ಮಂಗಳ ​​ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಸಿಗಲಿದೆ ಬಡ್ತಿ, ಮುಟ್ಟಿದ್ದೆಲ್ಲಾ ಚಿನ್ನ

ಜ್ಯೋತಿಷ್ಯದಲ್ಲಿ, ಮಂಗಳ ಗ್ರಹವನ್ನು ಗ್ರಹಗಳ ಸೇನಾಪತಿ ಎಂದು ಕರೆಯಲಾಗುತ್ತದೆ. ಮಂಗಳನ ರಾಶಿ ಪರಿವರ್ತನೆ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.  

Written by - Zee Kannada News Desk | Last Updated : Feb 6, 2022, 03:32 PM IST
  • ವೃತ್ತಿಯಲ್ಲಿ ಆಗಲಿದೆ ಪ್ರಗತಿ
  • ವ್ಯಾಪಾರ, ವ್ಯವಹಾರ ವಿಸ್ತರಿಸಲಿದೆ
  • ಉದ್ಯೋಗದಲ್ಲಿ ಆದಾಯ ಹೆಚ್ಚಾಗುತ್ತದೆ
ಮಂಗಳ ​​ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಸಿಗಲಿದೆ ಬಡ್ತಿ, ಮುಟ್ಟಿದ್ದೆಲ್ಲಾ ಚಿನ್ನ title=
ವೃತ್ತಿಯಲ್ಲಿ ಆಗಲಿದೆ ಪ್ರಗತಿ (file photo)

ನವದೆಹಲಿ : Mangal Parivartan 2022 : ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಫೆಬ್ರವರಿ 26 ರಂದು ಮಂಗಳ ಗ್ರಹ (Mars transit) ಮಕರ ರಾಶಿಯನ್ನು ಪ್ರವೇಶಿಸಲಿದೆ. ಜ್ಯೋತಿಷ್ಯದಲ್ಲಿ, ಮಂಗಳ ಗ್ರಹವನ್ನು ಗ್ರಹಗಳ ಸೇನಾಪತಿ ಎಂದು ಕರೆಯಲಾಗುತ್ತದೆ. ಮಂಗಳನ ರಾಶಿ ಪರಿವರ್ತನೆ (Mangal Parivartan) ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.  

ಮೇಷ (Aries): ಉದ್ಯೋಗದ ಹುಡುಕಾಟದಲ್ಲಿ ಯಶಸ್ವಿಯಾಗುತ್ತೀರಿ. ಮಂಗಳ ಸಂಚಾರದಿಂದ (mars Transit) ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ, ದುಂದುವೆಚ್ಚವನ್ನು ನಿಯಂತ್ರಿಸಬೇಕು. ಕೆಲಸ ಕಾರ್ಯಗಳಲ್ಲಿ ಜೀವನ ಸಂಗಾತಿಯ ಬೆಂಬಲ ಸಿಗುತ್ತದೆ. 

ವೃಷಭ (Taurus): ಉದ್ಯೋಗ ಉತ್ತಮವಾಗಲಿದೆ. ಕೆಲಸದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭವನ್ನು ಪಡೆಯಬಹುದು. ಆರೋಗ್ಯದ (Health issue) ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. 

ಇದನ್ನೂ ಓದಿ : Relationship Tips: ನಿಮ್ಮ ಸಂಗಾತಿಗೆ ಅಪ್ಪಿ-ತಪ್ಪಿಯೂ ಕೂಡ ಈ ಸಿಕ್ರೆಟ್ ಹೇಳಬೇಡಿ, ಇಲ್ದಿದ್ರೆ...?

ಮಿಥುನ (Gemini) : ಬೆಟ್ಟಿಂಗ್ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. 

ಕರ್ಕ (Cancer): ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ವ್ಯಾಪಾರದಲ್ಲಿ ಹಣ ಮತ್ತು ಲಾಭವಾಗಲಿದೆ.  ಇದಲ್ಲದೆ, ಉದ್ಯೋಗದಲ್ಲಿ ತೃಪ್ತಿದಾಯಕ ಪ್ರಗತಿ ಇರುತ್ತದೆ. 

