Heart Attack: ನಿಮ್ಮ ಈ ಅಭ್ಯಾಸ ಇಂದೇ ಬದಲಾಯಿಸಿಕೊಳ್ಳಿ, ಇವುಗಳಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ

Heart Attack: ತಜ್ಞರು ಹೇಳುವ ಪ್ರಕಾರ ಹೆಚ್ಚಿನ ಜನರು ಪೋಸ್ಟ್ ಹಾರ್ಟ್ ಅಟ್ಯಾಕ್ ಮೇಲೆ ಹೆಚ್ಚು ಆಕ್ಷನ್ ಮಾಡುತ್ತಾರೆ. ಆದರೆ, ಅದಕ್ಕಿಂತಲೂ ಮುನ್ನವೇ ಎಚ್ಚರಿಕೆ ವಹಿಸುವುದು ತುಂಬಾ ಆವಶ್ಯಕ.

Written by - Nitin Tabib | Last Updated : Sep 21, 2021, 11:57 AM IST
  • ಸಾಕಷ್ಟು ನಿದ್ರೆ ಪಡೆಯಿರಿ, ಇದು ದೇಹಕ್ಕೆ ಔಷಧಿ ಇದ್ದಂತೆ.
  • ಸಾಕಷ್ಟು ನಿದ್ರೆ ಮಾಡದೆ ಇರುವುದು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ.
  • ಕಡಿಮೆ ನಿದ್ರೆಯಿಂದ ಇನ್ಸುಲಿನ್ ರೇಸಿಸ್ಟನ್ಸ್ ಹೆಚ್ಚಾಗುತ್ತದೆ.
Heart Attack: ನಿಮ್ಮ ಈ ಅಭ್ಯಾಸ ಇಂದೇ ಬದಲಾಯಿಸಿಕೊಳ್ಳಿ, ಇವುಗಳಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ title=
Heart Attack (File Photo)

Heart Attack: ಹೃದಯಾಘಾತ (Heart Attack) ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುವ ಅನೇಕ ಜೀವನಶೈಲಿ (Lifestyle) ಅಭ್ಯಾಸಗಳಿವೆ (Lifestyle Habits), ಅವುಗಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಈ ಅಪಾಯವನ್ನು ಕಡಿಮೆ ಮಾಡಬಹುದು.

Cardiovascular Diseases (CVD) ಕುರಿತು ನಡೆಸಲಾಗಿರುವ ಒಂದು ಅಧ್ಯಯನದ ಪ್ರಕಾರ, ಕಡಿಮೆ ವಯಸ್ಸಿನ ಜನರಿಗೆ ಹೋಲಿಸಿದರೆ, ಮಧ್ಯಮ ವಯಸ್ಸಿನ ಜನರಲ್ಲಿ ಹೃದಯಾಘಾತದ (Stroke) ಪ್ರಕರಣಗಳು ಹೆಚ್ಚಾಗುತ್ತಿವೆ. ಹೃದಯಾಘಾತದ ವಿಷಯದಲ್ಲಿ ಭಾರತೀಯರು, ಪಾಶ್ಚಿಮಾತ್ಯ ದೇಶಗಳ ಜನರ ತುಲನೆಯಲ್ಲಿ ಒಂದು ದಶಕ ಮುಂದಿದ್ದಾರೆ. 

ತಜ್ಞರು ಹೇಳುವ ಪ್ರಕಾರ, ಸಾಮಾನ್ಯವಾಗಿ ನಾವು ಪೋಸ್ಟ್ ಹಾರ್ಟ್ ಅಟ್ಯಾಕ್ ಆಕ್ಷನ್ ಮೇಲೆ ಹೆಚ್ಚು ಗಮನ ಕೆಂದ್ರೀಕರಿಸುತ್ತೇವೆ. ಆದರೆ ಇದಕ್ಕಾಗಿ ಪ್ರಿವೆಂಶನ್ ತೆಗೆದುಕೊಂಡು ಸ್ಥಿತಿಯವರೆಗೆ ತಲುಪದೇ ಇರುವಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ.

ಉರಿಯೂತ ಹೆಚ್ಚು ಅಪಾಯಕಾರಿ
ಬಹುತೇಕ ಜನರು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಮಾತ್ರ ಹೃದಯಾಘಾತಕ್ಕೆ (Heart Attack) ಕಾರಣ ಎಂದು ನಂಬುತ್ತಾರೆ, ಆದರೆ ಇದರ ಹಿಂದಿನ ಪ್ರಮುಖ ಕಾರಣವೆಂದರೆ ಹೃದಯ, ರಕ್ತನಾಳಗಳು, ಎಂಡೋಥೀಲಿಯಲ್ ಲೈನಿಂಗ್, ಅಪಧಮನಿಗಳು ಮತ್ತು ಅನೇಕ ಸ್ಥಳಗಳಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಹಾನಿ. ಕೊಲೆಸ್ಟ್ರಾಲ್ ಮಟ್ಟವನ್ನು ಕಾಯ್ದುಕೊಳ್ಳುವುದು ಮುಖ್ಯ, ಆದರೆ ಕೊಲೆಸ್ಟ್ರಾಲ್ ಮಟ್ಟವನ್ನು ಹೃದಯಾಘಾತಕ್ಕೆ ಏಕೈಕ ಕಾರಣವೆಂದು ಭಾವಿಸಬಾರದು.

