International Women’s Day 2021: ಅಂತರಾಷ್ಟ್ರೀಯ ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ

ಪ್ರತಿವರ್ಷ ಜಾಗತಿಕವಾಗಿ ಮಾರ್ಚ್ 8 ನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ವೃತ್ತಿಪರ ಪರಿಸರದಲ್ಲಿ ಅವರು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾ, ಎಲ್ಲಾ ಹಂತದ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಈ ದಿನ ಆಚರಿಸುತ್ತದೆ. ಮಾರ್ಚ್ 8 ರಂದು ಜಗತ್ತಿನ ಮೂಲೆ ಮೂಲೆಯ ಮಹಿಳೆಯರು ಒಟ್ಟಿಗೆ ಸೇರುತ್ತಾರೆ, ಇದು ಲಿಂಗ ಸಮಾನತೆಯನ್ನು ವೇಗಗೊಳಿಸುವ ಕ್ರಿಯೆಯ ಕರೆಯಾಗಿದೆ.

Last Updated : Mar 8, 2021, 04:08 PM IST
International Women’s Day 2021: ಅಂತರಾಷ್ಟ್ರೀಯ ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ  title=

ನವದೆಹಲಿ: ಪ್ರತಿವರ್ಷ ಜಾಗತಿಕವಾಗಿ ಮಾರ್ಚ್ 8 ನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ವೃತ್ತಿಪರ ಪರಿಸರದಲ್ಲಿ ಅವರು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾ, ಎಲ್ಲಾ ಹಂತದ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಈ ದಿನ ಆಚರಿಸುತ್ತದೆ. ಮಾರ್ಚ್ 8 ರಂದು ಜಗತ್ತಿನ ಮೂಲೆ ಮೂಲೆಯ ಮಹಿಳೆಯರು ಒಟ್ಟಿಗೆ ಸೇರುತ್ತಾರೆ, ಇದು ಲಿಂಗ ಸಮಾನತೆಯನ್ನು ವೇಗಗೊಳಿಸುವ ಕ್ರಿಯೆಯ ಕರೆಯಾಗಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಇಡೀ ವಿಶ್ವ ಹುಡುಕುತ್ತಿರುವುದೇನು?

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 2021 ರ ಥೀಮ್ :

ಪ್ರತಿ ವರ್ಷ ಈ ದಿನವನ್ನು ಹೊಸ ಬಗೆಯ ಥೀಮ್ ನೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಷಯವೆಂದರೆ  'ಸವಾಲನ್ನು ಆಯ್ಕೆಮಾಡಿ' ಎನ್ನುವುದಾಗಿ ಆದ್ದರಿಂದ ಎಲ್ಲರೂ #ChooseToChallenge ಎನ್ನುವ ಸಂಕಲ್ಪ ಮಾಡಬೇಕು ಎನ್ನುವುದನ್ನು ಈ ಥೀಮ್ ಹೇಳುತ್ತದೆ.ಈ ವರ್ಷದ ಥೀಮ್ COVID-19 ಸಾಂಕ್ರಾಮಿಕದಿಂದ ಉಂಟಾದ ಸವಾಲುಗಳನ್ನು ಎತ್ತಿ ತೋರಿಸುತ್ತದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ 2021:

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day)ಯ ಇತಿಹಾಸ ಫೆಬ್ರವರಿ 28, 1909 ರಿಂದ ಆರಂಭವಾಯಿತು ಎಂದು ಹೇಳಬಹುದು.ಆಗ ನ್ಯೂಯಾರ್ಕ್‌ನಲ್ಲಿ ನಡೆದ  ಗಾರ್ಮೆಂಟ್ ಕಾರ್ಮಿಕರ ಮುಷ್ಕರದ ಗೌರವಾರ್ಥ ಅಮೆರಿಕದ ಸಮಾಜವಾದಿ ಪಕ್ಷವು ಮಾರ್ಚ್ 8, 1909 ಅನ್ನು ನಿಗದಿಪಡಿಸಿತ್ತು. ಆದರೆ ಅಂತರರಾಷ್ಟ್ರೀಯ ಮಹಿಳಾ ದಿನ ಎನ್ನುವ ಪದವನ್ನು ಆನಂತರ ಬಳಸಲಾಯಿತು. ವಿಶ್ವದಾದ್ಯಂತದ ಮೊದಲ ಅಧಿಕೃತ ಆಚರಣೆಗಳು 1911 ರಲ್ಲಿ ನಡೆದವು, ಈ ಸಂದರ್ಭದಲ್ಲಿ ಹಲವಾರು ಯುರೋಪಿಯನ್ ದೇಶಗಳ ಮಹಿಳೆಯರು ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: International Women’s Day: "ಸೂಪರ್ ವುಮನ್ ಸಿಂಡ್ರೋಮ್" ಬಗ್ಗೆ ನಿಮಗೆಷ್ಟು ಗೊತ್ತು?

ಮತದಾನದ ಹಕ್ಕನ್ನು ಮತ್ತು ಸಾರ್ವಜನಿಕ ಕಚೇರಿಗಳನ್ನು ಹೊಂದುವ ಹಕ್ಕನ್ನು ಕೋರಲು ಲಕ್ಷಾಂತರ ಮಹಿಳೆಯರು  ಈ ಸಂದರ್ಭದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆದರೆ ಕಾಲಾಂತರದಲ್ಲಿ ಇದು ಮಹಿಳೆಗೆ ಸಂಬಂಧಿತ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಲು ಮಹತ್ವದ ಪಾತ್ರವನ್ನು ವಹಿಸಿತು. ಅದರಲ್ಲಿ ಪ್ರಮುಖವಾಗಿ ಉದ್ಯೋಗದಲ್ಲಿನ ಲಿಂಗ ತಾರತಮ್ಯ, ಸಮಾನ ವೇತನ ಇಂತಹ ಸಂಗತಿಗಳೆಲ್ಲಾ ಚರ್ಚೆಗೆ ಬಂದವು.

ಇದನ್ನೂ ಓದಿ: ಮಹಿಳಾ ದಿನಾಚರಣೆ: ಸ್ತ್ರೀ ಸಮಾನಳಲ್ಲ; ಪುರುಷನಿಗಿಂತ ಸಮರ್ಥಳು!

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲು ಮತ್ತೊಂದು ಮಹತ್ವದ ಕಾರಣವೆಂದರೆ, ಈ ದಿನವೇ, ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಮಹಿಳಾ ಜವಳಿ ಕಾರ್ಮಿಕರು ಪ್ರತಿಭಟನೆಗಾಗಿ ಬೀದಿಗಿಳಿದರು ಮತ್ತು ಈ ಕಾರ್ಯವು ರಷ್ಯಾದ ಕ್ರಾಂತಿಗೆ ಪೂರಕ ಶಕ್ತಿಯಾಯಿತು.ಅಂತಿಮವಾಗಿ ಮುಂದೆ ಈ ದಿನವನ್ನು ವಿಶ್ವಸಂಸ್ಥೆಯು ಗುರುತಿಸಿತು ಮತ್ತು ಅದನ್ನು 1967 ರಿಂದ ಆಚರಿಸಲು ಪ್ರಾರಂಭಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News