Ketu Sankramana 2023: ಈ 4 ರಾಶಿಯವರಿಗೆ ಕೇತುವಿನ ತೊಂದರೆಯಿಂದ ಪರಿಹಾರ, ಯಶಸ್ಸಿನ ಜೊತೆಗೆ ಧನಲಾಭ

Ketu Sankramana 2023: ರಾಹು ಮತ್ತು ಕೇತುಗಳು ತಮ್ಮ ರಾಶಿಯನ್ನು 18 ತಿಂಗಳುಗಳಲ್ಲಿ ಬದಲಾಯಿಸುತ್ತವೆ. 2023ರಲ್ಲಿ ರಾಹು ಮತ್ತು ಕೇತು ಸಂಕ್ರಮಿಸಲಿವೆ. ಕೇತು ಸಂಕ್ರಮಣದಿಂದ 4 ರಾಶಿಯ ಜನರಿಗೆ ಅದೃಷ್ಟ ದೊರೆಯಲಿದ್ದು, ಅಪಾರ ಸಂಪತ್ತು ಮತ್ತು ಯಶಸ್ಸು ಸಿಗಲಿದೆ.

Written by - Puttaraj K Alur | Last Updated : Jan 6, 2023, 05:11 PM IST
  • ಕೇತು ಸಂಕ್ರಮಣದಿಂದ ವೃಷಭ ರಾಶಿಯವರ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಲಿದೆ
  • ಕೇತು ಸಂಕ್ರಮಿಸಿದ ತಕ್ಷಣ ಸಿಂಹ ರಾಶಿಯವರಿಗೆ ಒಂದರ ಹಿಂದೆ ಒಂದರಂತೆ ಅನೇಕ ಲಾಭ ದೊರೆಯುತ್ತವೆ
  • ಧನು ರಾಶಿಯವರಿಗೆ ವೃತ್ತಿಜೀವನದಲ್ಲಿ ಯಶಸ್ಸು, ವ್ಯಾಪಾರದಲ್ಲಿ ಲಾಭದ ಜೊತೆಗೆ ಆದಾಯ ಹೆಚ್ಚಲಿದೆ
Ketu Sankramana 2023: ಈ 4 ರಾಶಿಯವರಿಗೆ ಕೇತುವಿನ ತೊಂದರೆಯಿಂದ ಪರಿಹಾರ, ಯಶಸ್ಸಿನ ಜೊತೆಗೆ ಧನಲಾಭ title=
ಕೇತು ರಾಶಿ ಪರಿವರ್ತನ 2023

ಕೇತು ರಾಶಿ ಪರಿವರ್ತನ 2023: ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ರಾಹು ಮತ್ತು ಕೇತು ಗ್ರಹಗಳು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. ಹೀಗಾಗಿಯೇ ಜಾತಕದಲ್ಲಿ ರಾಹು-ಕೇತುಗಳ ಅಶುಭ ಸ್ಥಾನವು ವ್ಯಕ್ತಿಯ ಜೀವನದಲ್ಲಿ ಬಹಳಷ್ಟು ತೊಂದರೆ ನೀಡುತ್ತದೆ. ಅದಕ್ಕಾಗಿಯೇ ರಾಹು ಮತ್ತು ಕೇತು ಗ್ರಹಗಳು ರಾಶಿಗಳನ್ನು ಬದಲಾಯಿಸಿದಾಗ, ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

2023ರ ಅಕ್ಟೋಬರ್ 30ರಂದು ರಾಹು ಮತ್ತು ಕೇತು ಸಂಕ್ರಮಣವಾಗಲಿದೆ. ರಾಹು ಮೇಷ ರಾಶಿಯಲ್ಲಿ ಸಾಗಲಿದ್ದು, ಕೇತು ತುಲಾ ರಾಶಿಗೆ ಪ್ರವೇಶಿಸಲಿದೆ. ಸದ್ಯ ಕೇತು ಕನ್ಯಾ ರಾಶಿಯಲ್ಲಿದೆ. ತುಲಾ ರಾಶಿಯಲ್ಲಿ ಕೇತು ಸಂಕ್ರಮಿಸಿದ ತಕ್ಷಣವೇ 4 ರಾಶಿಗಳ ಅದೃಷ್ಟವು ತೆರೆದುಕೊಳ್ಳುತ್ತದೆ. ಕೇತುವಿನ ಸಂಕ್ರಮಣದಿಂದ ಯಾವ ರಾಶಿಯವರಿಗೆ ಅದೃಷ್ಟ ದೊರೆಯುತ್ತದೆ ಎಂಬುದನ್ನು ತಿಳಿಯಿರಿ.

