Hair Care Tips: ಉದ್ದ-ದಪ್ಪ-ಕಪ್ಪು ಕೂದಲಿಗಾಗಿ ಈ 5 ಆಹಾರಗಳನ್ನು ತಪ್ಪದೇ ಸೇವಿಸಿ

ಸುಂದರವಾದ ಉದ್ದನೆಯ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ. ಹಲವು ಬಾರಿ ಕೂದಲಿನ ದೃಢತೆ ಮತ್ತು ಸೌಂದರ್ಯಕ್ಕಾಗಿ ಏನೇ ಮಾಡಿದರೂ ಸಹ ಬಯಸಿದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ಉದ್ದವಾದ ದಪ್ಪನೆಯ ಕಪ್ಪು ಕೂದಲನ್ನು ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Apr 14, 2022, 02:02 PM IST
  • ಆಹಾರವೂ ಸಹ ಕೂದಲ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ
  • ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ಉದ್ದವಾದ ಕೂದಲನ್ನು ಪಡೆಯಬಹುದು
  • ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ
Hair Care Tips: ಉದ್ದ-ದಪ್ಪ-ಕಪ್ಪು ಕೂದಲಿಗಾಗಿ ಈ 5 ಆಹಾರಗಳನ್ನು ತಪ್ಪದೇ ಸೇವಿಸಿ  title=
Natural hair care tips

ಬೆಂಗಳೂರು:  ಉದ್ದ ಮತ್ತು ದಪ್ಪ ಕೂದಲು ಪ್ರತಿಯೊಬ್ಬರ ಆಯ್ಕೆಯಾಗಿದೆ, ಆದರೆ ಅವುಗಳನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಬಳಸುವುದಷ್ಟೇ ಅಲ್ಲ, ಆಹಾರಕ್ರಮವನ್ನು ಸುಧಾರಿಸುವುದು ಸಹ ಅಗತ್ಯವಾಗಿದೆ. ಹೆಚ್ಚುತ್ತಿರುವ ಮಾಲಿನ್ಯ ಮತ್ತು ಜೀವನಶೈಲಿಯಿಂದಾಗಿ ನಮ್ಮ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಒಡೆಯಲು ಪ್ರಾರಂಭಿಸುತ್ತದೆ. ನೀವು ತಿನ್ನುವ ಆಹಾರವು ನಿಮ್ಮ ಆರೋಗ್ಯದ ಜೊತೆಗೆ ಚರ್ಮ ಮತ್ತು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಕೂದಲಿಗೆ ಸಾಕಷ್ಟು ಪೋಷಣೆ ಮತ್ತು ಕೂದಲು ನಿರ್ಜೀವವಾಗುವುದನ್ನು ತಡೆಯುವ ಆಹಾರಗಳನ್ನು ತೆಗೆದುಕೊಳ್ಳಬೇಕು.

ಕೂದಲಿಗೆ ಪ್ರಯೋಜನಕಾರಿ ಆಹಾರಗಳು:
1. ಮೊಟ್ಟೆಗಳು:

ಕೂದಲು ಬುಡದಿಂದ ಗಟ್ಟಿಯಾಗಬೇಕೆಂದರೆ ಮೊಟ್ಟೆ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಕೂದಲು ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ ಮತ್ತು ಪ್ರೋಟೀನ್‌ನ ಕೊರತೆಯು ಕೂದಲು ಬೆಳೆಯುವುದನ್ನು ತಡೆಯುತ್ತದೆ. ಮೊಟ್ಟೆಗಳನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ, ಇದು ದೇಹದಲ್ಲಿನ ಪ್ರೋಟೀನ್ ಕೊರತೆಯನ್ನು ಪೂರೈಸುವ ಮೂಲಕ ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೊಟ್ಟೆಯಿಂದ, ನಾವು ಪ್ರೋಟೀನ್ ಮಾತ್ರವಲ್ಲದೆ, ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯವಾದ ಜಿಂಕ್, ಸೆಲೆನಿಯಮ್, ವಿಟಮಿನ್ ಎ, ಡಿ ಮತ್ತು ಬಿ 12 ಅನ್ನು ಸಹ ಪಡೆಯುತ್ತೇವೆ. ನೀವು ಪ್ರತಿದಿನ 1 ಮೊಟ್ಟೆಯನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಆರೋಗ್ಯಕರ ಕೂದಲನ್ನೂ ಪಡೆಯಬಹುದು.

