Richest People Zodiac Signs: ಜೋತಿಷ್ಯ ಶಾಸ್ತ್ರದಲ್ಲಿ ವಿವಿಧ ರಾಶಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಎಲ್ಲಾ ದ್ವಾದಶ ರಾಶಿಗಳ ಜನರ ವ್ಯಕ್ತಿತ್ವ, ನಡವಳಿಕೆ, ಸ್ವಭಾವ ಮತ್ತು ಭವಿಷ್ಯವು ವಿಭಿನ್ನವಾಗಿರುತ್ತದೆ. ಜೋತಿಷ್ಯ ಶಾಸ್ತ್ರದ ಸಹಾಯದಿಂದ ಓರ್ವ ವ್ಯಕ್ತಿಯ ಸಾಕಷ್ಟು ಸಂಗತಿಗಳ ಕುರಿತು ತಿಳಿದುಕೊಳ್ಳಬಹುದು. ಇದರಂತೆಯೇ ಕೆಲ ರಾಶಿಗಳ ಜನರು ಜಗತ್ತಿನಲ್ಲಿ ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಘನತೆ, ಗೌರವ ಮತ್ತು ಹಣವನ್ನು ಸಂಪಾದಿಸುತ್ತಾರೆ ಎಂದು ಹೇಳಲಾಗುತ್ತದೆ. ಇವರು ತಮ್ಮ ಜೀವನದಲ್ಲಿ ಅಪಾರ ಖ್ಯಾತಿಯನ್ನು ಪಡೆಯುತ್ತಾರೆ ಮತ್ತು ಎಲ್ಲರೂ ಅವರನ್ನು ಅನುಸರಿಸಲು ಬಯಸುತ್ತಾರೆ. ಇದಕ್ಕೆ ಕಾರಣ ಈ ಜನರ ಮೇಲೆ ಲಕ್ಷ್ಮಿ ದೇವಿ ಮತ್ತು ಕುಬೇರನ ಆಶೀರ್ವಾದ ಸದಾ ಇರುತ್ತದೆ. ಈ ಜನರು ಬಿಲಿಯನೇರ್, ಟ್ರಿಲಿಯನೇರ್ ಎಂಬ ವಿಳಾಸದಿಂದ ಜಗತ್ತಿನಲ್ಲಿ ಪ್ರಸಿದ್ದರಾಗುತ್ತಾರೆ. ಹಾಗಾದರೆ ಬನ್ನಿ ವಿಶ್ವದಲ್ಲಿಯೇ ಅಪಾರ ಸಿರಿವಂತರಾಗುತ್ತಾರೆ ಎನ್ನುವ ಇಂತಹ ಜನರ ರಾಶಿಗಳು ಯಾವುವು ತಿಳಿದುಕೊಳ್ಳೋಣ.
ತುಲಾ - ಮೀನ
ಜಗತ್ತಿನ ಹೆಚ್ಚಿನ ಬಿಲಿಯನೇರ್ ಬಲು ತುಲಾ ರಾಶಿ ರಾಶಿಯವರಾಗಿರುತ್ತಾರೆ ಎನ್ನಲಾಗುತ್ತದೆ. ತುಲಾ ರಾಶಿಯ ಜನರು ಹಣ ಮತ್ತು ಅದೃಷ್ಟದ ವಿಷಯದಲ್ಲಿ ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಜನರು ಹಣದ ಆಧಾರದ ಮೇಲೆ ಇಡೀ ಜಗತ್ತಿನಲ್ಲಿ ಸಾಕಷ್ಟು ಖ್ಯಾತಿಯನ್ನು ಹೊಂದುತ್ತಾರೆ ಎನ್ನಲಾಗುತ್ತದೆ. ತುಲಾ ರಾಶಿಯ ನಂತರ ಮೀನ ರಾಶಿಯನ್ನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಎರಡನೇ ಅತಿ ಶ್ರೀಮಂತ ರಾಶಿಯ ಜನರೆಂದರೆ ಅವರು ಮೀನ ರಾಶಿಯ ಜನರು. ಈ ರಾಶಿಗಳ ಕೋಟ್ಯಾಧಿಪತಿಗಳ ಸಂಖ್ಯೆ ತುಲಾ ರಾಶಿಯ ನಂತರ ಎರಡನೆ ಸ್ಥಾನದಲ್ಲಿ ಬರುತ್ತಾರೆ.
ಇದನ್ನೂ ಓದಿ-Jupiter Rise 2023: ಮೇಷ ರಾಶಿಯಲ್ಲಿ ಉದಯಿಸಿದ ಗುರು, ವಿವಾಹಗಳ ಸುಗ್ಗಿ ಆರಂಭ, ಇಲ್ಲಿದೆ ಶುಭ ಮುಹೂರ್ತಗಳ ವಿವರ!
ಮಕರ ಸಂಕ್ರಾಂತಿ
ತುಲಾ ಮತ್ತು ಮೀನ ರಾಶಿಯನ್ನು ಹೊರತುಪಡಿಸಿ, ನಾವು ಮತ್ತೊಂದು ರಾಶಿಯ ಜನರ ಬಗ್ಗೆ ಮಾತನಾಡುವುದಾದರೆ, ಅದು ಮಕರ ರಾಶಿ. ಕೋಟ್ಯಾಧೀಶರ ಸಂಖ್ಯೆಯಲ್ಲಿ ಮಕರ ರಾಶಿಯ ಜನರು ಮೂರನೇ ಸ್ಥಾನದಲ್ಲಿದ್ದಾರೆ. ಅಂದರೆ ತುಲಾ ಮತ್ತು ಮೀನ ರಾಶಿಯ ನಂತರ ಮಕರ ರಾಶಿ ಬರುತ್ತದೆ. ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಶೇ.5.5ರಷ್ಟು ಮಂದಿ ಮಕರ ರಾಶಿಯವರಾಗಿದ್ದಾರೆ. ಈ ಜನರು ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು ಮತ್ತು ಇವರ ತಲೆಯ ಮೇಲೆ ಕುಬೇರ ದೇವನ ಕೃಪಾಶೀರ್ವಾದ ಇರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.