ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿಇಂದಿನಿಂದ ಫ್ಲವರ್ ಶೋ: ಥೀಮ್, ಸಮಯ, ಪಾರ್ಕಿಂಗ್, ಶುಲ್ಕದ ಬಗ್ಗೆ ಇಲ್ಲಿದೆ ಫುಲ್ ಡೀಟೈಲ್ಸ್

Flower Show At Lalbagh: ಈ ವರ್ಷ ಕರ್ನಾಟಕದ ಶಕ್ತಿ ಸೌಧ ಎಂತಲೇ ಕರೆಯಲ್ಪಡುವ ವಿಧಾನಸೌಧ ಹಾಗೂ ಅದರ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಥೀಮ್ ನಲ್ಲಿ ಫ್ಲವರ್ ಶೋ ನಡೆಯಲಿದೆ. ರಾಜ್ಯದ ಹಿರಿಮೆ ಹಿಗ್ಗಿಸಿದ ಕೆಂಗಲ್ ಹನುಮಂತಯ್ಯ ಅವರ ಬದುಕು, ಸಾಧನೆ ಹಾಗೂ ಅವರ ಕನಸುಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಫಲಪುಷ್ಪ ಫಲಕಗಳ ಮೂಲಕ ತಿಳಿಸಲಾಗುತ್ತಿದೆ. 

Written by - Yashaswini V | Last Updated : Aug 4, 2023, 10:54 AM IST
  • ಇಂದಿನಿಂದ ಲಾಲ್‌ಬಾಗ್‌ನಲ್ಲಿ ಪ್ಲವರ್ ಶೋ ಆರಂಭ
  • ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರತಿವರ್ಷ ಜರುಗುವ ಫ್ಲವರ್ ಶೋ
  • ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ 214ನೇ ಫಲಪುಷ್ಪ ಮೇಳ
ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿಇಂದಿನಿಂದ ಫ್ಲವರ್ ಶೋ:  ಥೀಮ್, ಸಮಯ, ಪಾರ್ಕಿಂಗ್, ಶುಲ್ಕದ ಬಗ್ಗೆ ಇಲ್ಲಿದೆ ಫುಲ್ ಡೀಟೈಲ್ಸ್  title=
Lalbagh Flower Show

Bengaluru News Flower Show At Lalbagh: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರತಿವರ್ಷ ನಡೆಯಲಿರುವ  ಜನಪ್ರಿಯ ಫ್ಲವರ್ ಶೋಗೆ ಕೌಂಟ್ ಡೌನ್ ಶುರುವಾರಿಗೆ. ಇಂದು (ಆಗಸ್ಟ್ 04, 2023) 6ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲಾಲ್‌ಬಾಗ್‌ನಲ್ಲಿ ನಡೆಯುವ 214ನೇ ಫಲಪುಷ್ಪ ಮೇಳಕ್ಕೆ ಅಧಿಕೃತ  ಚಾಲನೆ ನೀಡಲಿದ್ದಾರೆ. 

ಲಾಲ್‌ಬಾಗ್‌ ಫ್ಲವರ್ ಶೋ ಥೀಮ್: 
ಈ ವರ್ಷ ಕರ್ನಾಟಕದ ಶಕ್ತಿ ಸೌಧ ಎಂತಲೇ ಕರೆಯಲ್ಪಡುವ ವಿಧಾನಸೌಧ ಹಾಗೂ ಅದರ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಥೀಮ್ ನಲ್ಲಿ ಫ್ಲವರ್ ಶೋ ನಡೆಯಲಿದೆ. ರಾಜ್ಯದ ಹಿರಿಮೆ ಹಿಗ್ಗಿಸಿದ ಕೆಂಗಲ್ ಹನುಮಂತಯ್ಯ ಅವರ ಬದುಕು, ಸಾಧನೆ ಹಾಗೂ ಅವರ ಕನಸುಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಫಲಪುಷ್ಪ ಫಲಕಗಳ ಮೂಲಕ ತಿಳಿಸಲಾಗುತ್ತಿದೆ. 

3.5 ಲಕ್ಷ ಬಗೆಬಗೆಯ ಹೂವುಗಳಿಂದ ನಿರ್ಮಾಣವಾಗಿದೆ ಕಣ್ಣು ಕೊರೈಸುವ ವಿಧಾನಸೌಧ: 
ಲಾಲ್‌ಬಾಗ್‌ನ ಕೇಂದ್ರ ಬಿಂದು ಗಾಜಿನ ಮನೆಯಲ್ಲಿ 3.5 ಲಕ್ಷ  ಬಗೆಬಗೆಯ ಹೂವಿನಲ್ಲಿ ವಿಧಾನಸೌಧ ತಲೆಎತ್ತಿದ್ದು, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಲಾಲ್‌ಬಾಗ್‌ ಫ್ಲವರ್ ಶೋನಲ್ಲಿ ಹೂವಿನ ವಿಧಾನಸೌಧವೇ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಲಿದೆ. 