ಇದನ್ನೂ ಓದಿ- Hair Care Tips: ಎಣ್ಣೆ ಹಚ್ಚಿದ ನಂತರ ನಿಮ್ಮ ಕೂದಲು ಉದುರುತ್ತದೆಯೇ? ಅದಕ್ಕೆ ಕಾರಣ ತಿಳಿಯಿರಿ

2. ಕಡಲೆಕಾಯಿ ಮತ್ತು ಕಡಲೆಕಾಯಿ ಬೆಣ್ಣೆ:
ಕಡಲೆಕಾಯಿ ಮತ್ತು ಕಡಲೆಕಾಯಿ ಬೆಣ್ಣೆಯನ್ನು ಕೂದಲಿಗೆ ಅಗತ್ಯವೆಂದು ಪರಿಗಣಿಸಲಾಗಿದೆ. ಕಡಲೆಕಾಯಿಯಲ್ಲಿ ಮತ್ತು ಅದರಿಂದ ಪಡೆದ ಬೆಣ್ಣೆಯಲ್ಲಿ ಪ್ರೋಟೀನ್  ಜೊತೆಗೆ, ಉತ್ತಮ ಪ್ರಮಾಣದ ವಿಟಮಿನ್ ಇ ಮತ್ತು ಬಯೋಟಿನ್ ಕಂಡುಬರುತ್ತದೆ, ಇದು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿದೆ. ಆದ್ದರಿಂದ ನಿಮಗೆ ಕೂದಲಿನ ಸಮಸ್ಯೆಗಳಿದ್ದರೆ, ನಿಮ್ಮ ಆಹಾರದಲ್ಲಿ ಕಡಲೆಕಾಯಿ ಅಥವಾ ಕಡಲೆಕಾಯಿ ಬೆಣ್ಣೆಯನ್ನು ಸೇರಿಸಿಕೊಳ್ಳಬಹುದು. 

3. ಪಾಲಕ್​ :
ನಿಮಗೆ ಉದ್ದ ಕೂದಲು ಬೇಕಿದ್ದರೆ ಪಾಲಕ್ ಸೊಪ್ಪನ್ನು ತಿನ್ನಿ. ಪಾಲಕ್ ಆರೋಗ್ಯಕರ ಹಸಿರು ಎಲೆಗಳ ತರಕಾರಿ, ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಇದು ಕಬ್ಬಿಣ, ಫೋಲೇಟ್ ಮತ್ತು ಅನೇಕ ವಿಶೇಷ ಜೀವಸತ್ವಗಳನ್ನು ಹೊಂದಿದೆ, ಇದು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯ ಪಾತ್ರವಹಿಸುತ್ತದೆ ಎನ್ನಲಾಗುವುದು.

4. ಒಣಗಿದ ಹಣ್ಣುಗಳು /ಡ್ರೈ ಫ್ರೂಟ್ಸ್:
ಹಲವು ಬಗೆಯ ಕೊಬ್ಬಿನಾಮ್ಲಗಳು, ಸತು ಮತ್ತು ವಿಟಮಿನ್ ಇ ಮತ್ತು ಬಿ ಬಹುತೇಕ ಎಲ್ಲಾ ಒಣ ಹಣ್ಣುಗಳಲ್ಲಿ ಕಂಡುಬರುತ್ತವೆ, ಇದನ್ನು ಸೇವಿಸುವುದರಿಂದ ಕೂದಲಿಗೆ ಸಂಪೂರ್ಣ ಪೋಷಣೆ ಸಿಗುತ್ತದೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಗುಣವಾಗುತ್ತವೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಒಣ ಹಣ್ಣುಗಳನ್ನು ತಪ್ಪದೇ ಸೇರಿಸಿ.

ಇದನ್ನೂ ಓದಿ- Hair Care Tips: ಡ್ಯಾಂಡ್ರಫ್ ಮುಕ್ತ, ಉದ್ದವಾದ ಕೂದಲಿಗಾಗಿ ವಾರದಲ್ಲಿ ಎರಡು ದಿನ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ

5. ಸಿಟ್ರಸ್ ಹಣ್ಣುಗಳು :
ಕಿತ್ತಳೆ ಮತ್ತು ನಿಂಬೆಹಣ್ಣಿನಂತಹ ಆಹಾರಗಳಲ್ಲಿ ವಿಟಮಿನ್ ಸಿ ನಂತಹ ಅನೇಕ ಪ್ರಯೋಜನಕಾರಿ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಜೀವಕೋಶದ ಹಾನಿಯನ್ನು ತಡೆಯಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News