Chanakya Niti: ಆಚಾರ್ಯ ಚಾಣಕ್ಯರ ಪ್ರಸಿದ್ಧ ಚಾಣಕ್ಯ ನೀತಿಯಲ್ಲಿ ಜೀವನದ ಅನುಭವಗಳ ನೀತಿಗಳನ್ನು ಸಂಗ್ರಹಿಸಲಾಗಿದೆ. ಚಾಣಕ್ಯ ನೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಸುಖ-ಶಾಂತಿಯಿಂದ ಬದುಕಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಚಾಣಕ್ಯ ನೀತಿಯಲ್ಲಿ ತಿಳಿಸಿರುವ ನಿಯಮಗಳನ್ನು ಅನುಸರಿಸುವ ಮೂಲಕ ಮನೆಯನ್ನು ಸ್ವರ್ಗವನ್ನಾಗಿಸಬಹುದು ಎಂಬ ನಂಬಿಕೆ ಇದೆ. ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವ ಈ ನಾಲ್ಕು ಅಂಶಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಎದುರಾಗುವ ಬೆಟ್ಟದಂತಹ ಸಮಸ್ಯೆಯನ್ನೂ ಕೂಡ ಮಂಜಿನಂತೆ ಕರಗಿಸಬಹುದು ಎನ್ನಲಾಗುತ್ತದೆ.
ಚಾಣಕ್ಯ ನೀತಿಯ ಪ್ರಕಾರ, ಎಂತಹದ್ದೇ ಸಮಸ್ಯೆಯಾದರೂ ಚಿಟಿಕೆಯಲ್ಲಿ ದೂರ ಮಾಡುವ ಶಕ್ತಿಯಿರುವ ಸರಳ ಸೂತ್ರಗಳು ಇವು...
ತೃಪ್ತಿ:
ಬದಲಾಗಿರುವ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರಿಗೂ ಎಲ್ಲದರಲ್ಲೂ ತಾವು ಮುಂದೆಯೇ ಇರಬೇಕೆಂಬ ಹಂಬಲ. ಇದಕ್ಕಾಗಿ, ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಾರೆ. ಆದರೆ, ಅವರಿಗೆ ಜೀವನದಲ್ಲಿ ಯಾವುದರಲ್ಲಿಯೂ ತೃಪ್ತಿ ಎನ್ನುವುದೇ ಇರುವುದಿಲ್ಲ. ಚಾಣಕ್ಯ ನೀತಿಯ ಪ್ರಕಾರ, ಸಂತೋಷದ ಜೀವನಕ್ಕೆ ಅತ್ಯಂತ ಮುಖ್ಯವಾಗಿ ಬೇಕಿರುವ ಅಂಶ ಎಂದರೆ ತೃಪ್ತಿಯ ಮನೋಭಾವ. ಯಾವ ವ್ಯಕ್ತಿಗೆ ಜೀವನದಲ್ಲಿ ತೃಪ್ತಿ ಎನ್ನುವುದು ಇರುತ್ತದೆಯೋ, ಆ ವ್ಯಕ್ತಿಗೆ ಯಾವ ಸಮಸ್ಯೆಯೂ ಇರುವುದಿಲ್ಲ.
ಕರುಣೆ:
ಮನುಷ್ಯನ ಜೀವನದಲ್ಲಿ ಸಹಾನುಭೂತಿಯೂ ಬಹಳ ಮುಖ್ಯವಾದ ಅಂಶಗಳಲ್ಲಿ ಒಂದು. ಪ್ರಸ್ತುತ ಜಗತ್ತಿನಲ್ಲಿ ಪ್ರತಿಯೊಬ್ಬರೂ ದುಡ್ಡಿನ ಹಿಂದೆ ಹುಚ್ಚು ಕುದುರೆಗಳಂತೆ ಓಡುತ್ತಾರೆ. ಹಣ ಮತ್ತು ಖ್ಯಾತಿಯನ್ನು ಗಳಿಸುವ ಧಾವಂತದಲ್ಲಿ, ನಾವು ಹಲವು ಬಾರಿ ನಿರ್ಗತಿಕರನ್ನು ಸಹ ನಿರ್ಲಕ್ಷಿಸುತ್ತೇವೆ. ಆದರೆ, ಆಚಾರ್ಯ ಚಾಣಕ್ಯರು, ಯಾವ ವ್ಯಕ್ತಿಯ ಮನಸ್ಸಿನಲ್ಲಿ ಕರುಣೆ ಎನ್ನುವುದು ಜೀವಂತವಾಗಿರುತ್ತದೆಯೋ ಆ ವ್ಯಕ್ತಿ ಜೀವನದಲ್ಲಿ ಅತ್ಯಂತ ಸಂತೋಷವಾಗಿರುವ ವ್ಯಕ್ತಿ ಎಂದು ಹೇಳುತ್ತಾರೆ.
