ಸಂಗಾತಿ ಕೇವಲ ಶಾರೀರಿಕ ಸಂಬಂಧ ಬಯಸುತ್ತಾನೋ ಅಥವಾ ಪ್ರೀತಿಯನ್ನು ಕೂಡ ಮಾಡುತ್ತಾನೋ? ಹೇಗೆ ತಿಳಿದುಕೊಳ್ಳಬೇಕು?

Relationship: ನಿಮ್ಮ ಸಂಗಾತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾರೋ ಅಥವಾ ಕೇವಲ ದೈಹಿಕ ಸಂಬಂಧವನ್ನು ಹೊಂದಲು ಮಾತ್ರ ಬಯಸುತ್ತಾರೋ ಎಂಬಸಂಗತಿಗಳನ್ನು ನೀವು ಹೆಗೆತಿಳಿದುಕೊಳ್ಳುವಿರಿ? ಬನ್ನಿ ಅದನ್ನು ಹೇಗೆ ಕಂಡುಹಿಡಿಯಬೇಕು ತಿಳಿದುಕೊಳ್ಳೋಣ (Lifesltyle News In Kannada)  

Written by - Nitin Tabib | Last Updated : Aug 17, 2023, 09:47 PM IST
  • ನಿಮ್ಮ ಸಂಗಾತಿ ಯಾವಾಗಲೂ ದೈಹಿಕ ಸಂಬಂಧವನ್ನು ಹೊಂದುವ ಬಗ್ಗೆ ಮಾತನಾಡುತ್ತಾರೆಯೇ ಅಥವಾ ಅವರು ಈ ಸಂಬಂಧವನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ?
  • ಅವನು ಮಲಗಲು ಅಥವಾ ಒಬ್ಬಂಟಿಯಾಗಿ ಭೇಟಿಯಾಗಲು ಉತ್ಸುಕನಾಗಿದ್ದಾನೆಯೇ ಅಥವಾ ಪ್ರೀತಿಯ ಬಗ್ಗೆ ಮಾತನಾಡುತ್ತಾನೆಯೇ,
  • ಅವನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆಯೇ, ಈ ವಿಷಯಗಳಿಂದ ಸಂಗಾತಿ ಏನು ಬಯಸುತ್ತಾನೆ ಎಂಬುದನ್ನು ನೀವು ಕಂಡುಹಿಡಿಯಬಹುದು.
ಸಂಗಾತಿ ಕೇವಲ ಶಾರೀರಿಕ ಸಂಬಂಧ ಬಯಸುತ್ತಾನೋ  ಅಥವಾ ಪ್ರೀತಿಯನ್ನು ಕೂಡ ಮಾಡುತ್ತಾನೋ? ಹೇಗೆ ತಿಳಿದುಕೊಳ್ಳಬೇಕು? title=

ಬೆಂಗಳೂರು: ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾರೆಯೇ ಅಥವಾ ಕೇವಲ ಲೈಂಗಿಕ ಸಂಬಂಧಕ್ಕಾಗಿ ನಿಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ, ಏಕೆಂದರೆ ಕೆಲವೊಮ್ಮೆ ಅಂತಹ ಲಕ್ಷಣಗಳು ಸಂಗಾತಿಯ ನಡವಳಿಕೆಯಿಂದ ಗೊತ್ತಾಗುವುದಿಲ್ಲ (Lifesltyle News In Kannada). ಇತ್ತೀಚಿನ ದಿನಗಳಲ್ಲಿ, ಪ್ರೀತಿಯಲ್ಲಿ ಮೋಸ ಹೋಗುವ ಸುದ್ದಿಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ, ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಗಾತಿಯು ಸಂಬಂಧದ ಬಗ್ಗೆ ಗಂಭೀರವಾಗಿರುತ್ತಾರೆಯೇ ಅಥವಾ ಸ್ವಲ್ಪ ಸಮಯದವರೆಗೆ ಅದರ ಲಾಭವನ್ನು ಪಡೆಯಲು ಬಯಸುತ್ತಾರೆಯೇ ಅಥವಾ ಕೇವಲ ದೈಹಿಕ ಸಂಬಂಧವನ್ನು ಹೊಂದಲು ಬಯಸುತ್ತಾರೆಯೇ ಎಂಬುದು ತಿಳಿಯುವುದು ತುಂಬಾ ಮುಖ್ಯವಾಗಿದೆ. ಅಲ್ಲಿಯವರೆಗೆ ಅವನ ಸಂಬಂಧ ಸೀಮಿತವಾಗಿರುತ್ತದೆ. ಇಂದು ನಾವು ನಿಮಗೆ ಅಂತಹ ಕೆಲ ಸಂಕೇತಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. 

