ನಗು, ಅಳು, ಸಂತೋಷದ ಹಾಗೆ ಕೋಪ ಬರುವುದು ಸಹ ಸಾಮಾನ್ಯ. ಆದರೆ ಕೆಲವರಿಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ. ತಾಳ್ಮೆಯ ಮಟ್ಟ ಮೀರಿ ಕೋಪ ಬರುವುದು ಇದೆ. ಆ ಸಮಯದಲ್ಲಿ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಹ ಅವರು ವಿಫಲರಾಘುವ ಹಂತಕ್ಕೆ ಹೋಗುತ್ತಾರೆ. ಸಿಟ್ಟಿನ ಕೈ ಗೆ ಬುದ್ಧಿ ಕೊಡಬಾರದು ಅಂತ ಒಂದು ಮಾತೇ ಇದೆ. ಭಾವನೆಗಳನ್ನು ನಿಯಂತ್ರಣ ಕಳೆದುಕೊಳ್ಳುವುದು ಸ್ವಯಂ-ಹಾನಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ಕೋಪ, ಅಸಮಾಧಾನ ಭಯವನ್ನು ತೋರಿಸುವುದು ಬಹಳಷ್ಟು ವಿಷಯಗಳನ್ನು ಅಪಾಯಕ್ಕೆ ತರಬಹುದು. ಹಾಗಾಗಿ ಅತಿಯಾಗಿ.. ತಡೆಯೋಕೆ ಆಗದಷ್ಟು ಸಿಟ್ಟು ನಿಮ್ಮನ್ನು ಆಕ್ರಮಿಸುತ್ತಿದ್ದರೆ ನಿಮ್ಮ ಕೋಪವನ್ನು ತಡೆಯಲು ಇಲ್ಲಿ ಕೆಲವು ಟಿಪ್ಸ್ಗಳಿವೆ.
ಇದನ್ನೂ ಓದಿ:
ಹೆಚ್ಚಿನ ಸಮಯ ಭಾವನೆಗಳ ಮೇಲೆ ನಿಯಂತ್ರಣ ಇಲ್ಲದಿದ್ದಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಸಿಟ್ಟಿನಿಂದ ಮಾಡಿಕೊಂಡ ಯಡವಟ್ಟುಗಳಿಂದಾಗಿ ಮನಸ್ತಾಪ ಉಂಟಾಗುತ್ತದೆ. ಆದರೆ ಸಿಟ್ಟಿನಲ್ಲಿ ಕಳೆದುಹೋದ ಸಮಯ, ಸ್ನೇಹ, ಸಂಬಂಧಗಳಿಗಾಗಿ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ. ಇದಲ್ಲದೇ ಅತಿಯಾಗಿ ಬರುವ ಕೋಪ ಕಾಲಾನಂತರದಲ್ಲಿ ಮಾನಸಿಕ ಆರೋಗ್ಯದ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ ಸಿಟ್ಟನ್ನು ಆದಷ್ಟು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಬಹುಮುಖ್ಯವಾಗಿದೆ.
ಭಾವನೆಗಳನ್ನು ನಿಯಂತ್ರಿಸುವುದನ್ನು ಕಲಿಯಲು ಕೆಲ ಸಮಯ ತೆಗೆದುಕೊಳ್ಳಬಹುದು. ಆದರೆ ಅದು ಅಸಾಧ್ಯವೇನೂ ಅಲ್ಲ. ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಹಲವಾರು ಮಾರ್ಗಗಳಿವೆ.
ಮೊದಲು ನಿಮ್ಮ ಭಾವನೆಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಯಾವ ರೀತಿಯ ಭಾವನೆಯನ್ನು ಅನುಭವಿಸುತ್ತೀರಿ ಎಂಬುದನ್ನು ತಿಳಿದುಕೊಳ್ಳಬೇಕು. ನಿಮ್ಮ ಸ್ವಂತ ಭಾವನೆಗಳನ್ನು ನೀವು ಗುರುತಿಸಬೇಕು. ಭಾವನೆ ಏನು ಮತ್ತು ಪ್ರತಿಕ್ರಿಯೆ ಏನು, ಏನು ಬೇಕು ಎಂದು ತಿಳಿದುಕೊಳ್ಳಬೇಕು. ಇದರಿಂದ ನಿಮ್ಮ ಬಗ್ಗೆ ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಇದು ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ನಿಮಗೆ ಸಹಾಯಕವಾಗಿದೆ.
ತುಂಬಾ ಸಿಟ್ಟು ಬಂದಾಗ 1 ರಿಂದ 100 ರ ವರೆಗಿನ ಅಂಕಿಗಳನ್ನು ಉಲ್ಟಾ ಹೇಳುವುದು. ಅಂದರೆ 1,2,3,4,5.. ಬದಲು 100,99,98,97,96... ಎಂದಿ ಹೇಲುವುದರಿಂದ ಸಿಟ್ಟನ್ನು ಹತೋಟಿಗೆ ತರಬಹುದು. ಅಲ್ಲದೇ, ನಿಟ್ಟುಸಿರು ಸಹ ಉತ್ತಮ ಮಾರ್ಗವಾಗಿದೆ. ಅತಿಯಾದ ಕೋಪದಲ್ಲಿ ಜೋರಾಗಿ ಉಸಿರಾಡುವುದರಿಂದ ಸಹ ಕೋಪವನ್ನು ಹತೋಟಿಗೆ ತರಬಹುದಾಗಿದೆ.
ಇದನ್ನೂ ಓದಿ:
ನಿಮಗೆ ತೀವ್ರ ಕೋಪ ಬಂದಾಗ ತಕ್ಷಣ ಒಂದು ಲೋಟ ತಣ್ಣೀರನ್ನು ಕುಡಿಯಿರಿ. ಇದು ಕೂಡ ಕೋಪವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ರಾತ್ರಿ ಹೊತ್ತಿನಲ್ಲಿ ಚೆನ್ನಾಗಿ ನಿದ್ದೆ ಮಾಡಿ. ಸಾಕಷ್ಟು ನಿದ್ದೆ ಆಗದಿದ್ದಾಗಾ, ಕಿರಿಕಿರಿಯನ್ನು ಅನುಭವಿಸುತ್ತೀರಿ. ಇದರಿಂದಾಗಿ ನೀವು ಸಣ್ಣ ವಿಷಯಗಳ ಬಗ್ಗೆ ಕೋಪ ಬರಲು ಪ್ರಾರಂಭವಾಗುತ್ತದೆ. ಆದ್ದರಿಂದ ಚೆನ್ನಾಗಿ ನಿದ್ದೆ ಮಾಡುವುದು ಸಹ ಮುಖ್ಯ.
ಹೆಚ್ಚು ಕೋಪಗೊಳ್ಳುವವರು ಪ್ರತಿದಿನ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಲೇ ಬೇಕು. ಇದರಿಂದ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.