ಸಿಂಹ (Leo): ಸಂಚಾರದ ಸಮಯದಲ್ಲಿ ಬಯಸಿದ ಕೆಲಸ ಸಿಗದೆ ಮನಸ್ಸು ಖಿನ್ನತೆಗೆ ಒಳಗಾಗಬಹುದು. ಇದಲ್ಲದೆ, ಈ ಸಮಯದಲ್ಲಿ ತಪ್ಪು ಸಲಹೆಯನ್ನು ಅಳವಡಿಸಿಕೊಳ್ಳದಿರಿ.  ಈ ಅವಧಿಯಲ್ಲಿ  ಯಾವುದೇ ಹೊಸ ಕೆಲಸ ಆರಂಭಿಸುವುದು ಒಳ್ಳೆಯದಲ್ಲ.  

ಕನ್ಯಾ (Virgo): ಅನಗತ್ಯ ಉದ್ವೇಗ ಉಂಟಾಗಬಹುದು. ಸಂಕ್ರಮಣದ ಸಮಯದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಕೆಲಸದ ಹೊರೆಯಿಂದ ಮುಕ್ತಿ ಸಿಗಬಹುದು. ಇದಲ್ಲದೆ, ಸಂಕ್ರಮಣದ ಸಮಯದಲ್ಲಿ ಅದೃಷ್ಟವೂ ಇರುತ್ತದೆ.  

ಇದನ್ನೂ ಓದಿ : Sun Transit 2022: ಶೀಘ್ರದಲ್ಲಿಯೇ ಈ 4 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಫಳಫಳ ಹೊಳೆಯಲಿದೆ, ಕಾರಣ ಇಲ್ಲಿದೆ

ತುಲಾ  (Libra): ಮಂಗಳ ಸಂಕ್ರಮಣದ ಅವಧಿಯಲ್ಲಿ ವ್ಯಾಪಾರ ವಿಸ್ತರಣೆಯಾಗಲಿದೆ. ಉದ್ಯೋಗದಲ್ಲಿ ಆದಾಯ ಹೆಚ್ಚಾಗಬಹುದು. ಕೆಲಸದಲ್ಲಿ ಯಶಸ್ಸು ಸಿಗಲಿದೆ.  

ವೃಶ್ಚಿಕ  (Scorpio): ಸಂಕ್ರಮಣದ ಅವಧಿಯಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಕಠಿಣ ಪರಿಶ್ರಮವು ಯಶಸ್ಸನ್ನು ತರುತ್ತದೆ. 

ಧನು ರಾಶಿ (Sagittarius) : ಪಾಲುದಾರಿಕೆ ವ್ಯವಹಾರದಿಂದ ಆರ್ಥಿಕ ನಷ್ಟ ಉಂಟಾಗಬಹುದು. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶವಿರುತ್ತದೆ.  

ಇದನ್ನೂ ಓದಿ : Gemstone: ರತ್ನವನ್ನು ಧರಿಸುವ ಮೊದಲು ಈ ವಿಶೇಷ ನಿಯಮವನ್ನು ತಿಳಿದುಕೊಳ್ಳಿ

ಮಕರ (Capricorn): ಸಂಕ್ರಮಣದ ಸಮಯದಲ್ಲಿ ಪರಸ್ಪರ ವಿವಾದ ಉಂಟಾಗಬಹುದು. ವ್ಯರ್ಥ ಖರ್ಚು ಹೆಚ್ಚಾಗಲಿದೆ. ಮಾತಿನ ಮೇಲೆ ಹಿಡಿತವಿರಲಿ. 

ಕುಂಭ (Aquarius) : ಮಂಗಳ ಸಂಕ್ರಮಣ  ಸಮಯದಲ್ಲಿ, ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.  ಕೌಟುಂಬಿಕ ಕಲಹಗಳು ಬಗೆಹರಿಯಬಹುದು. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. 

ಮೀನ (Pisces): ಉದ್ಯೋಗಕ್ಕೆ ಸಂಬಂಧಿಸಿದ ಕೆಲಸದಲ್ಲಿ ಯಶಸು ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕುಟುಂಬದಲ್ಲಿ ಸಂತೋಷ ಮನೆ ಮಾಡಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News