Lucky Sign on Body: ಅದೃಷ್ಟವಂತ ಮಹಿಳೆಯರ ಮೈಮೇಲೆ ಈ ಚಿಹ್ನೆಗಳಿರುತ್ತವೆ!

Lucky Sign on Body: ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ಮಹಿಳೆಯರು ಮತ್ತು ಪುರುಷರ ದೇಹದ ಭಾಗಗಳ ಮೂಲಕ ಅವರ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು. ಪ್ರತಿಯೊಬ್ಬರ ದೇಹ ರಚನೆಯೂ ಬೇರೆ ಬೇರೆ ಆಗಿರುತ್ತದೆ. ಹೀಗಿರುವಾಗ ಪ್ರತಿಯೊಂದು ಅಂಗರಚನೆಯೂ ವ್ಯಕ್ತಿಯ ಅದೃಷ್ಟ, ದರಾದೃಷ್ಟವನ್ನು ಸೂಚಿಸುತ್ತದೆ.   

Written by - Chetana Devarmani | Last Updated : Nov 16, 2022, 07:57 PM IST
  • ಅಂಗ ರಚನೆಯ ಮೂಲಕ ವ್ಯಕ್ತಿತ್ವ, ಭವಿಷ್ಯ ತಿಳಿಸುತ್ತೆ ಸಾಮುದ್ರಿಕ ಶಾಸ್ತ್ರ
  • ಅದೃಷ್ಟವಂತ ಮಹಿಳೆಯರ ಮೈಮೇಲೆ ಈ ಚಿಹ್ನೆಗಳಿರುತ್ತವೆ!
  • ಅದೃಷ್ಟವಂತರ ದೇಹದ ಕೆಲವು ವಿಶೇಷ ಗುರುತುಗಳು ಇರುತ್ತವೆ
Lucky Sign on Body: ಅದೃಷ್ಟವಂತ ಮಹಿಳೆಯರ ಮೈಮೇಲೆ ಈ ಚಿಹ್ನೆಗಳಿರುತ್ತವೆ!  title=
ಸಾಮುದ್ರಿಕ ಶಾಸ್ತ್ರ

Lucky Sign on Body: ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ಮಹಿಳೆಯರು ಮತ್ತು ಪುರುಷರ ದೇಹದ ಭಾಗಗಳ ಮೂಲಕ ಅವರ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು. ಪ್ರತಿಯೊಬ್ಬರ ದೇಹ ರಚನೆಯೂ ಬೇರೆ ಬೇರೆ ಆಗಿರುತ್ತದೆ. ಹೀಗಿರುವಾಗ ಪ್ರತಿಯೊಂದು ಅಂಗರಚನೆಯೂ ವ್ಯಕ್ತಿಯ ಅದೃಷ್ಟ, ದರಾದೃಷ್ಟವನ್ನು ಸೂಚಿಸುತ್ತದೆ. ಇಂದು ನಾವು ಹುಡುಗಿಯರ ದೇಹದ ಕೆಲವು ವಿಶೇಷ ಗುರುತುಗಳು ಮತ್ತು ಅಂಗಾಂಗಳ ಆಕಾರದ ಮೂಲಕ ಅವರ ಅದೃಷ್ಟ ತಿಳಿಯುವ ಬಗ್ಗೆ ಹೇಳಲಿದ್ದೇವೆ. 

