Astro tips: ಮನಿ ಪ್ಲಾಂಟ್ ನೆಡುವಾಗ ಇಂತಹ ತಪ್ಪು ಮಾಡಿದ್ರೆ ಬಡವರಾಗುತ್ತಾರೆ!

Money Plant Tips: ಸಾಮಾನ್ಯವಾಗಿ ಜನರು ಮನೆಯನ್ನು ಸುಂದರವಾಗಿಸಲು ಸಸ್ಯಗಳು ಮತ್ತು ಗಿಡಗಳನ್ನು ನೆಡುತ್ತಾರೆ. ಇದರಿಂದ ಮನೆಯ ಸೌಂದರ್ಯ ಹೆಚ್ಚುವುದಲ್ಲದೆ ವ್ಯಕ್ತಿಯ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಮನಿ ಪ್ಲಾಂಟ್‌ಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳ ಬಗ್ಗೆ ತಿಳಿಯಿರಿ.

Written by - Puttaraj K Alur | Last Updated : Jan 11, 2023, 04:07 PM IST
  • ವಾಸ್ತು ತಜ್ಞರ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಮನಿಪ್ಲಾಂಟ್ ಸಸ್ಯವನ್ನು ನೆಡಬಾರದು
  • ಆಗ್ನೇಯ ದಿಕ್ಕಿನಲ್ಲಿ ಮನಿಪ್ಲಾಂಟ್ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ
  • ಮನಿಪ್ಲಾಂಟ್ ಸಸ್ಯದ ಬಳ್ಳಿಯು ಎಂದಿಗೂ ನೆಲವನ್ನು ಮುಟ್ಟದಂತೆ ವಿಶೇಷ ಕಾಳಜಿ ವಹಿಸಬೇಕು
Astro tips: ಮನಿ ಪ್ಲಾಂಟ್ ನೆಡುವಾಗ ಇಂತಹ ತಪ್ಪು ಮಾಡಿದ್ರೆ ಬಡವರಾಗುತ್ತಾರೆ!   title=
Money Plant Tips

ನವದೆಹಲಿ: ವಾಸ್ತುಶಾಸ್ತ್ರದಲ್ಲಿ ಅನೇಕ ಮರಗಳು ಮತ್ತು ಸಸ್ಯಗಳ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ಮನೆಯಲ್ಲಿ ನೆಡುವುದರಿಂದ ಅಲಂಕಾರದ ಜೊತೆಗೆ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಇರುತ್ತದೆ. ಇದಲ್ಲದೆ ತಾಯಿ ಲಕ್ಷ್ಮಿದೇವಿ ಮನೆಗೆ ಆಗಮಿಸುತ್ತಾಳೆಂಬ ನಂಬಿಕೆಯಿದೆ. ಇಂತಹ ಸಸ್ಯಗಳ ಪೈಕಿ ಮನಿ ಪ್ಲಾಂಟ್ ಸಹ ಒಂದು. ಇದು ಬಹುತೇಕ ಎಲ್ಲಾ ಮನೆಗಳಲ್ಲಿಯೂ ಕಂಡುಬರುತ್ತದೆ. ಆದರೆ ಇದನ್ನು ಮನೆಯಲ್ಲಿಡುವ ಮುನ್ನ ಸರಿಯಾದ ನಿಯ ತಿಳಿದುಕೊಳ್ಳುವುದು ಬಹಳ ಮುಖ್ಯವೆನ್ನುತ್ತಾರೆ ವಾಸ್ತು ತಜ್ಞರು.

ಮನಿಪ್ಲಾಂಟ್ ನೆಡುವಾಗ ತಪ್ಪು ಮಾಡಿದ್ರೆ ಯಾವುದೇ ವ್ಯಕ್ತಿಯು ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ತಪ್ಪು ದಿಕ್ಕಿನಲ್ಲಿ ನೆಟ್ಟ ಮನಿ ಪ್ಲಾಂಟ್ ಯಾವುದೇ ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುವ ಬದಲು ಬಡವನನ್ನಾಗಿ ಮಾಡುತ್ತದೆ. ಇದರೊಂದಿಗೆ ಹಲವಾರು ರೀತಿಯ ಸಮಸ್ಯೆಗಳು ವ್ಯಕ್ತಿಯನ್ನು ಸುತ್ತುವರೆದಿರುತ್ತವೆ. ಮನಿ ಪ್ಲಾಂಟ್ ನೆಡುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಯಿರಿ.