ಇದು ಕೇವಲ ದೈಹಿಕ ಸಂಬಂಧಗಳ ವಿಷಯವೇ?
ನಿಮ್ಮ ಸಂಗಾತಿ ಯಾವಾಗಲೂ ದೈಹಿಕ ಸಂಬಂಧವನ್ನು ಹೊಂದುವ ಬಗ್ಗೆ ಮಾತನಾಡುತ್ತಾರೆಯೇ ಅಥವಾ ಅವರು ಈ ಸಂಬಂಧವನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ? ಅವನು ಮಲಗಲು ಅಥವಾ ಒಬ್ಬಂಟಿಯಾಗಿ ಭೇಟಿಯಾಗಲು ಉತ್ಸುಕನಾಗಿದ್ದಾನೆಯೇ ಅಥವಾ ಪ್ರೀತಿಯ ಬಗ್ಗೆ ಮಾತನಾಡುತ್ತಾನೆಯೇ, ಅವನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆಯೇ, ಈ ವಿಷಯಗಳಿಂದ ಸಂಗಾತಿ ಏನು ಬಯಸುತ್ತಾನೆ ಎಂಬುದನ್ನು ನೀವು ಕಂಡುಹಿಡಿಯಬಹುದು.

ಮದುವೆಯ ಬಗ್ಗೆ ಮಾತನಾಡುವುದಿಲ್ಲವೇ?
ನಿಮ್ಮ ಸಂಗಾತಿ ನಿಮ್ಮ ಬಳಿ ಮದುವೆ ಅಥವಾ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲವೇ, ನಿಮ್ಮ ಸಂಗಾತಿಯು ನಿಮ್ಮಿಬ್ಬರ ಮದುವೆ ಅಥವಾ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ ಎಂದಾದಲ್ಲಿ ಆಟ ಸಂಬಂಧದಲ್ಲಿ ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ಅರ್ಥಮಾಡಿಕೊಳ್ಳಿ. ಅವನು ಕೇವಲ ಟೈಮ್ ಪಾಸ್ ಮಾಡುತ್ತಿದ್ದಾನೆ ಎಂಬುದು ಇದರ ಅರ್ಥ. ಭವಿಷ್ಯದ ಬಗ್ಗೆ ಯಾವುದೇ ಯೋಜನೆ ಆತ ಹೊಂದಿಲ್ಲ, ಅಲ್ಲಿ ಪ್ರೀತಿ ಇಲ್ಲ ಮತ್ತು ಕೇವಲ ಲೈಂಗಿಕತೆಗಾಗಿ ಸಂಬಂಧವನ್ನು ಅವರು ಮುಂದುವರೆಸುತ್ತಿದ್ದಾರೆ ಎಂದರ್ಥ.