ಇದನ್ನೂ ಓದಿ : ಸ್ನೇಹ ಮಾಡುವ ಮೊದಲು ಈ ವಿಷಯ ನೆನಪಿನಲ್ಲಿಡಿ

ಪಾದದ ಅಡಿಭಾಗ: ನಯವಾದ, ಮೃದುವಾದ ಮತ್ತು ಕೆಂಪು ಪಾದದ ಅಡಿಭಾಗವನ್ನು ಹೊಂದಿರುವ ಹುಡುಗಿಯರು ಅಥವಾ ಮಹಿಳೆಯರು ಲಕ್ಷ್ಮಿಯ ವಿಶೇಷ ಆಶೀರ್ವಾದವನ್ನು ಹೊಂದಿರುತ್ತಾರೆ. ಅಂತಹ ಮಹಿಳೆಯರಿಗೆ ಹಣದ ಕೊರತೆ ಇರುವುದಿಲ್ಲ. ಮತ್ತೊಂದೆಡೆ, ಪಾದದ ಮೇಲೆ ಕಮಲ, ಶಂಖ ಅಥವಾ ಚಕ್ರದ ಗುರುತು ಹೊಂದಿದ್ದರೆ ಅವರಿಗೆ ಹೆಚ್ಚಿನ ಗೌರವ ಸಿಗುತ್ತದೆ ಎಂದರ್ಥ.

ಕಾಲ್ಬೆರಳು: ಹೆಬ್ಬೆರಳು ಅಗಲ, ದುಂಡಾಗಿರುವ ಮಹಿಳೆಯರು ತಮ್ಮ ಕುಟುಂಬಕ್ಕೆ ತುಂಬಾ ಅದೃಷ್ಟವಂತರು. ಅವರು ತಮ್ಮ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ಅದೃಷ್ಟದಿಂದ ಜೀವನದಲ್ಲಿ ಸಾಕಷ್ಟು ಪ್ರಗತಿ ಮತ್ತು ಸಂಪತ್ತನ್ನು ಪಡೆಯುತ್ತಾರೆ. ಅವರಿಂದಾಗಿ ಇಡೀ ಕುಟುಂಬ ಐಷಾರಾಮಿ ಜೀವನ ನಡೆಸುತ್ತದೆ. 

ಕೈ ಬೆರಳುಗಳು: ಉದ್ದವಾದ ಕೈ ಬೆರಳುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಗಂಡನಿಗೆ ತುಂಬಾ ಅದೃಷ್ಟಶಾಲಿ ಎಂದು ನಂಬಲಾಗಿದೆ. ಆಕೆಯ ಪತಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾನೆ. ಸಾಮಾನ್ಯ ಕುಟುಂಬದಲ್ಲಿ ಮದುವೆಯಾದರು ಸಹ ಪತಿ ಶೀಘ್ರದಲ್ಲೇ ಶ್ರೀಮಂತನಾಗುತ್ತಾನೆ.

ಇದನ್ನೂ ಓದಿ : ವಧುವನ್ನು ನೋಡಿ ರೋಮ್ಯಾಂಟಿಕ್‌ ಮೂಡ್‌ಗೆ ಹೋದ ವರ! ಅತಿಥಿಗಳೆದುರೇ ಮಾಡಿದ್ದೇನು?

ಉದ್ದನೆಯ ಕುತ್ತಿಗೆ: ಅಂತಹ ಮಹಿಳೆಯರು ತಮ್ಮ ತಾಯಿಯ ಮನೆಯಲ್ಲಿ ಮಾತ್ರವಲ್ಲದೆ ಅವರ ಅತ್ತೆ ಮನೆಯಲ್ಲೂ ಗೌರವವನ್ನು ಪಡೆಯುತ್ತಾರೆ.

ಅಂಗೈ: ಅಂಗೈ ಹೊಳೆಯುವ, ಮೃದುವಾದ ಮತ್ತು ಕೆಂಪು ಬಣ್ಣದ್ದಾಗಿರುವ ಮಹಿಳೆಯರು ಅದೃಷ್ಟವಂತರು. ಅವರು ತಮ್ಮ ಕುಟುಂಬದ ಗೌರವಕ್ಕೆ ಕಾರಣರಾಗುತ್ತಾರೆ. ಅಂತಹ ಮಹಿಳೆಯರು ಅಪಾರ ಸಂಪತ್ತನ್ನು ಹೊಂದುತ್ತಾರೆ. ಅವರು ಸಾಕಷ್ಟು ಖ್ಯಾತಿಯನ್ನು ಸಹ ಪಡೆಯುತ್ತಾರೆ.

Disclaimer: ​ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News