ರಿಫೈನ್ ಮಾಡಲಾಗಿರುವ ಎಣ್ಣೆ
ಸಂಸ್ಕರಿಸಿದ ಎಣ್ಣೆಯನ್ನು ಬಹಳ ಉರಿಯೂತಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ತಜ್ಞರ ಪ್ರಕಾರ, ಆರೋಗ್ಯವಾಗಿರಲು, cold-pressed oils ಆಯ್ಕೆ ಉತ್ತಮ.

ಆಕ್ಟಿವ್ ಆಗಿರಿ
ಸಕ್ರಿಯ ಜೀವನಶೈಲಿಯನ್ನು ಅನುಸರಿಸಿ. ವಾಕಿಂಗ್ ಮತ್ತು ಯೋಗ ಮಾಡಿ. ಇದು ನಿಮಗೆ ತುಂಬಾ ಪರಿಣಾಮಕಾರಿಯಾಗಿರುತ್ತದೆ. ನೃತ್ಯ, ಏರೋಬಿಕ್ಸ್, ಜುಂಬಾ, ಈಜು ಕೂಡ ನಿಮ್ಮ ದೇಹವನ್ನು ಸಕ್ರಿಯವಾಗಿರಿಸುತ್ತದೆ. ದೇಹಕ್ಕೆ ಅಗತ್ಯವಾದ ಸಾಕಷ್ಟು ಚಟುವಟಿಕೆಗಳನ್ನು ನೀವು ಮಾಡದಿದ್ದರೆ, ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ-Fruit Juice: ಹಣ್ಣುಗಳ ಜ್ಯೂಸ್ ತೆಗೆಯುವಾಗ ನೀವೂ ಈ ಕೆಲಸ ಮಾಡುತ್ತಿಲ್ಲವಲ್ಲ? ಲಾಭದ ಬದಲು ಹಾನಿಯೇ ಜಾಸ್ತಿ

ಸ್ಲೀಪ್ ರುಟೀನ್ ಅನ್ನು ಫಿಕ್ಸ್ ಮಾಡಿ
ಅನೇಕ ಸಲ ಜನರು ಇಡೀ ರಾತ್ರಿ ದುಡಿಯುತ್ತಾರೆ ಅಥವಾ ತಮ್ಮ ಸಾಮಾಜಿಕ ಜೀವನವನ್ನು ನಿರ್ವಹಿಸುತ್ತಾರೆ ಮತ್ತು ನಿದ್ರೆಯ ದಿನಚರಿಯನ್ನು ಅನುಸರಿಸುವುದಿಲ್ಲ. ಇದು ನಿಮಗೆ ಹಾನಿ ಮಾಡುತ್ತದೆ. ಸಾಕಷ್ಟು ನಿದ್ರೆ ಪಡೆಯುವುದು ನಿಮ್ಮ ಹೃದಯಕ್ಕೆ ಔಷಧಿಯಂತೆ. ಮತ್ತೊಂದೆಡೆ, ಸಾಕಷ್ಟು ನಿದ್ರೆ ಬರದಿದ್ದರೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.

ಇದನ್ನೂ ಓದಿ-ಫುಡ್ ಪಾಯಿಸನ್ ಆದರೆ ತಕ್ಷಣ ಸೇವಿಸಿ ಈ ವಸ್ತುಗಳನ್ನು, ಚಿಟಿಕಿಯಲ್ಲಿ ಪರಿಹಾರ ಸಿಗುತ್ತದೆ

ನಿಮ್ಮ ಹೃದಯವು ಚೇತರಿಕೆಯ ಅಗತ್ಯವಿರುವ ಸ್ನಾಯು. ನಿದ್ರೆಯ ಕೊರತೆಯು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ, ಇದು ಟೈಪ್ 2 ಮಧುಮೇಹ ಮತ್ತು ಇತರ ಹಲವು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದೆಲ್ಲವನ್ನೂ ತಪ್ಪಿಸಲು, ನೀವು ನಿಗದಿತ ನಿದ್ರೆ ವೇಳಾಪಟ್ಟಿಯನ್ನು ಅನುಸರಿಸುವುದು ಮುಖ್ಯ.

ಇದನ್ನೂ ಓದಿ-Snoring Problem: ಮಲಗುವಾಗ ನೀವೂ ಗೊರಕೆ ಹೊಡೆಯುತ್ತೀರಾ? ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News