ಇದನ್ನೂ ಓದಿ: Shani Asta 2023: ಶನಿಗ್ರಹ ಅಸ್ತಮಿಸುವುದರಿಂದ ಈ ರಾಶಿಯವರಿಗೆ ಧನಲಾಭದ ಜೊತೆಗೆ ಅದೃಷ್ಟ ಬೆಳಗಲಿದೆ

ಮನಿ ಪ್ಲಾಂಟ್‌ನ ಪ್ರಮುಖ ನಿಯಮ ತಿಳಿಯಿರಿ

- ವಾಸ್ತುಶಾಸ್ತ್ರದಲ್ಲಿ ಮನಿಪ್ಲಾಂಟ್‍ನ ವಿಶೇಷ ಮಹತ್ವವನ್ನು ಹೇಳಲಾಗಿದೆ. ವಾಸ್ತು ತಜ್ಞರ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಮನಿಪ್ಲಾಂಟ್ ನೆಡಬಾರದು. ಯಾರಾದರೂ ಇದನ್ನು ಮಾಡಿದರೆ, ಅವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.

- ಮನಿಪ್ಲಾಂಟ್ ಅನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕನ್ನು ಗಣೇಶನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಮನಿಪ್ಲಾಂಟ್ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ.

- ಮನಿಪ್ಲಾಂಟ್‌ನ ಸಸ್ಯವು ಬೆಳೆದಂತೆ ವ್ಯಕ್ತಿಯೂ ಬೆಳೆಯುತ್ತಾನೆ ಎಂದು ಹೇಳಲಾಗುತ್ತದೆ. ಹೀಗಾಗಿ ಮನಿಪ್ಲಾಂಟ್ ಸಸ್ಯದ ಬಳ್ಳಿಯು ಎಂದಿಗೂ ನೆಲವನ್ನು ಮುಟ್ಟದಂತೆ ವಿಶೇಷ ಕಾಳಜಿ ವಹಿಸಬೇಕು. ಈ ಬಳ್ಳಿ ನೆಲಕ್ಕೆ ತಾಗಿದರೆ ಆ ವ್ಯಕ್ತಿಗೆ ಧನಹಾನಿಯಾಗುತ್ತದಂತೆ.

- ಮನಿಪ್ಲಾಂಟ್ ಅನ್ನು ಎಂದಿಗೂ ಒಣಗಲು ಬಿಡಬಾರದು. ಅದರ ಎಲೆಗಳು ಒಣಗಿದರೆ ಅಥವಾ ಹಳದಿ ಬಣ್ಣಕ್ಕೆ ತಿರುಗಿದರೆ, ತಕ್ಷಣವೇ ಅದನ್ನು ತೆಗೆದುಹಾಕಿ. ಒಣಗಿದ ಮನಿಪ್ಲಾಂಟ್ ಮನೆಗೆ ದುರಾದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

- ಮನೆಯ ಹೊರಗೆ ಮನಿಪ್ಲಾಂಟ್ ನೆಡಬಾರದು ಎಂದೂ ಹೇಳಲಾಗುತ್ತದೆ. ಮನಿಪ್ಲಾಂಟ್ ಗಿಡದ ಮೇಲೆ ಹೊರಗಿನವರ ಕಣ್ಣು ಬಿದ್ದರೆ ಗಿಡದ ಬೆಳವಣಿಗೆ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೂ ಇದರ ಪರಿಣಾಮವನ್ನು ಕಾಣಬಹುದು. ಯಾವಾಗಲೂ ಈ ಗಿಡವನ್ನು ಮನೆಯೊಳಗೆ ನೆಡಬೇಕು.

- ಮನಿಪ್ಲಾಂಟ್ ಮಾರಾಟ ಮಾಡುವುದು ಅಶುಭ ಎನ್ನುತ್ತಾರೆ ವಾಸ್ತು ತಜ್ಞರು. ಹೀಗೆ ಮಾಡುವುದರಿಂದ ಶುಕ್ರನಿಗೆ ಕೋಪ ಬರುತ್ತದೆ. ಇದರಿಂದ ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: Lucky Girls for Husband: ಈ ರೀತಿಯ ಹೆಂಡತಿಯರು ಗಂಡನ ಪಾಲಿಗೆ ಅದೃಷ್ಟವಂತರು!

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News