How To Increase Height: ಹಲವು ಪೋಷಕರು ತಮ್ಮ ಮಗುವಿನ ಎತ್ತರದ ಬಗ್ಗೆ ಅಂದರೆ ಹೈಟ್ ಬಗ್ಗೆ ಹೆಚ್ಚು ಚಿಂತಿತರಾಗುತ್ತಾರೆ. ವಾಸ್ತವವಾಗಿ, ಸಮಾಜದಲ್ಲಿ, ವ್ಯಕ್ತಿಯ ಬೆಳವಣಿಗೆಯನ್ನು ದೈಹಿಕ ಬೆಳವಣಿಗೆಯೊಂದಿಗೆ ಸಂಪರ್ಕಿಸುವ ಮೂಲಕ ಕಾಣಬಹುದು. ಹಲವು ಬಾರಿ ವಯಸ್ಸಿಗೆ ತಕ್ಕಂತೆ ಮಕ್ಕಳು ಎತ್ತರವಾಗಿಲ್ಲದಿದ್ದರೆ ಅವರ ಬೆಳವಣಿಗೆ ಸರಿಯಾಗಿಲ್ಲವೇನೋ ಎಂಬ ಚಿಂತೆ ಪೋಷಕರನ್ನು ಕಾಡುತ್ತದೆ. ಈ ಕಾರಣಕ್ಕಾಗಿ, ಪೋಷಕರು ತಮ್ಮ ಮಕ್ಕಳು ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ತಾವು ಒತ್ತಡ ತೆಗೆದುಕೊಳ್ಳುವುದರ ಜೊತೆಗೆ ಮಕ್ಕಳ ಒತ್ತಡವನ್ನೂ ಹೆಚ್ಚಿಸುತ್ತಾರೆ. ನೀವೂ ಕೂಡ ನಿಮ್ಮ ಮಗುವಿನ ಎತ್ತರ ಹೆಚ್ಚಾಗಬೇಕು ಎಂದು ಬಯಸಿದರೆ ಅವರಿಗೆ ಕೆಲವು ಅಭ್ಯಾಸಗಳನ್ನು ಕಲಿಸಬೇಕು. ಈ ಅಭ್ಯಾಸಗಳನ್ನು ಹೊಂದಿರುವ ಮಗುವಿನ ಎತ್ತರವು ಬಹಳ ವೇಗವಾಗಿ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ.
ಮಗುವಿನ ಎತ್ತರವನ್ನು ಹೆಚ್ಚಿಸುವ ಅಭ್ಯಾಸಗಳು (Height increasing habits):
ಯಾವುದೇ ಮಗುವಿನ ಎತ್ತರವು (Child Height) ಅವನ ದೈಹಿಕ ಬೆಳವಣಿಗೆ ಮತ್ತು ಆನುವಂಶಿಕ ಕಾರಣಗಳನ್ನು ಅವಲಂಬಿಸಿರುತ್ತದೆ. ಆದರೆ ಪೌಷ್ಠಿಕಾಂಶ ಮತ್ತು ದೈಹಿಕ ಚಟುವಟಿಕೆಗಳೂ ಕೂಡ ಮಗುವಿನ ಎತ್ತರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಇಲ್ಲದಿದ್ದರೆ ಮಗುವಿನ ದೇಹವು ಸಂಭವನೀಯ ಉದ್ದವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇಲ್ಲಿ ಉಲ್ಲೇಖಿಸಿರುವ ಕೆಲವು ಅಭ್ಯಾಸಗಳು ಮಗುವಿನ ಎತ್ತರವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಬಹುದು.
ಇದನ್ನೂ ಓದಿ- Soaking Almonds Benefits:ಹಸಿ, ಹುರಿದ ಅಥವಾ ನೆನೆಸಿದ ಬಾದಾಮಿಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ
ಎತ್ತರವನ್ನು ಹೆಚ್ಚಿಸಲು ಸಲಹೆಗಳು- ಜೀವಸತ್ವಗಳು ಮತ್ತು ಖನಿಜಗಳು:
ಮಗುವಿನ ಬೆಳವಣಿಗೆಗೆ ವಿಟಮಿನ್ ಮತ್ತು ಖನಿಜಾಂಶಗಳು ಬೇಕಾಗುತ್ತವೆ. ನೀವು ಮಗುವಿಗೆ ಹಾಲು, ದ್ವಿದಳ ಧಾನ್ಯಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವ ಅಭ್ಯಾಸವನ್ನು ಮಾಡಬೇಕು. ಈ ಕಾರಣದಿಂದಾಗಿ ಮಗುವಿಗೆ ಸಾಕಷ್ಟು ಪ್ರಮಾಣದ ವಿಟಮಿನ್ ಮತ್ತು ಖನಿಜಗಳು ಸಿಗುತ್ತವೆ ಮತ್ತು ಮಗು ಎತ್ತರವಾಗಿ ಬೆಳೆಯಲು (How To Increase Height) ಅಗತ್ಯವಾದ ಶಕ್ತಿಯನ್ನು ಪಡೆಯುತ್ತದೆ.
