Chanakya Niti: ವ್ಯಾಪಾರದಲ್ಲಿ ಯಶಸ್ಸು ಸಾಧಿಸಲು ಚಾಣಕ್ಯನ ಈ 5 ಅದ್ಭುತ ಮಂತ್ರ ಅನುಸರಿಸಿ

ಯಶಸ್ಸಿಗೆ ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರು ಜೀವನ ಮತ್ತು ಕೆಲಸದಲ್ಲಿ ಯಶಸ್ಸು ಪಡೆಯಲು ಹಲವು ಮಂತ್ರಗಳ ಸಲಹೆ ನೀಡಿದ್ದಾರೆ. ಈ ಮಂತ್ರಗಳನ್ನು ಅನುಸರಿಸಿದ ನಂತರ ನಿಮಗೆ ಪ್ರತಿ ಕೆಲಸದಲ್ಲಿಯೂ ಸುಲಭವಾಗಿ ಯಶಸ್ಸು ಸಿಗುತ್ತದೆ.

Written by - Puttaraj K Alur | Last Updated : Jun 5, 2022, 06:42 AM IST
  • ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಸಮಯವು ಪ್ರಮುಖ ಮಂತ್ರವಾಗಿದೆ
  • ಚಾಣಕ್ಯನ ಪ್ರಕಾರ ಮಿತ್ರ ಮತ್ತು ಶತ್ರುಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು
  • ಯಾವುದೇ ವ್ಯಕ್ತಿಯಲ್ಲಿನ ಮಾಹಿತಿಯ ಕೊರತೆಯು ಆತನ ದೊಡ್ಡ ದೌರ್ಬಲ್ಯವಾಗಿದೆ
Chanakya Niti: ವ್ಯಾಪಾರದಲ್ಲಿ ಯಶಸ್ಸು ಸಾಧಿಸಲು ಚಾಣಕ್ಯನ ಈ 5 ಅದ್ಭುತ ಮಂತ್ರ ಅನುಸರಿಸಿ title=
Chanakya Niti For Business

ನವದೆಹಲಿ: ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಮತ್ತು ಸಂತೋಷವನ್ನು ಪಡೆಯಲು ಶ್ರಮಿಸುತ್ತಾನೆ. ಆದರೆ, ಅನೇಕ ಬಾರಿ ಕಠಿಣ ಪರಿಶ್ರಮದ ಹೊರತಾಗಿಯೂ ವ್ಯಕ್ತಿಗೆ ಯಶಸ್ಸು ಸಿಗುವುದಿಲ್ಲ. ಅದೇ ರೀತಿ ಕೆಲವು ಜನರು ಕಡಿಮೆ ಶ್ರಮದ ಹೊರತಾಗಿಯೂ ಸುಲಭವಾಗಿ ಯಶಸ್ಸನ್ನು ಪಡೆಯುತ್ತಾರೆ. ಸಂಪೂರ್ಣ ಮಾಹಿತಿ ಮತ್ತು ಸರಿಯಾದ ಮಾರ್ಗದರ್ಶನದ ಕೊರತೆಯಿಂದಾಗಿ ವ್ಯಕ್ತಿಯು ಜೀವನದಲ್ಲಿ ವೈಫಲ್ಯವನ್ನು ಹೊಂದುತ್ತಾರೆಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಚಾಣಕ್ಯನ ನೀತಿಯು ವ್ಯಕ್ತಿಯ ಜೀವನದಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ. ಆಚಾರ್ಯರ ನೀತಿಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಯಶಸ್ಸನ್ನು ಪಡೆಯಲು ಆಚಾರ್ಯರ 5 ಮಂತ್ರಗಳ ಬಗ್ಗೆ ತಿಳಿದುಕೊಳ್ಳಿರಿ.