ಇದನ್ನೂ ಓದಿ- ಭಾರತೀಯ ಈ ಬೌದ್ಧ ಸ್ಥಳಗಳು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತವೆ..ನೀವು ಬೇಟಿ ನೀಡಿ

ದೇಶೀಯ ಹೂವುಗಳಿಗೆ ಮನ್ನಣೆ, ಸ್ಕಾಟ್ಲೆಂಟ್, ಇಂಡೋನೇಷಿಯಾದ ಹೂವುಗಳಿಗೆ ಗೇಟ್ ಪಾಸ್!
2023ರ ಲಾಲ್‌ಬಾಗ್‌ ಫ್ಲವರ್ ಶೋನ ಮತ್ತೊಂದು ವಿಶೇಷವೆಂದರೆ ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಸ್ಕಾಟ್ಲೆಂಟ್, ಇಂಡೋನೇಷಿಯಾದ ಹೂವುಗಳಿಗೆ ಗೇಟ್ ಪಾಸ್ ನೀಡಲಾಗಿದೆ. ಬದಲಿಗೆ ಇಲ್ಲಿ ದೇಶೀಯ ಹೂವುಗಳಿಗೆ ಮನ್ನಣೆ ನೀಡಲಾಗಿದ್ದು ಕೊಲ್ಕತ್ತ, ಕೇರಳ, ತಮಿಳುನಾಡು, ಆಂಧ್ರ  ಪ್ರದೇಶ ಮತ್ತಿತರ ರಾಜ್ಯಗಳಿಂದ ವಿಶಿಷ್ಟ್ಯ ಹೂಗಳು ಬರುತ್ತಿದ್ದು ಒಟ್ಟು 20 ರಿಂದ 25ಲಕ್ಷ ವೈವಿಧ್ಯಮಯ ಹೂವುಗಳು ಜನರ ಕಣ್ಮನ ಸೆಳೆಯಲು ಸಜ್ಜಾಗಿವೆ. 

ಒಟ್ಟು 12ದಿನಗಳ ಕಾಲ ನಡೆಯಲಿರುವ ಫ್ಲವರ್ ಶೋ: 
ರಾಜ್ಯದ ಮೂಲೆ ಮೂಲೆಗಳಿಂದಲೂ ಜನರನ್ನು ಆಕರ್ಷಿಸುವ ಲಾಲ್‌ಬಾಗ್‌ ಫ್ಲವರ್ ಶೋ ಇಂದಿನಿಂದ ಎಂದರೆ ಆಗಸ್ಟ್ 04ರಿಂದ ಆಗಸ್ಟ್ 15ರವರೆಗೆ ಒಟ್ಟು 12 ದಿನಗಳ ಕಾಲ ನಡೆಯಲಿದೆ. 

ವೆಚ್ಚ: 
ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು  ಈ ಫ್ಲವರ್ ಶೋಗೆ 2 ಕೋಟಿ ಅಧಿಕ ವೆಚ್ಚ‌ವಾಗಿದೆ.  ಈ ಬಾರಿಯ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಸುಮಾರು 10ರಿಂದ 12ಲಕ್ಷದಷ್ಟು ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. 

ನಾಲ್ಕು ಪ್ರವೇಶದ್ವಾರ: 
ಇನ್ನೂ ಫ್ಲವರ್ ಶೋ ವೀಕ್ಷಣೆಗಾಗಿ ಲಾಲ್‌ಬಾಗ್‌ಗೆ ಆಗಮಿಸುವವರಿಗಾಗಿ ನಾಲ್ಕು ಕಡೆ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲವೆಡೆ ಪಾರ್ಕಿಂಗ್ ವ್ಯವಸ್ಥೆಯನ್ನು ನಿಷೇಧಿಸಿ ಟ್ರಾಫಿಕ್ ಪೊಲೀಸರು ಆದೇಶ ಹೊರಡಿಸಿದ್ದಾರೆ. ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಬಿಎಂಟಿಸಿ ಬಸ್, ಆಟೋ, ಕ್ಯಾಬ್ ಸೇರಿದಂತೆ ಸಾರ್ವಜನಿಕ ಸಾರಿಗೆಗಳನ್ನು ಬಳಸುವುದರಿಂದ ಸಂಚಾರ ದಟ್ಟಣೆಯ ಜೊತೆಗೆ ಪಾರ್ಕಿಂಗ್ ಸಮಸ್ಯೆಯಿಂದಲೂ ಪರಿಹಾರ ದೊರೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. 

