Hair Care Tips: ಚಳಿಗಾಲದಲ್ಲಿ ಕೂದಲಿಗೆ ಮೆಹೆಂದಿಯನ್ನು ಹಚ್ಚಬೇಕೇ..?

Hair Care Tips: ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತ ತಪ್ಪಿಸಲು ಕೂದಲಿಗೆ ಮೆಹೆಂದಿ ಹಚ್ಚಲು ಈ 3 ಸಲಹೆಗಳನ್ನು ತಪ್ಪದೇ ಪಾಲಿಸಬೇಕು.

Written by - Puttaraj K Alur | Last Updated : Nov 16, 2022, 06:43 PM IST
  • ಚಳಿಗಾಲದಲ್ಲಿ ಕೂದಲಿಗೆ ಮೆಹೆಂದಿ ಹಚ್ಚಲು ಬಹುತೇಕರು ಹಿಂಜರಿಯುತ್ತಾರೆ
  • ಚಳಿಗಾಲದಲ್ಲಿಯೂ ಕೆಮ್ಮು, ನೆಗಡಿ ಬರದಂತೆ ಕೂದಲಿಗೆ ಬಣ್ಣ ಹಚ್ಚಬಹುದು
  • ಕೂದಲಿಗೆ ಮೆಹೆಂದಿ ಹಚ್ಚಿ ಶೀತ & ಕೆಮ್ಮಿನಿಂದ ಮುಕ್ತಿ ಪಡೆಯಲು ಸಲಹೆಗಳು ಇಲ್ಲಿವೆ
Hair Care Tips: ಚಳಿಗಾಲದಲ್ಲಿ ಕೂದಲಿಗೆ ಮೆಹೆಂದಿಯನ್ನು ಹಚ್ಚಬೇಕೇ..? title=
Hair Care Tips

ನವದೆಹಲಿ: ಅನೇಕ ಜನರು ಬಿಳಿ ಕೂದಲ ಸಮಸ್ಯೆಯಿಂದ ಪಾರಾಗಲು ಕೂದಲಿಗೆ ಬಣ್ಣ ಹಾಕುತ್ತಾರೆ. ಬಹುತೇಕರು ವರ್ಷವಿಡೀ ಕಪ್ಪು ಕೂದಲು ಇರುವಂತೆ ನೋಡಿಕೊಳ್ಳುತ್ತಾರೆ. ತಲೆಯಲ್ಲಿ ಒಂದೇ ಒಂದು ಬಿಳಿ ಕೂದಲು ಕಂಡರೂ ಅವರ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಹೇಗಾದರೂ ಮಾಡಿ ಬಿಳಿ ಕೂದಲಿನಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿರುವ ಹಲವಾರು ಉತ್ಪನ್ನಗಳನ್ನು ಬಳಸುತ್ತಾರೆ.

ಕೂದಲಿನ ಬಣ್ಣಕ್ಕೆ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿ ಮೆಹೆಂದಿಯನ್ನು ಬಳಸಲಾಗುತ್ತದೆ. ಆದರೆ ಚಳಿಗಾಲದಲ್ಲಿ ಬಹುತೇಕರು ಮೆಹೆಂದಿ ಬಳಕೆಯಿಂದ ದೂರವಿರುತ್ತಾರೆ. ಏಕೆಂದರೆ ಶೀತ ವಾತಾವರಣದಲ್ಲಿ ಗೋರಂಟಿ ಅಥವಾ ಮೆಹೆಂದಿ ತಣ್ಣಗಾಗುತ್ತದೆ, ಆದ್ದರಿಂದ ಇದನ್ನು ತಲೆಗೆ ಹಚ್ಚಿಕೊಳ್ಳಲು ಕಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಂದು ವಿಧಾನಗಳನ್ನು ಅಳವಡಿಸಿಕೊಂಡು ಚಳಿಗಾಲದಲ್ಲಿಯೂ ಕೆಮ್ಮು, ನೆಗಡಿ ಬರದಂತೆ ಕೂದಲಿಗೆ ಬಣ್ಣ ಹಚ್ಚಬಹುದು. ಅದು ಹೇಗೆಂದು ತಿಳಿಯಿರಿ.

