Dhanteras 2022: ಧನತ್ರಯೋದಶಿಯಲ್ಲಿ ಪಾತ್ರೆಗಳನ್ನು ಏಕೆ ಖರೀದಿಸಲಾಗುತ್ತದೆ ಗೊತ್ತಾ?

ಧನತ್ರಯೋದಶಿಯಲ್ಲಿ ಶಾಪಿಂಗ್ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಜನರು ಪಾತ್ರೆಗಳನ್ನು ಖರೀದಿಸುತ್ತಾರೆ. ಈ ವಿಶೇಷ ದಿನದಂದು ಪಾತ್ರೆಗಳನ್ನು ಏಕೆ ಖರೀದಿಸುತ್ತಾರೆ ಗೊತ್ತಾ?  

Written by - Puttaraj K Alur | Last Updated : Oct 20, 2022, 01:44 PM IST
  • ಅಕ್ಟೋಬರ್ 23ರಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ
  • ಧನತ್ರಯೋದಶಿ ದಿನದಂದು ಲೋಹ ಖರೀದಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ
  • ಧನತ್ರಯೋದಶಿ ಹಬ್ಬದಲ್ಲಿ ಬೆಳ್ಳಿಯನ್ನು ಖರೀದಿಸುವುದು ಅತ್ಯಂತ ಮಂಗಳಕರ
Dhanteras 2022: ಧನತ್ರಯೋದಶಿಯಲ್ಲಿ ಪಾತ್ರೆಗಳನ್ನು ಏಕೆ ಖರೀದಿಸಲಾಗುತ್ತದೆ ಗೊತ್ತಾ? title=
ಧನತ್ರಯೋದಶಿ 2022

ನವದೆಹಲಿ: ಧನತ್ರಯೋದಶಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈಗ ಬಹುತೇಕರು ತಮ್ಮ ಮನೆಯನ್ನು ಸ್ವಚ್ಛಗೊಳಿಸಿದ್ದಾರೆ. ಈ ಬಾರಿ ಈ ಹಬ್ಬವನ್ನು ಅಕ್ಟೋಬರ್ 23ರಂದು ಆಚರಿಸಲಾಗುತ್ತದೆ. ಧನತ್ರಯೋದಶಿಯಂದು ಬಹುತೇಕರು ಶಾಪಿಂಗ್ ಮಾಡಲು ಯೋಜಿಸುತ್ತಿರುತ್ತಾರೆ. ಸಾಮಾನ್ಯವಾಗಿ ಜನರು ಧನತ್ರಯೋದಶಿಯಲ್ಲಿ ಪಾತ್ರೆಗಳನ್ನು ಖರೀದಿಸುತ್ತಾರೆ. ಇದರೊಂದಿಗೆ ಅನೇಕರು ಚಿನ್ನ, ಬೆಳ್ಳಿ, ಪೊರಕೆಗಳನ್ನೂ ಖರೀದಿಸುತ್ತಾರೆ. ಈ ದಿನ ಖರೀದಿಸಿದ ವಸ್ತುಗಳು 13 ಪಟ್ಟು ಹೆಚ್ಚಾಗುತ್ತವೆ ಮತ್ತು ಲಕ್ಷ್ಮಿದೇವಿಯು ಸಂತೋಷಗೊಂಡು ನಿಮಗೆ ಆಶೀರ್ವಾದ ನೀಡುತ್ತಾಳೆ ಎಂದು ನಂಬಲಾಗಿದೆ.   

ಸಾಗರ ಮಂಥನದಿಂದ ಪ್ರತ್ಯಕ್ಷನಾದ ಧನ್ವಂತರಿ ಭಗವಂತ

ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಧನತ್ರಯೋದಶಿಯನ್ನು ಆಚರಿಸಲಾಗುತ್ತದೆ. ವಾಸ್ತವವಾಗಿ ಈ ದಿನ ಭಗವಾನ್ ಧನ್ವಂತರಿಯು ಸಾಗರ ಮಂಥನದಿಂದ ಮಹಾಲಕ್ಷ್ಮಿಯಂತೆ ಜನಿಸಿದನಂತೆ. ಆದ್ದರಿಂದ ಈ ದಿನವನ್ನು ಭಗವಾನ್ ಧನ್ವಂತರಿಯ ಜನ್ಮದಿನವೆಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: ಧನತ್ರಯೋದಶಿ ದಿನ ಪೊರಕೆ ಖರೀದಿ ಮತ್ತು ಪೂಜಾ ನಿಯಮ ಹೀಗಿದ್ದರೆ ಶುಭ . !

ಲೋಹ ಖರೀದಿಸುವುದು ಉತ್ತಮ

ಭಗವಾನ್ ಧನ್ವಂತರಿಯು ಜನಿಸಿದಾಗ ಅವರು ಒಂದು ಪಾತ್ರೆಯಲ್ಲಿ ಅಮೃತವನ್ನು ಹೊತ್ತಿದ್ದರು ಎಂದು ನಂಬಲಾಗಿದೆ. ಭಗವಾನ್ ಧನ್ವಂತರಿಯು ಕಲಶದೊಂದಿಗೆ ಕಾಣಿಸಿಕೊಂಡಿದ್ದರಿಂದ ಈ ದಿನ ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯ ನಡೆಯುತ್ತಿದೆ. ಧನತ್ರಯೋದಶಿ ದಿನದಂದು ಲೋಹಗಳನ್ನು ಖರೀದಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ.

ಬೆಳ್ಳಿ ಖರೀದಿಸಿ

ಈ ದಿನ ಬೆಳ್ಳಿಯನ್ನು ಖರೀದಿಸುವುದು ಅತ್ಯಂತ ಮಂಗಳಕರ. ನಿಮಗೆ ಬೆಳ್ಳಿಯನ್ನು ಖರೀದಿಸಲು ಸಾಧ್ಯವಾಗದಿದ್ದರೆ ಈ ದಿನ ನೀವು ಹಿತ್ತಾಳೆ, ಕಂಚು, ಚಿನ್ನವನ್ನು ಸಹ ಖರೀದಿಸಬಹುದು. ಆದರೆ ಈ ದಿನ ಸ್ಟೀಲ್ ಪಾತ್ರೆ, ಕಬ್ಬಿಣ ಖರೀದಿಸಬಾರದು.

ಇದನ್ನೂ ಓದಿ: ದೀಪಾವಳಿ ಮುನ್ನಾ ದಿನ ಈ ವಸ್ತುಗಳನ್ನು ದಾನ ಮಾಡಿದರೆ ಎದುರಾಗುವುದೇ ಇಲ್ಲ ಹಣದ ಸಮಸ್ಯೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News