Kids Mental Health: ಲಾಕ್‌ಡೌನ್ ಮಧ್ಯೆ ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ ಕಡಿಮೆ ಮಾಡಲು ಈ ಟಿಪ್ಸ್ ಅನುಸರಿಸಿ

ಕರೋನಾದ ಎರಡನೇ ತರಂಗವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹಲವು ವರದಿಗಳು ತಿಳಿಸಿವೆ. ಅಂತಹ ಪರಿಸ್ಥಿತಿಯಲ್ಲಿ, ನಮ್ಮ ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯದ ಬಗ್ಗೆಯೂ ನಾವು ಸಂಪೂರ್ಣ ಕಾಳಜಿ ವಹಿಸಬೇಕಾಗಿದೆ.  

Written by - Yashaswini V | Last Updated : Apr 24, 2021, 03:15 PM IST
  • ಪ್ರಸ್ತುತ ಭಾರತದಲ್ಲಿ ಕರೋನಾ ಎರಡನೇ ತರಂಗ ತಲ್ಲಣ ಸೃಷ್ಟಿಸಿದೆ
  • ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯಕ
  • ಕರೋನಾದ ಎರಡನೇ ತರಂಗವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹಲವು ವರದಿಗಳು ತಿಳಿಸಿವೆ. ಇದನ್ನು ನಿವಾರಿಸಲು ಏನು ಮಾಡಬೇಕು ಎಂದು ತಿಳಿಯಲು ಇದನ್ನು ಓದಿ
Kids Mental Health: ಲಾಕ್‌ಡೌನ್ ಮಧ್ಯೆ ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ ಕಡಿಮೆ ಮಾಡಲು ಈ ಟಿಪ್ಸ್ ಅನುಸರಿಸಿ title=
Kids Mental Health

ನವದೆಹಲಿ: ದೇಶದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕಳೆದ ಮೂರ್ನಾಲ್ಕು ದಿನದಿಂದ ಈಚೆಗೆ ಕರೋನಾ ಪ್ರಕರಣಗಳ ಸಂಖ್ಯೆ ಮೂರು ಲಕ್ಷ ದಾಟುತ್ತಿದ್ದು ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ. ಇಂದು, ದೇಶಾದ್ಯಂತ 3.45 ಲಕ್ಷಕ್ಕೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗಿವೆ ಮತ್ತು 2600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಬಹಳ ಮುಖ್ಯವಾಗಿದೆ. 

ಪ್ರಸ್ತುತ ಭಾರತದಲ್ಲಿ ಕರೋನಾ (Coronavirus) ಎರಡನೇ ತರಂಗ ತಲ್ಲಣ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯಕ. ಕರೋನಾದ ಎರಡನೇ ತರಂಗವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹಲವು ವರದಿಗಳು ತಿಳಿಸಿವೆ. ಹೌದು, ಸದಾ ಶಾಲೆ, ಓದು, ಆಟೋಟಗಳಲ್ಲಿ ಚಟುವಟಿಕೆಯಿಂದ ಇರುತ್ತಿದ್ದ ಮಕ್ಕಳು ಕರೋನಾದಿಂದಾಗಿ ಸದಾ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಇದರಿಂದಾಗಿ ಮಕ್ಕಳ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯದ ಬಗ್ಗೆಯೂ ನಾವು ಸಂಪೂರ್ಣ ಕಾಳಜಿ ವಹಿಸಬೇಕಾಗಿದೆ.

ಈ ಹಿನ್ನಲೆಯಲ್ಲಿ ನಾವು ನಿಮಗೆ ಕೆಲವು ಸುಲಭ ಸಲಹೆಗಳನ್ನು ನೀಡುತ್ತಿದ್ದೇವೆ. ಇದರಿಂದ ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆಯೂ ನೀವು ಗಮನ ಹರಿಸಬಹುದು.

ಕರೋನಾವೈರಸ್ ಬಗ್ಗೆ ಮಕ್ಕಳಿಗೆ ವಿವರಿಸಿ:
ನಿಮ್ಮ ಮಕ್ಕಳನ್ನು ಕರೋನಾದಿಂದ ಸುರಕ್ಷಿತವಾಗಿರಿಸಲು, ಕೋವಿಡ್ -19 (Covid 19) ರೋಗದ ಬಗ್ಗೆ ನಿಮ್ಮ ಮಕ್ಕಳಿಗೆ ವಿವರಿಸಿ. ರೋಗದಿಂದ ಸುರಕ್ಷಿತವಾಗಿರಲು ಇರುವ ಮಾರ್ಗಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ. ನಿಮ್ಮ ಮಕ್ಕಳಿಗೆ ಒಂಟಿತನ ಕಾಡದಂತೆ ನೀವು ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬೇಕು. ಅವರು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೂ, ನೀವು ಸರಿಯಾಗಿ ಉತ್ತರಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಮಕ್ಕಳಿಗೂ ಕೂಡ ಈ ಕರೋನಾವೈರಸ್ ಬಗ್ಗೆ ಜಾಗೃತಿ ಮೂಡುತ್ತದೆ ಮತ್ತು ಮಕ್ಕಳು ಸುರಕ್ಷಿತವಾಗಿರುತ್ತಾರೆ.

