Garuda Puran: ಮೃತದೇಹವನ್ನು ಒಂಟಿಯಾಗಿ ಬಿಟ್ಟರೆ ಏನಾಗುತ್ತೆ ಗೊತ್ತಾ? ಕಲ್ಪನೆಗೂ ಮೀರಿ ನಡೆಯುವ ಘಟನೆ ಅದು!!

Garuda Puran About After Death:  ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದ ನಂತರ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಸೂರ್ಯಾಸ್ತದ ನಂತರ ಅಂತಿಮ ವಿಧಿಗಳನ್ನು ಎಂದಿಗೂ ನಡೆಸಲಾಗುವುದಿಲ್ಲ. ಮನೆಯ ಹಿರಿಯ ಮಗ ಮಾತ್ರ ಶವದ ಸಂಸ್ಕಾರ ಮಾಡಬೇಕು. ಅಷ್ಟೇ ಅಲ್ಲದೆ, ಮೃತ ದೇಹವನ್ನು ಎಂದಿಗೂ ಒಂಟಿಯಾಗಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.

Written by - Bhavishya Shetty | Last Updated : Dec 21, 2022, 12:09 PM IST
    • ಯಾರಾದರೂ ಮರಣ ಹೊಂದಿದ ನಂತರ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯ
    • ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ಗರುಡ ಪುರಾಣದಲ್ಲಿ ವಿವರಿಸಲಾಗಿದೆ
    • ಮೃತದೇಹವನ್ನು ಎಂದಿಗೂ ಒಂಟಿಯಾಗಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ
Garuda Puran: ಮೃತದೇಹವನ್ನು ಒಂಟಿಯಾಗಿ ಬಿಟ್ಟರೆ ಏನಾಗುತ್ತೆ ಗೊತ್ತಾ? ಕಲ್ಪನೆಗೂ ಮೀರಿ ನಡೆಯುವ ಘಟನೆ ಅದು!! title=
Dead Body

Garuda Puran About After Death: ವ್ಯಕ್ತಿಯ ಮರಣದ ನಂತರವೂ ಹಲವು ವಿಧದ ನಿಯಮಗಳನ್ನು ಅನುಸರಿಸಲಾಗುತ್ತದೆ. ಆ ನಿಯಮಗಳನ್ನು ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಅನುಸರಿಸುತ್ತಾರೆ. ಇನ್ನು ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಸಾವಿನ ನಂತರದ ಮಾಡುವ ವಿಧಿಗಳನ್ನು ಅಂತಿಮ ವಿಧಿಗಳು ಎಂದು ಕರೆಯಲಾಗುತ್ತದೆ.

ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದ ನಂತರ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಸೂರ್ಯಾಸ್ತದ ನಂತರ ಅಂತಿಮ ವಿಧಿಗಳನ್ನು ಎಂದಿಗೂ ನಡೆಸಲಾಗುವುದಿಲ್ಲ. ಮನೆಯ ಹಿರಿಯ ಮಗ ಮಾತ್ರ ಶವದ ಸಂಸ್ಕಾರ ಮಾಡಬೇಕು. ಅಷ್ಟೇ ಅಲ್ಲದೆ, ಮೃತ ದೇಹವನ್ನು ಎಂದಿಗೂ ಒಂಟಿಯಾಗಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.

ಇದನ್ನೂ ಓದಿ: Chanakya Niti: ಈ ಕಾರಣದಿಂದ ಮಹಿಳೆಯರನ್ನು ಶಕ್ತಿ ಸ್ವರೂಪಿ ಎನ್ನಲಾಗುತ್ತದೆ, ಇದನ್ನು ಬಹುತೇಕ ಪುರುಷರು ಒಪ್ಕೊಳ್ತಾರೆ

ಗರುಡ ಪುರಾಣದ ಪ್ರಕಾರ ರಾತ್ರಿಯಲ್ಲಿ ಹೆಚ್ಚು ತಾಂತ್ರಿಕ ಚಟುವಟಿಕೆಗಳನ್ನು ಮಾಡಲಾಗುತ್ತದೆ. ರಾತ್ರಿಯಲ್ಲಿ ಮೃತ ದೇಹವನ್ನು ಒಂಟಿಯಾಗಿ ಬಿಟ್ಟರೆ, ಸತ್ತ ಆತ್ಮವು ತೊಂದರೆಗೆ ಸಿಲುಕುತ್ತದೆ. ಈ ಹಿನ್ನೆಲೆಯಲ್ಲಿ ಮೃತ ದೇಹವನ್ನು ಏಕಾಂಗಿಯಾಗಿ ಬಿಡಬಾರದು ಎಂದು ಹೇಳಲಾಗುತ್ತದೆ.

ಗರುಡ ಪುರಾಣದ ಪ್ರಕಾರ, ಮೃತ ದೇಹವನ್ನು ಒಂಟಿಯಾಗಿ ಬಿಟ್ಟರೆ ದುಷ್ಟಶಕ್ತಿಗಳು ದೇಹವನ್ನು ಪ್ರವೇಶಿಸಲು ಪ್ರಯತ್ನಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಮೃತ ದೇಹವನ್ನು ವಿಶೇಷವಾಗಿ ರಾತ್ರಿಯಲ್ಲಿ ಏಕಾಂಗಿಯಾಗಿ ಬಿಡುವುದಿಲ್ಲ. ಈ ಸಮಯದಲ್ಲಿ ದುಷ್ಟಶಕ್ತಿಗಳು ಹೆಚ್ಚು ಸಕ್ರಿಯವಾಗಿರುತ್ತವೆ.

ಸಾವಿನ ನಂತರ, ಮೃತದೇಹದಲ್ಲಿ ಹಲವಾರು ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುವ ಅಪಾಯವಿದೆ. ಆದ್ದರಿಂದ ಯಾರಾದರೂ ಮೃತದೇಹದ ಸುತ್ತಲೂ ಕುಳಿತುಕೊಂಡು ಅಗರಬತ್ತಿ ಅಥವಾ ಧೂಪಗಳನ್ನು ಬೆಳಗಿಸುತ್ತಾರೆ.

ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಆತ್ಮವು ಮೃತದೇಹದ ಸುತ್ತಲೂ ಉಳಿಯುತ್ತದೆ. ಈ ಸಮಯದಲ್ಲಿ, ಅವುಗಳು ಮತ್ತೆ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಜನರು ಮೃತ ದೇಹವನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ.

ಮನುಷ್ಯ ಸತ್ತ ನಂತರ ಕ್ರಿಮಿಕೀಟಗಳು ಮೃತದೇಹದ ಬಳಿ ಬರುವ ಆತಂಕವಿದ್ದು, ಇದರಿಂದ ಮೃತದೇಹ ಬೇಗ ಹಾಳಾಗುವ ಸಂಭವವಿರುತ್ತದೆ

ಇದನ್ನೂ ಓದಿ: Itchy Palm Meaning: ಕೈಯಲ್ಲಿ ತುರಿಕೆಯಾದರೆ ನಿಜವಾಗಲೂ ಹಣ ಸಿಗುತ್ತಾ? ಏನ್ ಹೇಳುತ್ತೆ ಶಾಸ್ತ್ರ?

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಮಾಡಿ 

Trending News