House Cleaning Tips: ನೆಲ ಒರೆಸುವ ನೀರಿಗೆ ಈ ವಸ್ತು ಬೆರೆಸಿದರೆ ಸಾಕು ಚಿಟಿಕೆಯಲ್ಲಿ ಫಳಫಳ ಅಂತಾ ಹೊಳೆಯುವುದು ಮನೆ!

House Cleaning Tips: ನೀವು ಮನೆಯ ನೆಲವನ್ನು ಹೊಳೆಯುವಂತೆ ಮಾಡಲು ಬಯಸಿದರೆ, ಒಂದು ಬಕೆಟ್ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಬಳಿಕ ನೆಲವನ್ನು ಸ್ವಚ್ಛಗೊಳಿಸಿದೆ. ಈ ರೀತಿ ಮಾಡುವುದರಿಂದ ನೆಲವನ್ನು ಹೊಳೆಯುವಂತೆ ಮಾಡುವುದಲ್ಲದೆ ಹಳದಿ ಬಣ್ಣವನ್ನು ಸಹ ಹೋಗಲಾಡಿಸಬಹುದು

Written by - Bhavishya Shetty | Last Updated : Feb 19, 2023, 02:25 AM IST
    • ಒಂದು ಬಕೆಟ್ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ
    • ಅಡುಗೆ ಸೋಡಾದ ಪುಡಿಯನ್ನು ಒಂದು ಮಗ್ ನೀರಿನಲ್ಲಿ ಬೆರೆಸಿ ಹತ್ತಿ ಬಟ್ಟೆಯನ್ನು ಅದ್ದಿ ಸ್ವಚ್ಛಗೊಳಿಸಿ
    • ಇದರ ಸಹಾಯದಿಂದ ನಿಮ್ಮ ಮನೆಯ ನೆಲವನ್ನು ಬಿಳಿಯಾಗಿಸಬಹುದು.
House Cleaning Tips: ನೆಲ ಒರೆಸುವ ನೀರಿಗೆ ಈ ವಸ್ತು ಬೆರೆಸಿದರೆ ಸಾಕು ಚಿಟಿಕೆಯಲ್ಲಿ ಫಳಫಳ ಅಂತಾ ಹೊಳೆಯುವುದು ಮನೆ! title=
Home Cleaning

House Cleaning Tips: ಸಾಮಾನ್ಯವಾಗಿ ಜನರು ಮನೆಯ ಹಳದಿ ನೆಲದಿಂದ ತುಂಬಾ ಅಸಮಾಧಾನಗೊಳ್ಳುತ್ತಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲುಯಾವ ವಿಧಾನಗಳನ್ನು ಅನುಸರಿಸುತ್ತೀರಿ ಎಂಬುದು ತಿಳಿದಿಲ್ಲ. ಆದರೆ ಈ ಲೇಖನದಲ್ಲಿ ನೀಡಲಾದ ಕೆಲವು ಸಲಹೆಗಳು ನಿಮಗೆ ತುಂಬಾ ಉಪಯುಕ್ತವಾಗಬಹುದು. ಇದರ ಸಹಾಯದಿಂದ ನಿಮ್ಮ ಮನೆಯ ನೆಲವನ್ನು ಬಿಳಿಯಾಗಿಸಬಹುದು. ಮಾತ್ರವಲ್ಲದೆ ಹೊಳೆಯುವಂತೆ ಮಾಡಬಹುದು. ಆ ವಿಧಾನಗಳು ಯಾವುವು ಮತ್ತು ಅವುಗಳನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.

ಇದನ್ನೂ ಓದಿ: ಕಮರಿದ ಹ್ಯಾಟ್ರಿಕ್ ಗೆಲುವಿನ ಕನಸು: ಇಂಗ್ಲೆಂಡ್ ವಿರುದ್ಧ ಸೋಲುಂಡ ಟೀಂ ಇಂಡಿಯಾ ವನಿತೆಯರು

1. ನೀವು ಮನೆಯ ನೆಲವನ್ನು ಹೊಳೆಯುವಂತೆ ಮಾಡಲು ಬಯಸಿದರೆ, ಒಂದು ಬಕೆಟ್ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಬಳಿಕ ನೆಲವನ್ನು ಸ್ವಚ್ಛಗೊಳಿಸಿದೆ. ಈ ರೀತಿ ಮಾಡುವುದರಿಂದ ನೆಲವನ್ನು ಹೊಳೆಯುವಂತೆ ಮಾಡುವುದಲ್ಲದೆ ಹಳದಿ ಬಣ್ಣವನ್ನು ಸಹ ಹೋಗಲಾಡಿಸಬಹುದು.

2. ನೆಲವನ್ನು ಹೊಳೆಯುವಂತೆ ಮಾಡಲು ನೀವು ಅಡಿಗೆ ಸೋಡಾವನ್ನು ಸಹ ಬಳಸಬಹುದು. ಅಡುಗೆ ಸೋಡಾದ ಪುಡಿಯನ್ನು ಒಂದು ಮಗ್ ನೀರಿನಲ್ಲಿ ಬೆರೆಸಿ ಹತ್ತಿ ಬಟ್ಟೆಯನ್ನು ಅದ್ದಿ ಸ್ವಚ್ಛಗೊಳಿಸಿ. ಈ ರೀತಿ ಮಾಡುವುದರಿಂದ ನೆಲವನ್ನು ಬೇಗನೆ ಸ್ವಚ್ಛಗೊಳಿಸಬಹುದು. ಅಲ್ಲದೆ ಕಲೆಗಳನ್ನು ಸಹ ತೆಗೆದುಹಾಕಬಹುದು.

3. ಒಂದು ಮಗ್ ನೀರಿನಲ್ಲಿ ಸೀಮೆಎಣ್ಣೆ ಬೆರೆಸಿ. ಅದರಲ್ಲಿ ಹತ್ತಿ ಬಟ್ಟೆಯನ್ನು ನೆನೆಸಿಡಿ. ಬಳಿಕ ನೆಲದ ಮೇಲಿರುವ ಕಲೆಗಳನ್ನು ಆ ಬಟ್ಟೆಯಿಂದ ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಿದ ನಂತರ, ಉಗುರು ಬೆಚ್ಚಗಿನ ನೀರಿನಿಂದ ನೆಲವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನೆಲವನ್ನು ಸ್ವಚ್ಛಗೊಳಿಸಬಹುದು.

ಈ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ

ನೀವು ನೆಲವನ್ನು ಸ್ವಚ್ಛಗೊಳಿಸಿದಾಗಲೆಲ್ಲಾ ರಬ್ಬರ್ ಕೈಗವಸುಗಳನ್ನು ಧರಿಸಿ.

ದಪ್ಪ ಬಟ್ಟೆಯಿಂದ ಒರೆಸಿ. ತೆಳುವಾದ ಬಟ್ಟೆಯು ಬೇಗನೆ ಹರಿದು ಹೋಗಬಹುದು, ಜೊತೆಗೆ ಚೆನ್ನಾಗಿ ಸ್ವಚ್ಛಗೊಳಿಸುವುದಿಲ್ಲ.

ಇದನ್ನೂ ಓದಿ: ಶನಿದೋಷ ನಿವಾರಣೆಗೆ ಈ ಖಾರದ ಮಸಾಲೆ ವಸ್ತುವಿನಿಂದ ಪರಿಹಾರ ಮಾಡಿ: ಕ್ಷಣದಲ್ಲಿ ಪರಿಹಾರ ಖಂಡಿತ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News