Ridge Gourd Benefits: ದೇಹದ ಈ 5 ಸಮಸ್ಯೆಗಳಿಗೆ ಹೀರೆಕಾಯಿ ರಾಮಬಾಣವಿದ್ದಂತೆ

Ridge Gourd Benefits: ನಿಮ್ಮ ದೇಹದಲ್ಲಿ ಈ 5 ಸಮಸ್ಯೆಗಳಿದ್ದರೆ, ನೀವು ನಿಯಮಿತವಾಗಿ ಈ ತರಕಾರಿಯನ್ನು ಸೇವಿಸಬೇಕು. ಇದರಿಂದ ನಿಮಗೆ ಉತ್ತಮ ಪ್ರಯೋಜನ ಸಿಗಲಿದೆ.

Written by - Yashaswini V | Last Updated : Oct 27, 2021, 01:56 PM IST
  • ನಿಮ್ಮ ದೇಹದಲ್ಲಿ ಈ 5 ಸಮಸ್ಯೆಗಳಿದ್ದರೆ, ನೀವು ನಿಯಮಿತವಾಗಿ ಹಿರೇಕಾಯಿಯನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ
  • ಹೀರೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ
  • ಹೀರೆಕಾಯಿ ಕಫ ಮತ್ತು ಪಿತ್ತವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ
Ridge Gourd Benefits: ದೇಹದ ಈ 5 ಸಮಸ್ಯೆಗಳಿಗೆ ಹೀರೆಕಾಯಿ ರಾಮಬಾಣವಿದ್ದಂತೆ title=
Ridge Gourd Benefits

Ridge Gourd Benefits: ಹಸಿರು ತರಕಾರಿಗಳ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಆದರೆ ಹೆಚ್ಚಿನ ಜನರು ಯಾವ ತರಕಾರಿಯನ್ನು ಬಳಸಬೇಕೆಂದು ಗೊಂದಲದ ಸ್ಥಿತಿಯಲ್ಲಿರುತ್ತಾರೆ. ಅನೇಕ ಜನರು ಹಸಿರು ತರಕಾರಿಗಳನ್ನು ಬೇಯಿಸಲು ಇಷ್ಟಪಡುತ್ತಾರೆ ಮತ್ತು ಕೆಲವರು ಅವುಗಳನ್ನು ಹಸಿಯಾಗಿ ತಿನ್ನಲು ಇಷ್ಟಪಡುತ್ತಾರೆ. ಅನೇಕ ತರಕಾರಿಗಳು ಹಸಿರು ತರಕಾರಿಗಳಲ್ಲಿ ಬರುತ್ತವೆ, ಅವುಗಳಲ್ಲಿ ಒಂದು ಹೀರೆಕಾಯಿ. ಇದು ತಿನ್ನಲು ರುಚಿಕರವಾಗಿರುವುದು ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೆ ಕೂಡ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 

ನಿಮ್ಮ ದೇಹದಲ್ಲಿ ಈ 5 ಸಮಸ್ಯೆಗಳಿದ್ದರೆ, ನೀವು ನಿಯಮಿತವಾಗಿ ಹಿರೇಕಾಯಿಯನ್ನು (Ridge Gourd) ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ. 

* ಕಣ್ಣಿನ ಸಮಸ್ಯೆಗಳಿಗೆ ಹಿರೇಕಾಯಿ ಪ್ರಯೋಜನಕಾರಿ:
ನಿಮಗೆ ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿಮ್ಮ ಆಹಾರದಲ್ಲಿ ಹೀರೆಕಾಯಿಯನ್ನು ತಪ್ಪದೇ ಸೇವಿಸಿ. ಹೀರೆಕಾಯಿಯಲ್ಲಿರುವ ವಿಟಮಿನ್ ಎ (Vitamin A) ಎಂಬ ಪೋಷಕಾಂಶವು ನಿಮ್ಮ ದೃಷ್ಟಿಯನ್ನು ಪ್ರಕಾಶಮಾನವಾಗಿ ಮಾಡಲು ಮತ್ತು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ.

ಇದನ್ನೂ ಓದಿ- Dengue Treatment: ಮೇಕೆ ಹಾಲು ಕುಡಿದರೆ ಡೆಂಗ್ಯೂ ವಾಸಿಯಾಗುತ್ತದೆಯೇ? ವೈದ್ಯರು ಏನು ಹೇಳುತ್ತಾರೆ!

* ತಲೆನೋವಿನ ಸಮಸ್ಯೆಗೆ ಪರಿಹಾರ:
ತಲೆನೋವಿನಂತಹ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಹೀರೆಕಾಯಿಯನ್ನು ಸೇರಿಸುವ ಊಲಕ ಪರಿಹಾರ ಪಡೆಯಬಹುದು. ಇದರಲ್ಲಿರುವ ಪೋಷಕಾಂಶಗಳು ನಿಮ್ಮ ತಲೆನೋವನ್ನು ನಿವಾರಿಸಲು ಕೆಲಸ ಮಾಡುತ್ತವೆ. ಈ ತರಕಾರಿಯನ್ನು ವಾರಕ್ಕೆ ಎರಡು ಬಾರಿ ಸೇವಿಸುವ ಮೂಲಕ ನಿಮ್ಮ ದೇಹವನ್ನು ಅನೇಕ ರೋಗಗಳಿಂದ ದೂರವಿಡಬಹುದು.

* ಮಲಬದ್ಧತೆ ನಿವಾರಿಸಲು:
ನೀವು ನಿಯಮಿತವಾಗಿ ಹೀರೆಕಾಯಿಯನ್ನು ಸೇವಿಸಿದರೆ, ನೀವು ಮಲಬದ್ಧತೆಯಂತಹ ಸಮಸ್ಯೆಗಳನ್ನು ತೊಡೆದುಹಾಕಬಹುದು. ವಾಸ್ತವವಾಗಿ, ಹೀರೆಕಾಯಿಯಲ್ಲಿ ಸಮೃದ್ಧವಾದ ಫೈಬರ್ ಕಂಡುಬರುತ್ತದೆ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಜೀರ್ಣಿಸಿಕೊಳ್ಳಲು ದೀರ್ಘಕಾಲ ಕೆಲಸ ಮಾಡಬೇಕಾಗುತ್ತದೆ ಮತ್ತು ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ . ಇದರಿಂದ ನಿಮಗೆ ಮಲಬದ್ಧತೆಯಂತಹ ಸಮಸ್ಯೆ ಉಂಟಾಗುವುದಿಲ್ಲ.

ಇದನ್ನೂ ಓದಿ- Disposal Plate Side Effects: ನೀವು ಸಹ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ತಿನ್ನುತ್ತೀರಾ? ಹಾಗಿದ್ದರೆ ಹುಷಾರ್!

* ಕಫ ಮತ್ತು ಪಿತ್ತ ನಿವಾರಿಸಲು:
ಹೀರೆಕಾಯಿ ಕಫ ಮತ್ತು ಪಿತ್ತವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಹೀರೆಕಾಯಿಯಲ್ಲಿರುವ ಪೌಷ್ಟಿಕಾಂಶದ ಗುಣಗಳು ನಿಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಕಫ ಮತ್ತು ಪಿತ್ತ ದೋಷಗಳನ್ನು ಶಮನಗೊಳಿಸುತ್ತದೆ. 

* ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ:
ಹೀರೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News