನು ಆದಷ್ಟು ತಪ್ಪಿಸಿ.

>> ನಾಗ ಪಂಚಮಿಯ ದಿನದಂದು ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ.

>> ತಮ್ಮ ಜಾತಕದಲ್ಲಿ ರಾಹು-ಕೇತು ಗ್ರಹಗಳು ಅಶುಭ ಸ್ಥಾನದಲ್ಲಿರುವವರು ಎಂದಿಗೂ ಕೂಡ ಸರ್ಪಗಳಿಗೆ ಹಾನಿ ಮಾಡುವ ತಪ್ಪನ್ನು ಮಾಡಬಾರದು. ಬದಲಿಗೆ, ನಾಗ ಪಂಚಮಿಯ ದಿನದಂದು, ನಾಗದೇವತೆಯ ವಿಗ್ರಹಕ್ಕೆ ಅಥವಾ ಬೆಳ್ಳಿಯಿಂದ ಮಾಡಿದ ನಾಗ-ನಾಗಿನ ಜೋಡಿಗೆ ಹಾಲಿನೊಂದಿಗೆ ಅಭಿಷೇಕ ಮಾಡುವ ಮೂಲಕ ತಮ್ಮ ತಪ್ಪುಗಳಿವೆ ಕ್ಷಮೆಯನ್ನು ಕೋರಿ. ಈ ಜನ್ಮದಲ್ಲಾಗಲಿ ಅಥವಾ ಹಿಂದಿನ ಜನ್ಮದಲ್ಲಾಗಲಿ ಹಾವುಗಳು ಕೊಲ್ಲಲ್ಪಟ್ಟಿದ್ದರೆ ಅಥವಾ ಯಾವುದೇ ಹಾನಿಯನ್ನುಂಟುಮಾಡಿದ್ದರೆ ಅದನ್ನು ಕ್ಷಮಿಸು ಎಂದು  ನಾಗದೆವರನ್ನು ಪ್ರಾರ್ಥಿಸಿ.

>> ನಾಗ ಪಂಚಮಿಯ ದಿನದಂದು ಯಾವುದೇ ಪರಿಸ್ಥಿತಿಯಲ್ಲಿ ನೆಲವನ್ನು ಅಗೆಯುವುದನ್ನು ತಪ್ಪಿಸಿ. ಅದರಲ್ಲೂ ವಿಶೇಷವಾಗಿ ಹಾವಿನ ಬಿಲ ಇರುವ ನೆಲವನ್ನು ಅಗೆಯಬೇಡಿ.

>> ಹಾವುಗಳನ್ನು ಎಂದಿಗೂ ಕೊಲ್ಲಬೇಡಿ, ಅವುಗಳಿಗೆ ಹಾನಿ ಮಾಡಬೇಡಿ. ಅವರನ್ನು ಹಿಡಿದು ಕಾಡಿಗೆ ಬಿಟ್ಟುಬಿಡಿ.

ಇದನ್ನೂ ಓದಿ-ಮನೆಯ ಈ ಭಾಗದಲ್ಲಿ ಶತಪದಿ ಕಂಡರೆ ಅಶುಭ ನಿವಾರಣೆ ಖಂಡಿತ!

ನಾಗ ಪಂಚಮಿ ಶುಭ ಸಮಯ
2ನೇ ಆಗಸ್ಟ್ 2022, ಮಂಗಳವಾರದಂದು ಈ ವರ್ಷದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಆಗಸ್ಟ್ 2 ರ ಬೆಳಗ್ಗೆ 06:05 ರಿಂದ 08:41 ರವರೆಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಪೂಜೆಯ ಶುಭ ಮುಹೂರ್ತ ಇರಲಿದೆ.

ಇದನ್ನೂ ಓದಿ-Angarak Yog : ಈ ರಾಶಿಯವರ ಮೇಲೆ 'ಅಂಗಾರಕ ಯೋಗ'ದ ಪರಿಣಾಮ : ಆಗಸ್ಟ್ 10 ರವರೆಗೆ ಎಚ್ಚರಿಕೆಯಿಂದಿರಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News