ಜಾತಕದಲ್ಲಿ ರಾಹುವನ್ನು ಬಲಪಡಿಸಲು ಲಾಲ್ ಕಿತಾಬ್ ಪರಿಹಾರ: ಜ್ಯೋತಿಷ್ಯದಲ್ಲಿ ರಾಹುವನ್ನು ಪಾಪ ಗ್ರಹವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ರಾಹು ಗ್ರಹವು ಅಶುಭ ಸ್ಥಾನದಲ್ಲಿದ್ದರೆ ಅಥವಾ ದುರ್ಬಲವಾಗಿದ್ದರೆ, ಅದು ಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ದುರ್ಬಲ ರಾಹು ಜೀವನದಲ್ಲಿ ಅನೇಕ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಉಂಟು ಮಾಡುತ್ತಾನೆ. ಜೀವನದ ಪ್ರತಿಯೊಂದು ಭಾಗದಲ್ಲಿಯೂ ಸಾಕಷ್ಟು ಅಡೆತಡೆಗಳನ್ನು ಉಂಟು ಮಾಡುತ್ತಾನೆ. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು, ಲಾಲ್ ಕಿತಾಬ್ನಲ್ಲಿ ಕೆಲವು ಕ್ರಮಗಳನ್ನು ನೀಡಲಾಗಿದೆ.
ಜಾತಕದಲ್ಲಿ ದುರ್ಬಲನಾಗಿರುವ ರಾಹುವನ್ನು ಬಲಪಡಿಸಲು ಲಾಲ್ ಕಿತಾಬ್ನ ಈ ಪರಿಹಾರಗಳು ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಈ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ಕೆಟ್ಟ ಸಮಯದ ಕಳೆದು ಸಕಾರಾತ್ಮಕ ಪರಿಣಾಮವು ಗೋಚರಿಸುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ- Venus Transit 2022: ಮುಂದಿನ 23 ದಿನ ಈ ರಾಶಿಯವರಿಗೆ ಹಣದ ಮಳೆ ಸುರಿಸಲಿದ್ದಾನೆ ಶುಕ್ರ
ರಾಹು ಗ್ರಹವನ್ನು ಬಲಪಡಿಸಲು ಲಾಲ್ ಕಿತಾಬ್ನ ಪರಿಹಾರಗಳು:
ರಾಹು ಗ್ರಹವನ್ನು ಬಲಪಡಿಸಲು, ಯಾವಾಗಲೂ ನಿಮ್ಮೊಂದಿಗೆ ಬೆಳ್ಳಿ ನಾಣ್ಯವನ್ನು ಇಟ್ಟುಕೊಳ್ಳಿ ಎಂದು ಲಾಲ್ ಕಿತಾಬ್ನಲ್ಲಿ ಹೇಳಲಾಗಿದೆ. ಇದನ್ನು ಮಾಡುವುದರಿಂದ ರಾಹು ಬಲಶಾಲಿಯಾಗುತ್ತಾನೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾನೆ.
ದುರ್ಬಲ ರಾಹುವನ್ನು ಬಲಪಡಿಸಲು, ನಾಯಿಗೆ ಆಹಾರ ನೀಡುವುದು ಸಹ ಉತ್ತಮ ಪರಿಹಾರವಾಗಿದೆ. ಇದನ್ನು ಮಾಡುವುದರಿಂದ, ರಾಹು ಉತ್ತಮ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾನೆ ಮತ್ತು ಅದರ ಸ್ಪಷ್ಟ ಪರಿಣಾಮವು ಜೀವನದ ಮೇಲೆ ಗೋಚರಿಸುತ್ತದೆ.
ರಾಹುವನ್ನು ಒಲಿಸಿಕೊಳ್ಳಲು ಗಂಗೆಯಲ್ಲಿ ಸ್ನಾನ ಮಾಡಿ. ಇದು ನಿಮಗೆ ತೊಂದರೆಗಳಿಂದ ಮುಕ್ತಿಯನ್ನೂ ನೀಡುತ್ತದೆ.
ಕಬ್ಬಿಣದ ಉಂಗುರ ಅಥವಾ ಬಳೆಯನ್ನು ಧರಿಸುವುದು ರಾಹುವನ್ನು ಬಲಪಡಿಸಲು ಉತ್ತಮ ಮಾರ್ಗವಾಗಿದೆ.
ಬಡವರಿಗೆ ಅಥವಾ ಅಗತ್ಯ ಇರುವವರಿಗೆ ಸಹಾಯ ಮಾಡುವುದರಿಂದಲೂ ರಾಹುವಿನ ದುಷ್ಪರಿಣಾಮಗಳಿಂದ ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ- Astro Tips: ಪ್ರತಿದಿನ ಮಾಡುವ ಈ 5 ಕೆಲಸಗಳು ದುರದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸುತ್ತೆ!
ರಾಹು ಬಲಹೀನನಾಗಿದ್ದರೆ ಈ ತಪ್ಪನ್ನು ಮಾಡಬೇಡಿ:
ರಾಹು ಬಲಹೀನರಾಗಿರುವವರು ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರವಿರಬೇಕು. ನಶೆಗೆ ಒಳಗಾಗಬೇಡಿ. ಇಲ್ಲದಿದ್ದರೆ ರಾಹುವಿನ ದುಷ್ಪರಿಣಾಮ ಹೆಚ್ಚು ಪ್ರಭಾವ ಬೀರುತ್ತದೆ. ಅದೇ ಸಮಯದಲ್ಲಿ, ವ್ಯಕ್ತಿಯು ಹೆಚ್ಚು ಹಾನಿಯನ್ನು ಅನುಭವಿಸುತ್ತಾನೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.