ಇದನ್ನೂ ಓದಿ- ಮಹಾರಾಷ್ಟ್ರದ ಈ ಪ್ರವಾಸಿ ಸ್ಥಳಗಳು ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕತೆಯ ಅದ್ಭುತ ಸಂಗಮವಾಗಿವೆ..ಒಮ್ಮೆ ಬೇಟಿ ನೀಡಿ

ಎಲ್ಲೆಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ: 
* ಮರಿಗೌಡ ರಸ್ತೆ ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮಾನ್ಸ್ ರಸ್ತೆ ಎರಡು ಬದಿ
* ಕೆ.ಹೆಚ್ ರಸ್ತೆ, ಕೆ.ಹೆಚ್ ವೃತ್ತದಿಂದ ಶಾಂತಿನಗರ ಜಂಕ್ಷನ್ ಎರಡು ಬದಿ
* ಲಾಲ್ ಬಾಗ್ ರಸ್ತೆ ಸುಬ್ಬಯ್ಯ ವೃತ್ತದಿಂದ ಲಾಲ್ ಬಾಗ್ ಮುಖ್ಯ ದ್ವಾರ
* ಸಿದ್ದಯ್ಯ ರಸ್ತೆ ಊರ್ವಶಿ ಥೀಯೆಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್
* ಬಿ.ಎಂಟಿಸಿ ರಸ್ತೆ ಎರಡೂ ಬದಿಗಳಲ್ಲಿ ಪಾರ್ಕಿಂಗ್ ನಿಷೇಧ
* ಕೃಂಬಿಗಲ್ ರಸ್ತೆಯ ಎರಡೂ ಬದಿ ನಿಷೇಧ
* ಲಾಲ್ ಬಾಗ್ ವೆಸ್ಟ್ ಗೇಟ್ ನಿಂದ ಆರ್.ವಿ ಟೀಚರ್ಸ್ ಕಾಲೇಜ್ ವರೆಗೆ 
* ಆರ್ ವಿ ಟೀಚರ್ಸ್ ಕಾಲೇಜು ನಿಂದ ಅಶೋಕ ಪಿಲ್ಲರ್
* ಅಶೋಕ ಪಿಲ್ಲರ್ ನಿಂದ ಸಿದ್ಧಾಪುರ ಜಂಕ್ಷನ್ ವರೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ. 

ಲಾಲ್‌ಬಾಗ್‌ ಫ್ಲವರ್ ಶೋಗೆ ಆಗಮಿಸುವವರಿಗೆ ಪಾರ್ಕಿಂಗ್ ಗೆ ಎಲ್ಲಿ ಅವಕಾಶವಿದೆ ಎಂದು ನೋಡುವುದಾದರೆ...
>> ಮರಿಗೌಡ ರಸ್ತೆ ಅಮೀನ್ ಕಾಲೇಜು ಆವರಣ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. 
>> ಕೆ.ಹೆಚ್ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ ನಾಲ್ಕು ಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 
>> ಇದಲ್ಲದೆ ಮರಿಗೌಡ ರಸ್ತೆ ಹಾಪ್ ಕಾಮ್ಸ್ ಬಳಿ ಹಾಗೂ ಜೆ.ಸಿ ರಸ್ತೆ ಕಾರ್ಪೋರೇಷನ್ ಬಳಿಯೂ ಪಾರ್ಕಿಂಗ್ ಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. 

ಟಿಕೆಟ್ ದರ: 

  • ಇನ್ನೂ ಲಾಲ್‌ಬಾಗ್‌ ಫ್ಲವರ್ ಶೋನಲ್ಲಿ ವಾರದ ದಿನಗಳಲ್ಲಿ ವಯಸ್ಕರಿಗೆ 70 ರೂ. ಟಿಕೆಟ್ ದರ ನಿಗದಿಗೊಳಿಸಲಾಗಿದ್ದರೆ, ವಾರಾಂತ್ಯದಲ್ಲಿ 80 ರೂ. ದರ ನಿಗಡಿಯಾಗಿದೆ. 
  • ಮಕ್ಕಳಿಗೆ 30ರೂ. ದರ ನಿಗದಿ ಮಾಡಲಾಗಿದೆ. ಆದಾಗ್ಯೂ, ಶಾಲಾ ಯೂನಿಫಾರ್ಮ್ ಧರಿಸಿ 
  • ಐಡಿ ಕಾರ್ಡ್ ನೊಂದಿಗೆ ಬರುವ ಮಕ್ಕಳಿಗೆ ಉಚಿತ ಪ್ರವೇಶ ಲಭ್ಯವಿರಲಿದೆ. 

ಭದ್ರತೆಯ ದೃಷ್ಟಿಯಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ 200 ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು 400ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News