Devi Lakshmi Money Signal - ದೇವಿ ಲಕ್ಷ್ಮಿಯ ಈ ಸಂಕೇತಗಳನ್ನು ನೀವು ತಿಳಿದುಕೊಂಡು ಧನವಂತರಾಗಿ

Devi Lakshmi Money Signal - ಇಂದು ನಾವು ನಿಮಗೆ ಹಣ ಬೀಳುವ ಅಥವಾ ಹಣ ಸಿಗುವ ಶುಭ-ಅಶುಭ ಸಂಕೆತಗಳ (Astrology Tips) ಕುರಿತು ಹೇಳಲಿದ್ದೇವೆ.

Written by - Nitin Tabib | Last Updated : Mar 3, 2021, 10:47 AM IST
  • ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಹಣಕ್ಕೆ ಸಾಕಷ್ಟು ಮಹತ್ವವಿದೆ.
  • ಈ ಜಗತ್ತಿನಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಸಾಕಷ್ಟು ಹಣವನ್ನು ಸಂಪಾದಿಸಿ ಶ್ರೀಮಂತನಾಗಲು ಬಯಸುತ್ತಾನೆ.
  • ಹಣವನ್ನು ಸಂಪಾದಿಸಲು, ಜನರು ಕಷ್ಟಪಟ್ಟು ಮೈ ಮುರಿದು ದುಡಿಯುತ್ತಾರೆ.
Devi Lakshmi Money Signal - ದೇವಿ ಲಕ್ಷ್ಮಿಯ ಈ ಸಂಕೇತಗಳನ್ನು ನೀವು ತಿಳಿದುಕೊಂಡು ಧನವಂತರಾಗಿ title=
Devi Lakshmi Money Signal (File Photo)

Devi Lakshmi Money Signal - ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಹಣಕ್ಕೆ ಸಾಕಷ್ಟು ಮಹತ್ವವಿದೆ. ಈ ಜಗತ್ತಿನಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಸಾಕಷ್ಟು ಹಣವನ್ನು ಸಂಪಾದಿಸಿ ಶ್ರೀಮಂತನಾಗಲು ಬಯಸುತ್ತಾನೆ. ಹಣವನ್ನು ಸಂಪಾದಿಸಲು, ಜನರು ಕಷ್ಟಪಟ್ಟು ಮೈ ಮುರಿದು ದುಡಿಯುತ್ತಾರೆ. ಇದರಿಂದ ಆತ ಸಾಕಷ್ಟು ಹಣವನ್ನು ಸಂಪಾದಿಸಿ ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಾನೆ.

- ಹಲವು ಬಾರಿ ನಾವು ನಡೆದುಕೊಂಡು ಹೋಗುವಾಗ ಹಣ ನಮ್ಮ ಕೈಜಾರಿ ಅಥವಾ ಪರ್ಸ್ ನಿಂದ ಕೆಳಗೆ ಬಿದ್ದುಹೋಗುತ್ತದೆ ಮತ್ತು ಬೇರೊಬ್ಬ ವ್ಯಕ್ತಿ ಅದನ್ನು ಎತ್ತಿಕೊಳ್ಳುತ್ತಾನೆ. ಆದರೆ, ಕೆಳಗೆ ಬಿದ್ದ ಹಣವನ್ನು ಎತ್ತಿಕೊಳ್ಳುವುದರ ಹಿಂದೆ ಯಾವ ಸಂಕೇತ ಅಡಗಿದೆ ನಿಮಗೆ ತಿಳಿದಿದೆಯೇ? ಹಾಗಾದರೆ, ಬನ್ನಿ ಹಣ (Money Tips) ಕೈಜಾರಿ ಕೆಳಗೆ ಬೀಳುವುದು ಹಾಗೂ ಬಿದ್ದ ಹಣವನ್ನು ಎತ್ತುವುದರ ಹಿಂದಿನ ಸಂಕೇತಗಳೇನು ತಿಳಿದುಕೊಳ್ಳೋಣ.