ಇದನ್ನೂ ಓದಿ- Chanakya Niti : ಈ ಎರಡು ತಪ್ಪುಗಳು ನಿಮ್ಮ ಸಂತೋಷವನ್ನು ಕಸಿದುಕೊಳ್ಳುತ್ತವೆ.. ಎಚ್ಚರ!
ದುರಾಸೆ:
ಆಸೆ ಎಂಬುದಕ್ಕೆ ಮಿತಿಯೇ ಇರುವುದಿಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ, ಆಸೆ ತಪ್ಪಲ್ಲ, ಆದರೆ ದುರಾಸೆ ಎಂಬುದು ಶಾಪವಿದ್ದಂತೆ. ಇದು ಒಮ್ಮೆ ವ್ಯಕ್ತಿಯ ಮನ ಹೊಕ್ಕರೆ ಇದರಿಂದ ಹೊರಬರುವುದು ತುಂಬಾ ಕಷ್ಟ. ಅತಿಯಾಸೆಯು ಮನುಷ್ಯನನ್ನು ಪತನದತ್ತ ಕೊಂಡೊಯ್ಯುತ್ತದೆ. ಇದು ಜೀವನದಲ್ಲಿ ಎಷ್ಟೇ ಇದ್ದರೂ ಕೂಡ ಸುಖ-ಶಾಂತಿಯನ್ನು ಕಸಿದುಕೊಳ್ಳುತ್ತದೆ. ಹಾಗಾಗಿ, ಜೀವನದಲ್ಲಿ ಸುಖವಾಗಿರಲು ಇಚ್ಚಿಸುವವರು ದುರಾಸೆಯ ಹಿಂದೆ ಓಡದೆ, ತಮ್ಮ ಮನಸ್ಸಿಗೆ ಕಡಿವಾಣ ಹಾಕಬೇಕು.
ಇದನ್ನೂ ಓದಿ- Chanakya Niti : ಇವರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ! ಯಾವತ್ತೂ ಇವರ ಸಹಾಯ ಕೇಳಬೇಡಿ
ಶಾಂತಿ:
ಮಾನವನ ಜೀವನದಲ್ಲಿ ಪ್ರತಿ ತಿರುವಿನಲ್ಲಿಯೂ ಏರಿಳಿತಗಳಿರುತ್ತವೆ. ಅನೇಕ ಬಾರಿ ಇಂತಹ ಸಮಸ್ಯೆಗಳು ನಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತವೆ. ಆದಾಗ್ಯೂ, ಅಂತಹ ಪರಿಸ್ಥಿತಿಯಲ್ಲೂ ನಾವು ಎಲ್ಲವನ್ನೂ ಶಾಂತ ಚಿತ್ತರಾಗಿ ಹಿಡಿತಕ್ಕೆ ತೆಗೆದುಕೊಳ್ಳಬೇಕು. ಏಕೆಂದರೆ ಗೊಂದಲದ ಮನಸ್ಸಿನಿಂದ ಮನುಷ್ಯ ಯಾವುದೇ ಸಮಸ್ಯೆಯನ್ನು ಎದುರಿಸಲು ಅಥವಾ ಅದರಿಂದ ಹೊರಬರಲು ಸಾಧ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹಾಗಾಗಿ, ನಾವು ಕಷ್ಟಗಳಿಂದ ಹೊರಬರಲು, ನಮ್ಮ ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಳ್ಳಬೇಕು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.