ಮೊಳಕೆಯೊಡೆದ ಕಾಳು:
ಆಹಾರದಲ್ಲಿ ಧಾನ್ಯಗಳು ಮಕ್ಕಳ ಬೆಳವಣಿಗೆಯಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್-ಬಿ ಸಮೃದ್ಧವಾಗಿದೆ. ಇದಕ್ಕಾಗಿ, ನೀವು ಮಗುವಿಗೆ ಸೂಪ್, ಸಿರಿಧಾನ್ಯಗಳು, ಮೊಳಕೆಯೊಡೆದ ಕಾಳುಗಳನ್ನು ನಿಮ್ಮ ಮಗುವಿನ ಆಹಾರದಲ್ಲಿ ಸೇರಿಸಿ.
ವ್ಯಾಯಾಮ:
ವ್ಯಾಯಾಮವು (Exercise) ಎತ್ತರವನ್ನು ಹೆಚ್ಚಿಸುತ್ತದೆಯೋ ಇಲ್ಲವೋ ಎಂಬ ಚರ್ಚೆ ವಿವಾದಾತ್ಮಕವಾಗಬಹುದು. ಆದರೆ ವ್ಯಾಯಾಮವು ದೇಹವನ್ನು ಒಳಗಿನಿಂದ ದೃಢಪಡಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಬಲವಾದ ಸ್ನಾಯುಗಳು ಮತ್ತು ದೇಹದ ಬೆಳವಣಿಗೆಗೆ ವ್ಯಾಯಾಮ ಅತಿ ಅಗತ್ಯ. ನಿತ್ಯ ವ್ಯಾಯಾಮ ಮಾಡುವುದರಿಂದಲೂ ಮಗುವಿನ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಎತ್ತರವನ್ನು ಹೆಚ್ಚಿಸುವ ಮಾರ್ಗಗಳು: ಯೋಗ
ವ್ಯಾಯಾಮಗಳಂತೆ, ಯೋಗ ಮಾಡುವುದೂ ಕೂಡ ಎತ್ತರವನ್ನು ಹೆಚ್ಚಿಸುವ ಪರಿಣಾಮಕಾರಿ ಮಾರ್ಗ ಎಂದು ಸಾಬೀತುಪಡಿಸಬಹುದು. ಏಕೆಂದರೆ, ದೀರ್ಘ ಎತ್ತರಕ್ಕೆ, ದೇಹಕ್ಕೆ ನಮ್ಯತೆ ಮತ್ತು ಬಲದ ಜೊತೆಗೆ ಹಿಗ್ಗಿಸುವಿಕೆಯ ಅಗತ್ಯವಿದೆ. ಅದನ್ನು ಯೋಗಾಸನ ಒದಗಿಸುತ್ತದೆ. ಯೋಗಾಸನವು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಈ ಕಾರಣದಿಂದಾಗಿ ಎಲ್ಲಾ ಅಂಗಗಳು ಸಾಕಷ್ಟು ಪೌಷ್ಠಿಕಾಂಶವನ್ನು ಪಡೆಯುತ್ತವೆ.
ಮಕ್ಕಳು ಕ್ರೀಡೆಗಳನ್ನು ಆಡಲು ಇಷ್ಟಪಡುತ್ತಾರೆ. ಆದರೆ ಮಕ್ಕಳ ಎತ್ತರವನ್ನು ಹೆಚ್ಚಿಸಲು ಯಾವ ಆಟ ಸಹಾಯಕವಾಗಲಿದೆ ಎಂಬುದರ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಹೊರಾಂಗಣ ಮತ್ತು ದೈಹಿಕ ಶ್ರಮದ ಕ್ರೀಡೆಗಳು ಮಗುವಿನ ಎತ್ತರವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಇದರೊಂದಿಗೆ ಮಗುವಿನ ಭವಿಷ್ಯವೂ ಈ ಆಟಗಳಲ್ಲಿ ಹೊಳೆಯಬಹುದು. ಆದ್ದರಿಂದ, ಬಾಸ್ಕೆಟ್ ಬಾಲ್, ಓಟ, ಈಜು, ಬ್ಯಾಡ್ಮಿಂಟನ್ ಮೊದಲಾದ ಕ್ರೀಡೆಗಳನ್ನು ಆಡಲು ಮಕ್ಕಳನ್ನು ಪ್ರೇರೇಪಿಸಿ.
ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.