ಮೊದಲ ಮಂತ್ರ

ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಸಮಯವು ಪ್ರಮುಖ ಮಂತ್ರವಾಗಿದೆ. ವ್ಯಕ್ತಿಯು ಯಾವುದೇ ಹೊಸ ಕೆಲಸವನ್ನು ಸಮಯವನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭಿಸಬೇಕು. ಕೆಲಸವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯವೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ಸಮಯ ಸರಿಯಿದ್ದರೆ ಹೊಸದನ್ನು ಮಾಡಬೇಕು, ಅದೇ ರೀತಿ ಕೆಟ್ಟ ಸಮಯದಲ್ಲಿ ತಾಳ್ಮೆಯಿಂದ ಕೆಲಸ ಮಾಡಬೇಕು. ಇಲ್ಲದಿದ್ದರೆ ವ್ಯಕ್ತಿಯ ಎಲ್ಲಾ ಶ್ರಮ ವ್ಯರ್ಥವಾಗುತ್ತದೆ.

ಇದನ್ನೂ ಓದಿ: Budh Margi 2022: ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ತೊಂದರೆ ಹೆಚ್ಚಿಸಲಿದ್ದಾನೆ ಮಾರ್ಗಿ ಬುಧ

ಎರಡನೇ ಮಂತ್ರ

ಚಾಣಕ್ಯನ ಪ್ರಕಾರ ಮಿತ್ರ ಮತ್ತು ಶತ್ರುಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಜನರು ಹೆಚ್ಚಾಗಿ ಶತ್ರುಗಳ ಬಗ್ಗೆ ಎಚ್ಚರದಿಂದಿರುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ. ಆದರೆ, ಮಿತ್ರರಂತೆ ಜೊತೆಯಾಗಿರುವವರು ಶತ್ರುಗಳಿಂದ ಮೋಸ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸ್ನೇಹಿತರಂತೆ ಶತ್ರುಗಳ ಸಹಾಯವನ್ನು ಕೇಳಿದರೆ, ನಿಮ್ಮ ಶ್ರಮವೆಲ್ಲವೂ ವ್ಯರ್ಥವಾಗುತ್ತದೆ.

ಮೂರನೇ ಮಂತ್ರ

ಆಚಾರ್ಯ ಚಾಣಕ್ಯ ಹೇಳುತ್ತಾರೆ ಯಾವುದೇ ವ್ಯಕ್ತಿಯಲ್ಲಿನ ಮಾಹಿತಿಯ ಕೊರತೆಯು ವ್ಯಕ್ತಿಯ ದೊಡ್ಡ ದೌರ್ಬಲ್ಯವಾಗಿದೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಅದರ ಸರಿಯಾದ ಮಾಹಿತಿ, ಸ್ಥಳ, ಕೆಲಸ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಬೇಕು. ಹೀಗೆ ಮಾಡುವುದರಿಂದ 100% ಯಶಸ್ಸು ನಿಮಗೆ ಬರುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಲಕ್ಷ್ಮೀ ನೆಲೆಯಾಗಬೇಕಾದರೆ ಇಂದಿನಿಂದಲೇ ಈ ಕೆಲಸ ಆರಂಭಿಸಿ

ನಾಲ್ಕನೇ ಮಂತ್ರ

ಯಶಸ್ಸು ಪಡೆಯಲು ನಾಲ್ಕನೇ ಮಂತ್ರವೆಂದರೆ ವ್ಯಕ್ತಿಯು ತನ್ನ ಆದಾಯ ಮತ್ತು ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು. ಉಳಿತಾಯದ ಅಭ್ಯಾಸವನ್ನು ಕಾಪಾಡಿಕೊಳ್ಳಿ ಏಕೆಂದರೆ ಇದು ಕೆಟ್ಟ ಸಮಯದಲ್ಲಿ ಬರುತ್ತದೆ.

ಐದನೇ ಮಂತ್ರ

ಚಾಣಕ್ಯ ಹೇಳುತ್ತಾರೆ ಯಾವುದೇ ವ್ಯಕ್ತಿಯು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವಾಗಲೂ ಒತ್ತು ನೀಡಬೇಕು. ಮತ್ತು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಏಕೆಂದರೆ ನೀವು ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಿನ ಕೆಲಸವನ್ನು ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಇಲ್ಲದಿದ್ದರೆ ನೀವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News