ವೃಷಭ ರಾಶಿ: 2023ರಲ್ಲಿ ಕೇತು ಸಂಕ್ರಮಣವು ವೃಷಭ ರಾಶಿಯವರಿಗೆ ಸಾಕಷ್ಟು ಸಮಾಧಾನವನ್ನು ನೀಡುತ್ತದೆ. ಈ ರಾಶಿಯವರ ಆರೋಗ್ಯ ಸುಧಾರಿಸಲಿದೆ. ಮಾನಸಿಕ ಒತ್ತಡ ಮತ್ತು ಸಂಕಟದಿಂದ ಮುಕ್ತಿ ದೊರೆಯಲಿದೆ. ನೀವು ದೂರ ಪ್ರಯಾಣ ಹೋಗುವಿರಿ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ. ಪಾಲುದಾರಿಕೆ ಕಾರ್ಯಗಳಲ್ಲಿ ಲಾಭವಿದೆ.

ಇದನ್ನೂ ಓದಿ: Zodiac signs: ಈ ರಾಶಿಯವರು ಜಗಳಕ್ಕೆ ನಿಂತ್ರೆ ಸೋಲುವ ಮಾತೇ ಇಲ್ಲ

ಸಿಂಹ ರಾಶಿ: ಅಕ್ಟೋಬರ್ ನಲ್ಲಿ ಕೇತು ಸಂಕ್ರಮಿಸಿದ ತಕ್ಷಣ ಸಿಂಹ ರಾಶಿಯವರಿಗೆ ಒಂದರ ಹಿಂದೆ ಒಂದರಂತೆ ಅನೇಕ ಲಾಭಗಳು ದೊರೆಯುತ್ತವೆ. ಕುಟುಂಬ ಸದಸ್ಯರೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ. ಆಸ್ತಿಯಲ್ಲಿ ಹೂಡಿಕೆ ಲಾಭವಾಗಲಿದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.

ಧನು ರಾಶಿ: ಅಕ್ಟೋಬರ್ 2023ರಲ್ಲಿ ತುಲಾ ರಾಶಿಯಲ್ಲಿ ಸಂಭವಿಸಲಿರುವ ಕೇತುವಿನ ಸಂಕ್ರಮವು ಧನು ರಾಶಿಯವರಿಗೆ ಸಹ ಪ್ರಯೋಜನಕಾರಿಯಾಗಿದೆ. ಇವರು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ವ್ಯಾಪಾರದಲ್ಲಿ ಲಾಭ ಇರಲಿದ್ದು, ಆದಾಯ ಹೆಚ್ಚಲಿದೆ. ಹಳೆಯ ಕಾಯಿಲೆಯಿಂದ ನೀವು ಮುಕ್ತಿ ಹೊಂದಬಹುದು.

ಇದನ್ನೂ ಓದಿ: Chanakya Niti: ಚಾಣಕ್ಯನ ಈ ನೀತಿಗಳನ್ನು ಅನುಸರಿಸಿದರೆ ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ

ಮಕರ ರಾಶಿ: ಕೇತು ಸಂಕ್ರಮಣದಿಂದ ಮಕರ ರಾಶಿಯವರಿಗೆ ಬಹಳಷ್ಟು ಹಣ ಗಳಿಸುವ ಅವಕಾಶ ದೊರೆಯಲಿದೆ. ಹಣದ ಹರಿವಿನ ಹೊಸ ಮಾರ್ಗಗಳು ನಿಮಗೆ ಸಿಗಲಿವೆ. ಉದ್ಯೋಗದಲ್ಲಿರುವವರು ದೊಡ್ಡ ಹುದ್ದೆಯನ್ನು ಪಡೆಯಬಹುದು. ವ್ಯಾಪಾರಸ್ಥರ ಕೆಲಸವೂ ಚೆನ್ನಾಗಿ ನಡೆಯುತ್ತದೆ. ನೀವು ದೊಡ್ಡ ಲಾಭ ಗಳಿಸುತ್ತೀರಿ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee News Kannada ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News