ಇದನ್ನೂ ಓದಿ - Home Quarantine: ಆರೋಗ್ಯ ಸಚಿವಾಲಯದ ಈ ಟಿಪ್ಸ್ ಅನುಸರಿಸಿ ಮನೆಯಲ್ಲಿಯೇ ನಿಮ್ಮ Oxygen ಮಟ್ಟ ಸುಧಾರಿಸಿ

ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಅವಕಾಶ ಕಲ್ಪಿಸಿ:
ಮಕ್ಕಳನ್ನು (Children) ಅವರ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿಸಲು ನೀವು ವಿಶೇಷ ಕಾಳಜಿ ವಹಿಸಬೇಕು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಮಕ್ಕಳಿಗೆ ತಿಳಿಹೇಳಿ. ಹಾಗಾಗಿ ಮಕ್ಕಳು ನೇರವಾಗಿ ಅವರ ಸ್ನೇಹಿತರೊಂದಿಗೆ ಮಾತನಾಡುವ ಬದಲಿಗೆ ಮಕ್ಕಳನ್ನು ತಮ್ಮ ಸ್ನೇಹಿತರೊಂದಿಗೆ ವೀಡಿಯೊ ಕರೆ ಅಥವಾ ಫೋನ್ ಮೂಲಕ ಸಂಪರ್ಕದಲ್ಲಿರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಅವರಿಗೆ ಒಂಟಿತನ ಕಾಡುವುದಿಲ್ಲ.

ನಿಮ್ಮ ಮಗುವಿನ ಆತಂಕವನ್ನು ನಿವಾರಿಸಿ :
ಈ ಸಮಯದಲ್ಲಿ ಮಗು ಚಿಂತೆ ಮಾಡುವುದು ಸಾಮಾನ್ಯ. ಆದರೆ ನೀವು ನಿಮ್ಮ ಮಗುವಿನಲ್ಲಿ ಭಾವನಾತ್ಮಕ ಚಿಹ್ನೆಗಳನ್ನು ಹುಡುಕಬೇಕು ಮತ್ತು ಅವರೊಂದಿಗೆ ಅದರ ಬಗ್ಗೆ ನಿಧಾನವಾಗಿ ಮಾತನಾಡಬೇಕು. ನೆನಪಿಡಿ, ಎಲ್ಲಾ ಸಮಯದಲ್ಲೂ ಮಕ್ಕಳೊಂದಿಗೆ ಗದರಿ ಮಾತನಾಡುವುದರಿಂದ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬಹುದು. ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಹಾಗಾಗಿ ಸಮಾಧಾನದಿಂದ ಅವರೊಂದಿಗೆ ಮಾತನಾಡಿ ಅವರ ಮನಸ್ಸಿನ ದುಗುಡವನ್ನು ಕಡಿಮೆ ಮಾಡಿ. ಹಾಗೆ ಮಾಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ.

ಇದನ್ನೂ ಓದಿ - Corona- ನಿಮ್ಮ ಒಳ್ಳೆಯ ಅಭ್ಯಾಸ ಕರೋನದ ಅಪಾಯವನ್ನು 31% ಕಡಿಮೆ ಮಾಡುತ್ತೆ

ಮಕ್ಕಳಿಗೆ ಸರಿಯಾದ ಮಾಹಿತಿ ನೀಡಿ:
ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ವಿವರಗಳನ್ನು ಮಕ್ಕಳಿಗೆ ಹೇಳಿ ಅವರನ್ನು ಒತ್ತಡಕ್ಕೆ ಒಳಪಡಿಸದಿರಿ. ಬದಲಿಗೆ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿಯನ್ನು ಅವರಿಗೆ ನೀಡುವುದು ಬಹಳ ಮುಖ್ಯ. ಸಾಂಕ್ರಾಮಿಕ ರೋಗದ ವಿರುದ್ಧ ನಾವು ಯಾವ ರೀತಿ ಹೋರಾಡಬಹುದು ಎಂಬುದನ್ನು ಅವರಿಗೆ ಅರ್ಥ ಮಾಡಿಸುವುದು ಕೂಡ ಬಹಳ ಮುಖ್ಯ. ಈ ಬಗ್ಗೆ ಕಾಳಜಿ ವಹಿಸಿ ನಿಮ್ಮ ಮಕ್ಕಳು ಸದಾ ಉತ್ಸಾಹ, ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News