ಕುಟುಂಬದೊಂದಿಗೆ ಪರಿಚಯಿಸುವುದಿಲ್ಲ
ನಿಮ್ಮ ಸಂಗಾತಿ ನಿಮ್ಮನ್ನು ತನ್ನ ಕುಟುಂಬದ ಸದಸ್ಯರ ಜೊತೆಗೆ ಪರಿಚಯಿಸದಿದ್ದರೆ, ಏನೋ ಎಡವಟ್ಟಿದೆ ಎಂದು ಅರ್ಥಮಾಡಿಕೊಳ್ಳಿ, ಈ ಸಂಬಂಧದ ಬಗ್ಗೆ ಅವನು ತುಂಬಾ ಗಂಭೀರವಾಗಿಲ್ಲ ಎಂಬುದನ್ನು ಅದು ಸೂಚಿಸುತ್ತದೆ. ಇಲ್ಲದಿದ್ದರೆ ಆತ ಮನೆಯವರೊಂದಿಗೆ ನಿಮ್ಮ ಪರಿಚಯ ಮಾಡಿಸುತ್ತಿದ್ದ. ಅವರು ಕೇವಲ ಟೈಮ್ ಪಾಸ್ ಮಾಡಲು ಬಯಸುತ್ತಿದ್ದಾನೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ-ಬೊಕ್ಕ ತಲೆ ಸಮಸ್ಯೆ ನಿವಾರಣೆಗೆ ತುಂಬಾನೇ ಪವರ್ಪುಲ್ ಈ ಜ್ಯೂಸ್, ಒಮ್ಮೆ ಟ್ರೈ ಮಾಡಿ ನೋಡಿ!

ಹಾಸಿಗೆಯಲ್ಲಿನ ಸಂಬಂಧ
ಅನೇಕ ಸಂಬಂಧಗಳು ಪ್ರೀತಿಯನ್ನು ಖಾತರಿಪಡಿಸುವುದಿಲ್ಲ. ದೈಹಿಕ ಸಂಬಂಧವು ಕೇವಲ ಅಗತ್ಯವಾಗಿದೆ ಆದರೆ ಪ್ರೀತಿಯು ಒಂದು ಭಾವನೆಯಾಗಿದೆ, ಅದು ಎಂದಿಗೂ ಕೊನೆಗೊಳ್ಳುವುದಿಲ್ಲ. ಆದರೆ, ಅಗತ್ಯತೆ ಯಾವಾಗ ಬೇಕಾದರೂ ಅಂತ್ಯವಾಗಬಹುದು. ನಿಮ್ಮ ಹಾರ್ಮೋನುಗಳು ಇದು ಪ್ರೀತಿ ಎಂದು ಹೇಳಬಹುದು, ಆದರೆ ಮನಸ್ಸು ಏನನ್ನು ಹೇಳಲು ಬಯಸುತ್ತದೆ ಆಲಿಸಿ. ನಿಮ್ಮನ್ನು ಪ್ರೀತಿಸುವ ವ್ಯಕ್ತಿಯು ಯಾವಾಗಲೂ ನಿಮ್ಮನ್ನು ಗೌರವಿಸುತ್ತಾನೆ, ನಿಮ್ಮಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾನೆ ಮತ್ತು ಎಲ್ಲಾ ಸಮಯದಲ್ಲೂ ನಿಮ್ಮನ್ನು ಬಯಸುವಂತೆ ಅದು ಮಾಡುತ್ತದೆ. ನಿಮ್ಮೊಂದಿಗೆ ಲೈಂಗಿಕತೆಯನ್ನು ಹೊಂದಲು ಬಯಸುವ ವ್ಯಕ್ತಿ ನೀವು ಹೇಗೆ ಭಾವಿಸುತ್ತೀರಿ ಎಂಬುದರ ಬಗ್ಗೆ ಕಾಳಜಿ ಹೊಂದಿರುವುದಿಲ್ಲ.

ಇದನ್ನೂ ಓದಿ-ಕೇವಲ ಹತ್ತೆ ನಿಮಿಷಗಳ ಕಾಲ ಲವ್ ಮಾಡುವುದರಿಂದ ಎಷ್ಟು ಕ್ಯಾಲೋರಿ ಬರ್ನ್ ಮಾಡಿಕೊಳ್ಳಬಹುದು ಗೊತ್ತಾ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News