- ಬೆಳಗಿನ ಸಮಯದಲ್ಲಿ ಹಣ ಅಥವಾ ನಾಣ್ಯ ಕೈಜಾರಿ ಬೀಳುವುದು ಅತ್ಯಂತ ಶುಭ ಎನ್ನಲಾಗುತ್ತದೆ. ಇದು ಭವಿಷ್ಯದಲ್ಲಿ ನಿಮಗೆ ಧನಲಾಭವಾಗಲಿದೆ ಎಂಬ ಸಂಕೇತ ನೀಡುತ್ತದೆ. ಆದರೆ, ನೀವು ಹಣವನ್ನು ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸಬಾರದು. ಇದು ದೇವಿ ಲಕ್ಷ್ಮಿಯ (Goddess Lakshmi) ಅಸಮಾಧಾನಕ್ಕೆ ಕಾರಣವಾಗುತ್ತದೆ ಹಾಗೂ ಧನ ಲಾಭದ ಜಾಗದಲ್ಲಿ ಧನ ಹಾನಿ ಸಂಭವಿಸುತ್ತದೆ.

- ಒಂದು ವೇಳೆ ನೀವು ಯಾರಿಗಾದರು ಹಣವನ್ನು ನೀಡುವಾಗ ಆಕಸ್ಮಿಕವಾಗಿ ಹಣ ನಿಮ್ಮ ಕೈಜಾರಿ ಕೆಳಗೆ ಬಿದ್ದರೆ, ಇದು ಇಬ್ಬರ ಪಾಲಿಗೂ ಕೂಡ ಶುಭ ಸಂಕೇತ. ನಿಮ್ಮ ನಿಂತು ಹೋಗಿರುವ ಹಣ ಬೇಗನೆ ನಿಮ್ಮ ಕೈಸೇರಲಿದೆ ಎಂಬುದೇ ಇದರ ಸಂಕೇತ.

ಇದನ್ನೂ ಓದಿ-ದೇಶದಲ್ಲಿ ಶಿವನ 12 ಜ್ಯೋತಿರ್ಲಿಂಗಗಳು ಎಲ್ಲಿವೆ? ಅವುಗಳ ಮಹತ್ವವೇನು? ಇಲ್ಲಿದೆ ಮಹತ್ವದ ಮಾಹಿತಿ

- ಬೆಳಿಗ್ಗೆ ದಾರಿಯಲ್ಲಿ ಹೋಗುವಾಗ ನಿಮಗೆ ಹಣ ದೊರೆತರೆ ಇದು ಶುಭ ಸಂಕೇತ. ಇದರರ್ಥ ನಿಮಗೆ ಬಡ್ತಿ ಸಿಗಲಿದೆ ಎಂದರ್ಥ. ರಸ್ತೆಯಲ್ಲಿ ಹೋಗುವಾಗ ಹಣ ದೊರೆತರೆ ಅದನ್ನು ಖರ್ಚು ಮಾಡದೆ ಹಾಗೆಯೇ ಜೋಪಾನವಾಗಿ ಇಟ್ಟುಕೊಳ್ಳಿ. ಇದಲ್ಲದೆ ಬೆಳಗಿನ ಸಮಯದಲ್ಲಿ ಹಣದಿಂದ ತುಂಬಿದ ಪರ್ಸ್ ಸಿಕ್ಕರೂ ಕೂಡ ಇದು ತುಂಬಾ ಶುಭ ಸಂಕೇತ.

ಇದನ್ನೂ ಓದಿ-ಮಂಗಳ ದೋಷ ನಿವಾರಣೆಗೆ ವಿಷ್ಣು ಪೂಜೆಯ ಸಂದರ್ಭದಲ್ಲಿ ಈ ಗಿಡಕ್ಕೆ ವಿಶೇಷ ಮಹತ್ವ ನೀಡಿ

- ಇದಲ್ಲದೆ ಬೆಳಗಿನ ಸಮಯದಲ್ಲಿ ನಾಣ್ಯ ದೊರೆತರೂ (Getting Money In The Morning) ಕೂಡ ಇದು ಶುಭ ಸಂಕೇತ. ಈ ನಾಣ್ಯವನ್ನು ಗುಡ್ ಲಕ್ ಚಾರ್ಮ್ ರೂಪದಲ್ಲಿ ಜೋಪಾನವಾಗಿಟ್ಟುಕೊಳ್ಳಿ. ಇದರಿಂದ ನಿಮ್ಮ ಭಾಗ್ಯ ತೆರೆದುಕೊಳ್ಳಲಿದೆ.

ಇದನ್ನೂ ಓದಿ-PitraDosha : ಪಿತೃಗಳ ರಕ್ಷೆ ಯಾಕೆ ಬೇಕು..? ಪಿತೃದೋಷ ನಿವಾರಣೆ ಹೇಗೆ..?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News