ಇದನ್ನೂ ಓದಿ: Men Health : ಬೆಳ್ಳುಳ್ಳಿಯನ್ನು ರಾತ್ರಿ ಮಲಗುವ ಮುನ್ನ ತಿಂದ್ರೆ ಪುರುಷರಿಗೆ ಎಷ್ಟೆಲ್ಲಾ ಲಾಭ ಗೊತ್ತಾ?

ಶೀತ & ಕೆಮ್ಮಿನಿಂದ ಮುಕ್ತಿಗೆ 3 ಸುಲಭ ಸಲಹೆಗಳು

  1. ಚಳಿಗಾಲದಲ್ಲಿ ಮೆಹೆಂದಿಯ ಪೇಸ್ಟ್ ತಣ್ಣಗಿರುತ್ತದೆ. ಈ ಕಾರಣದಿಂದ ಶೀತ ಕಾಲದಲ್ಲಿ ಅದನ್ನು ತಲೆಗೆ ಹಚ್ಚುವುದು ಅಪಾಯಕಾರಿ. ಹೀಗಾಗಿ ಚಳಿಗಾಲದಲ್ಲಿ ತಲೆಗೆ ಗೋರಂಟಿ ಹಚ್ಚುವ ಮುನ್ನ ಮೆಹೆಂದಿ ಪೇಸ್ಟ್‍ನಲ್ಲಿ ಎರಡ್ಮೂರು ಲವಂಗವನ್ನು ಸೇರಿಸಲು ಸಲಹೆ ನೀಡಲಾಗಿದೆ. ಹೀಗೆ ಮಾಡುವುದರಿಂದ ಶೀತ ಮತ್ತು ಕೆಮ್ಮು ಬರುವುದಿಲ್ಲ.
  2. ಇನ್ನೂ ನೀವು ಶೀತ-ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ ಮೆಹಂದಿಯಲ್ಲಿ ಎಣ್ಣೆ, ಟೀ ವಾಟರ್, ಡ್ರೈ ಆಮ್ಲಾ, ಮ್ಯಾಂಗೋ ಜ್ಯೂಸ್, ದಾಲ್ಚಿನ್ನಿ, ಆಕ್ರೋಡು ಮತ್ತು ಕಾಫಿಯಂತಹ ಅಂಶಗಳನ್ನು ಸೇರಿಸಬಹುದು.
  3. ಕೂದಲಿಗೆ ಗೋರಂಟಿ ಹಚ್ಚುವ ಮೊದಲು ಅದಕ್ಕೆ ಒಂದು ಕರ್ಪೂರ ಮತ್ತು ಒಂದು ಚಮಚ ಮೆಂತ್ಯ ಪುಡಿಯನ್ನು ಸೇರಿಸಬೇಕು. ಇದು ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ಬಿಳಿಯಾಗದಂತೆ ಉಳಿಸುತ್ತದೆ.

ಬಿಳಿ ಕೂದಲಿಗೆ ಮೆಹೆಂದಿಯನ್ನು ಹಚ್ಚುವುದರಿಂದ ಅದು ಕಂದು ಅಥವಾ ಕಪ್ಪು ಅಲ್ಲ ಕೆಂಪು ಬಣ್ಣಕ್ಕೆ ತಿರುಗುತ್ತದೆ ಎಂಬುದನ್ನು ಸಹ ನೀವು ಗಮನಿಸಬೇಕು. ಚಳಿಗಾಲದಲ್ಲಿಯೂ ಬಿಳಿ ಕೂದಲ ಆರೈಕೆ ಮಾಡಿಕೊಳ್ಳಲು ಈ ಸರಳ ಸಲಹೆಗಳನ್ನು ಪಾಲಿಸಬಹುದು.  

ಇದನ್ನೂ ಓದಿ: Diet Tips : ಬೊಜ್ಜು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ ಈ ಹಣ್ಣು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News