ನವದೆಹಲಿ: ಆಚಾರ್ಯ ಚಾಣಕ್ಯರು(Chanakya Niti) ತಮ್ಮ ನೀತಿಗಳ ಮೂಲಕ ಅಗತ್ಯ ಮತ್ತು ಬಲವಾದ ಸಂದೇಶಗಳನ್ನು ನೀಡಿದ್ದಾರೆ. ನೀತಿ ಶಾಸ್ತ್ರದಲ್ಲಿ ಚಾಣಕ್ಯ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆಯೂ ತಿಳಿಸಿದ್ದಾರೆ. ಚಾಣಕ್ಯ ನೀತಿಯಲ್ಲಿ ಧರ್ಮ-ಅಧರ್ಮ, ಕರ್ಮ, ಪಾಪ-ಪುಣ್ಯ ಇತ್ಯಾದಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಚಾಣಕ್ಯನ ಈ ನೀತಿಗಳ ಮೂಲಕ ಯಾವುದೇ ವ್ಯಕ್ತಿಯು ತನ್ನ ಜೀವನವನ್ನು ಅತ್ಯುತ್ತಮವಾಗಿ ರೂಪಿಸಿಕೊಳ್ಳಬಹುದು. ಪ್ರತಿಯೊಬ್ಬ ವ್ಯಕ್ತಿಯು ಕೆಲವು ಪ್ರಮುಖ ವಿಷಯಗಳಿಂದ ದೂರವಿರಬೇಕು ಎಂದು ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಈ ವಿಷಯಗಳ ಬಗ್ಗೆ ಯಾರಿಗೂ ತಿಳಿಸಬಾರದು
ಆಚಾರ್ಯ ಚಾಣಕ್ಯ(Ethics Of Chanakya)ರ ಪ್ರಕಾರ ಹಣವು ಒಂದು ದೊಡ್ಡ ಶಕ್ತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕ ನಷ್ಟ ಉಂಟಾದರೆ ಈ ವಿಚಾರವನ್ನು ಯಾರಿಗೂ ಹೇಳಬಾರದು. ಏಕೆಂದರೆ ನಿಮ್ಮ ಸ್ನೇಹಿತರೆ ನಿಮ್ಮ ಸಹಾಯಕ್ಕೆ ಬರದೆ ದೂರ ಸರಿಯಬಹುದು. ಇದಲ್ಲದೇ ಆತ್ಮಿಯರೇ ನಿಮ್ಮನ್ನು ಇತರರ ಮುಂದೆ ಅಪಹಾಸ್ಯ ಮಾಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಹಣಕಾಸಿನ ವಿಚಾರದ ಬಗ್ಗೆ ಯಾರಿಗೂ ತಿಳಿಸಬಾರದು.
ಇದನ್ನೂ ಓದಿ: Vastu Tips: ಮನೆಯಲ್ಲಿ ಇರಿಸುವ ಈ ವಸ್ತುಗಳಿಂದ ದುರದೃಷ್ಟ ಹೆಚ್ಚಾಗುತ್ತದೆ, ಏನೆಂದು ತಿಳಿಯಿರಿ
ನಿಮ್ಮ ದುಃಖವನ್ನು ಇತರರಿಗೆ ಹೇಳಬಾರದು ಎಂದು ಚಾಣಕ್ಯ(Chanakya Niti For Success In Life)ಹೇಳುತ್ತಾನೆ. ನಿಮ್ಮ ದುಃಖದ ಬಗ್ಗೆ ನೀವು ಯಾರೊಂದಿಗಾದರೂ ಚರ್ಚಿಸಿದರೆ, ಅವರು ನಿಮ್ಮನ್ನು ಕೀಳಾಗಿ ಕಾಣಬಹುದು. ನಿಮ್ಮ ಕಷ್ಟ ಕೇಳುವ ಬದಲು ಅವರು ನಿಮ್ಮ ದುಃಖದಿಂದ ಸಂತೋಷಪಡಬಹುದು. ಇದಲ್ಲದೆ ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ.
ಚಾಣಕ್ಯ ನೀತಿಯ ಪ್ರಕಾರ, ನಿಮ್ಮ ಹೆಂಡತಿಯ(Chankya Niti About Woman) ನಡವಳಿಕೆಯು ಕೆಟ್ಟದ್ದಾಗಿದ್ದರೆ ಮತ್ತು ಇದರ ಬಗ್ಗೆ ನಿಮಗೆ ತಿಳಿದಿದ್ದರೆ, ಆಕೆಯ ಕೆಟ್ಟ ಸ್ವಭಾವದ ಬಗ್ಗೆ ಮರುಗಬೇಡಿ. ಆದರೆ ನಿಮ್ಮಲ್ಲಿಯೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಇದನ್ನು ಇತರರ ಮುಂದೆ ಚರ್ಚಿಸುವುದು ಜನರಲ್ಲಿ ಮುಜುಗರವನ್ನು ಉಂಟುಮಾಡುತ್ತದೆ.
ನಿಮಗೆ ಎಲ್ಲಿಯಾದರೂ ಅವಮಾನವಾಗಿದ್ದರೆ ಅದನ್ನು ಇತರರಿಗೆ ಹೇಳಬೇಡಿ ಎಂದು ಚಾಣಕ್ಯ ನೀತಿ(Chanakya Niti) ಹೇಳುತ್ತಾನೆ. ನೀವು ಈ ವಿಷಯವನ್ನು ಇತರರೊಂದಿಗೆ ಹಂಚಿಕೊಂಡರೆ, ನೀವೇ ಸ್ವತಃ ಅವಮಾನವನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆಯೂ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಎದುರಿಗಿರುವವರನ್ನು ಓಲೈಸುವುದರಲ್ಲಿ ಎತ್ತಿದ ಕೈ ಈ 3 ರಾಶಿಯವರು
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.