Clove For Skin: ಲವಂಗವನ್ನು ಈ ರೀತಿ ಬಳಸಿ ಮುಖದ ಸುಕ್ಕಿನ ಸಮಸ್ಯೆ ನಿವಾರಿಸಿ

Clove For Skin: ಮುಖದ ಸುಕ್ಕಿನ ಸಮಸ್ಯೆಯನ್ನು ನಿವಾರಿಸಲು ಲವಂಗ ಬಹಳ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Sep 8, 2021, 01:59 PM IST
  • ಲವಂಗದ ಬಳಕೆಯಿಂದ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲಾಗುತ್ತದೆ
  • ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ
  • ಮುಖದ ಮೇಲೆ ಲವಂಗವನ್ನು ಬಳಸುವುದರಿಂದ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಬಹುದು
Clove For Skin: ಲವಂಗವನ್ನು ಈ ರೀತಿ ಬಳಸಿ ಮುಖದ ಸುಕ್ಕಿನ ಸಮಸ್ಯೆ ನಿವಾರಿಸಿ title=
Cloves For Skin

Cloves To Remove Wrinkles: ಲವಂಗವನ್ನು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಲವಂಗವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಲ್ಲದೇ, ಚರ್ಮಕ್ಕೂ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಲವಂಗವನ್ನು (Clove For Skin) ಚರ್ಮದ ಮೇಲೆ ಬಳಸುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಲವಂಗವನ್ನು ಮುಖಕ್ಕೆ ಹೇಗೆ ಬಳಸಬಹುದು ಎಂಬುದನ್ನು ತಿಳಿದಿರುವುದು ಬಹಳ ಮುಖ್ಯ. ವಯಸ್ಸಾದಂತೆ ಮುಖದ ಮೇಲೆ ಮೂಡುವ ಸುಕ್ಕುಗಳನ್ನು ತೆಗೆದುಹಾಕಲು ಲವಂಗವನ್ನು ಹೇಗೆ ಬಳಸುವುದು ಎಂದು ತಿಳಿಯಿರಿ...

ಲವಂಗಗಳು ಚರ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಲವಂಗದ ಬಳಕೆಯಿಂದ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲಾಗುತ್ತದೆ. ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ (Skin Health) ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ. ಮುಖದ ಮೇಲೆ ಲವಂಗವನ್ನು ಬಳಸುವುದರಿಂದ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಬಹುದು. ಇದು ನಿಮ್ಮ ಮುಖದಿಂದ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಲವಂಗವು ಸೆಪ್ಟಿಕ್ ವಿರೋಧಿ ಗುಣಗಳನ್ನು ಹೊಂದಿದೆ, ಇದು ಅನೇಕ ಚರ್ಮದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ- Dark Spots on Face: ಚರ್ಮದ ಮೇಲಿನ ಕಲೆ ನಿವಾರಣೆಗೆ ಶುಂಠಿಯನ್ನು ಈ ರೀತಿ ಬಳಸಿ

ಚರ್ಮದ ಸುಕ್ಕು ನಿವಾರಣೆಗೆ ಲವಂಗವನ್ನು ಹೇಗೆ ಬಳಸುವುದು?
ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ನೀವು ಲವಂಗದ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ, ನಿಮ್ಮ ಅಂಗೈ ಮೇಲೆ ಕೆಲವು ಹನಿ ಲವಂಗ ಎಣ್ಣೆಯನ್ನು (Cloves Oil) ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಸೇರಿಸಿ. ಎರಡೂ ಎಣ್ಣೆಗಳನ್ನು ಅಂಗೈಗಳೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ನಂತರ ಅದನ್ನು ರಾತ್ರಿಯಿಡಿ ಹಾಗೆ ಬಿಡಿ.

ಇದಲ್ಲದೆ ಒಂದೆರಡು ಲವಂಗವನ್ನು ರೋಸ್ ವಾಟರ್ ಜೊತೆಗೆ ಬೆರೆಸಿ ನುಣ್ಣಗೆ ಮಾಡಿ ನಂತರ ಚರ್ಮಕ್ಕೆ ಹಚ್ಚಬಹುದು. ಇದು ನಿಮ್ಮ ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ.

ಇದನ್ನೂ ಓದಿ- Nipah Virus: ನಿಫಾ ವೈರಸ್ Vs ಕರೋನಾ ವೈರಸ್, ಯಾವ ವೈರಸ್ ಹೆಚ್ಚು ಅಪಾಯಕಾರಿ ಎಂದು ತಿಳಿದಿದೆಯೇ?

ಇದಲ್ಲದೇ ನೀವು ಲವಂಗದ ಪುಡಿಯನ್ನು ಮುಲ್ತಾನಿ ಮಿಟ್ಟಿ ಜೊತೆಗೆ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಬಹುದು. ಇದು ಅನೇಕ ಚರ್ಮದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News