Garuda Purana: ಮಹಾಪುರಾಣವೆಂದು ಪರಿಗಣಿಸಲ್ಪಡುವ ಗರುಡ ಪುರಾಣದಲ್ಲಿ (Garuda Purana), ಸರಿಯಾದ ಜೀವನ ಕ್ರಮದ ಜೊತೆಗೆ, ಎಲ್ಲವನ್ನೂ ಮಾಡಲು ಸರಿಯಾದ ಸಮಯವನ್ನು ಸಹ ಹೇಳಲಾಗಿದೆ. ಇದರಿಂದ ವ್ಯಕ್ತಿಯು ತೊಂದರೆಗಳಿಂದ ಪಾರಾಗುತ್ತಾನೆ. ಗರುಡ ಪುರಾಣದ ಪ್ರಕಾರ, ಕೆಟ್ಟ ಕರ್ಮ ಮಾತ್ರವಲ್ಲ ಕೆಲವೊಮ್ಮೆ ಒಳ್ಳೆಯ ಕೆಲಸಗಳನ್ನು ಮಾಡಲು ತಪ್ಪು ಸಮಯ ಕೂಡ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ, ಎಲ್ಲವನ್ನೂ ಸರಿಯಾದ ಸಮಯದಲ್ಲಿ ಮಾಡಬೇಕು. ಇದು ದಿನನಿತ್ಯದ ಅಗತ್ಯ ಕೆಲಸಗಳನ್ನು ಒಳಗೊಂಡಿದೆ.
ಯಾವಾಗಲೂ ಈ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಿ :
ತುಳಸಿ ಗಿಡಕ್ಕೆ ನೀರು ಹಾಕುವ ಸರಿಯಾದ ಸಮಯ:
ಪ್ರತಿದಿನ ತುಳಸಿಗೆ (Tulasi) ನೀರು ನೀಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಹಾಗೆಯೇ, ತುಳಸಿ ಗಿಡವು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಆದರೆ ಸಂಜೆ ವೇಳೆ ತುಳಸಿ ಗಿಡಕ್ಕೆ ನೀರು ಹಾಕುವುದು ತುಂಬಾ ಅಶುಭಕರವಾಗಿದೆ. ತುಳಸಿ ಗಿಡಕ್ಕೆ ಯಾವಾಗಲೂ ಬೆಳಿಗ್ಗೆ ಮಾತ್ರ ನೀರು ಹಾಕಬೇಕು ಮತ್ತು ಸಂಜೆ ದೀಪ ಮಾತ್ರ ಬೆಳಗಬೇಕು.
ಇದನ್ನೂ ಓದಿ- Vastu tips: ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿದರೆ, ಮನೆಯಲ್ಲಿ ಸದಾ ತುಂಬಿರುತ್ತೆ ಸಂಪತ್ತು-ಸಂತೋಷ
ಮನೆ ಶುಚಿಗೊಳಿಸಲೂ ಇದೆ ಸರಿಯಾದ ಸಮಯ:
ಮನೆಯಲ್ಲಿ ಪೊರಕೆಯಿಂದ ಕಸ ಗುಡಿಸುವುದು-ಒರೆಸುವಂತಹ ಶುಚಿಗೊಳಿಸುವ (Cleaning) ಸಂಬಂಧಿತ ಕೆಲಸವನ್ನು ಮಾಡಲು ಬೆಳಿಗ್ಗೆ ಸರಿಯಾದ ಸಮಯ. ಮತ್ತೊಂದೆಡೆ, ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸುವುದು ಮನೆಯಲ್ಲಿ ಬಡತನವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಸೂರ್ಯಾಸ್ತದ ನಂತರ, ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾರೆ. ಈ ಸಮಯದಲ್ಲಿ, ಸ್ವಚ್ಛಗೊಳಿಸುವುದರಿಂದ ಲಕ್ಷ್ಮೀ ದೇವಿಯು ಕಣ್ಣೀರು ಹಾಕುತ್ತಾ ದೂರ ಹೋಗುತ್ತಾರೆ ಎಂದು ಹೇಳಲಾಗುತ್ತದೆ.
ಹುಳಿ ಪದಾರ್ಥಗಳನ್ನು ಸಂಜೆ ಯಾರಿಗೂ ನೀಡಬೇಡಿ:
ಮೊಸರು, ಮಜ್ಜಿಗೆ, ಉಪ್ಪಿನಕಾಯಿಯಂತಹ ಹುಳಿ ಪದಾರ್ಥಗಳನ್ನು ಸಂಜೆ ಯಾರಿಗೂ ಕೊಡಬೇಡಿ. ಸೂರ್ಯಾಸ್ತದ (Sunset) ಸಮಯದಲ್ಲಿ ಮತ್ತು ಅದರ ನಂತರ ರಾತ್ರಿಯಲ್ಲಿ ಯಾರಿಗೂ ಉಪ್ಪು ನೀಡಬೇಡಿ. ಹೀಗೆ ಮಾಡುವುದರಿಂದ ಬಡತನ ಬರುತ್ತದೆ.
ಇದನ್ನೂ ಓದಿ- Sun Transit October 2021: ಅಕ್ಟೋಬರ್ 17 ರಂದು ಸೂರ್ಯನ ರಾಶಿ ಪರಿವರ್ತನೆ, ಈ 5 ರಾಶಿಯವರಿಗೆ ಸಂಕಷ್ಟ
ಈ ದಿನಗಳಲ್ಲಿ ಶೇವಿಂಗ್, ಹೇರ್ ಕಟ್ ಮಾಡಬೇಡಿ:
ಮಂಗಳವಾರ, ಗುರುವಾರ ಮತ್ತು ಶನಿವಾರ ಶೇವಿಂಗ್ ಮಾಡಬೇಡಿ, ಹೇರ್ ಕಟ್ ಮಾಡಬೇಡಿ. ಇದು ಕೂಡ ಲಕ್ಷ್ಮಿಗೆ ಕೋಪ ತರಿಸುತ್ತದೆ. ಈ ಕೆಲಸಗಳಿಗೆ ಅತ್ಯಂತ ಶುಭ ದಿನಗಳು ಬುಧವಾರ, ಶುಕ್ರವಾರ. ಅದೇ ಸಮಯದಲ್ಲಿ, ಈ ಕೆಲಸವನ್ನು ಭಾನುವಾರ-ಸೋಮವಾರದಂದು ಕೂಡ ಮಾಡಬಹುದು ಎಂದು ಹೇಳಲಾಗುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