Vastu Tips: ವ್ಯವಹಾರದಲ್ಲಿ ಪ್ರಗತಿ ಬಯಸಿದರೆ, ಈ 5 ವಿಶೇಷ ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳಿ

Business Vastu Tips: ವಾಸ್ತು ದೋಷಗಳು ವ್ಯಾಪಾರದ ಬೆಳವಣಿಗೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತವೆ. ವ್ಯಾಪಾರದ ವಾಸ್ತು ದೋಷಗಳನ್ನು ಹೋಗಲಾಡಿಸಲು ವಾಸ್ತು ಸಲಹೆಗಳು ಮುಖ್ಯ ಎಂದು ವಾಸ್ತು ತಜ್ಞರು ಹೇಳುತ್ತಾರೆ.

Written by - Yashaswini V | Last Updated : Nov 25, 2021, 11:33 AM IST
  • ವ್ಯಾಪಾರದ ಪ್ರಗತಿಗೆ ವಾಸ್ತು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ
  • ವ್ಯಾಪಾರಕ್ಕಾಗಿ ಹೊರಡುವ ಮೊದಲು, ಈ ಸಾಕುಪ್ರಾಣಿಗಳಿಗೆ ನಿಮ್ಮ ಕೈಗಳಿಂದ ಆಹಾರವನ್ನು ನೀಡಬೇಕು
  • ವ್ಯಾಪಾರ ಸ್ಥಳ ಅಥವಾ ಕಚೇರಿಯ ಪ್ರವೇಶದ್ವಾರದಲ್ಲಿ ಗೋಮತಿ ಚಕ್ರದ ಬಂಡಲ್ ಅನ್ನು ನೇತುಹಾಕಿ
Vastu Tips: ವ್ಯವಹಾರದಲ್ಲಿ ಪ್ರಗತಿ ಬಯಸಿದರೆ, ಈ 5 ವಿಶೇಷ ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳಿ title=
Vastu for business

Business Vastu Tips: ಪ್ರತಿಯೊಬ್ಬರೂ ವ್ಯವಹಾರದಲ್ಲಿ ಪ್ರಗತಿಯನ್ನು ಬಯಸುತ್ತಾರೆ. ಹಲವು ಬಾರಿ ಸಾಕಷ್ಟು ಪ್ರಯತ್ನ ಮಾಡಿದರೂ ವ್ಯಾಪಾರದಲ್ಲಿ ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ವ್ಯಾಪಾರದ ಪ್ರಗತಿಯಲ್ಲಿ ವಾಸ್ತು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ವಾಸ್ತು ದೋಷಗಳು ವ್ಯಾಪಾರದ ಬೆಳವಣಿಗೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ವ್ಯಾಪಾರದ ವಾಸ್ತು ದೋಷಗಳನ್ನು ಹೋಗಲಾಡಿಸಲು ವಾಸ್ತು ಸಲಹೆಗಳು ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ವ್ಯವಹಾರದಲ್ಲಿ ಪ್ರಗತಿಗಾಗಿ ಈ ಐದು ವಾಸ್ತು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯ.

ಅರಿಶಿನ ಮತ್ತು ಗೋಮತಿ ಚಕ್ರ:
ಶುಕ್ಲ ಪಕ್ಷದ ಗುರುವಾರದಂದು ಅರಿಶಿನ ಮತ್ತು ಗೋಮತಿ ಚಕ್ರದ (Gomati Chakra) ಮೇಲೆ ತಿಲಕವನ್ನು ಹಚ್ಚಿ ಹಳದಿ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ವ್ಯಾಪಾರ ಸ್ಥಳ ಅಥವಾ ಕಚೇರಿಯ ಪ್ರವೇಶದ್ವಾರದಲ್ಲಿ ಈ ಇದನ್ನು ಇರಿಸಿ. ನೀವು ಬಯಸಿದರೆ, ನೀವು ಅದನ್ನು ಕ್ಯಾಶ್ ಕೌಂಟರ್‌ನಲ್ಲಿಯೂ ಇರಿಸಬಹುದು. 

ಈ ಪ್ರಾಣಿಗಳಿಗೆ ಆಹಾರ ತಿನ್ನಿಸಿ:
ವ್ಯಾಪಾರಕ್ಕೆ (Business) ಹೊರಡುವ ಮೊದಲು, ಹಸು, ನಾಯಿ ಅಥವಾ ಕಾಗೆಗಳಿಗೆ ನಿಮ್ಮ ಕೈಗಳಿಂದ ಆಹಾರವನ್ನು ತಿನ್ನಿಸಬೇಕು. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು. ಅಲ್ಲದೆ, ವ್ಯವಹಾರದಲ್ಲಿ ಸಿಲುಕಿರುವ ಹಣವು ಶೀಘ್ರದಲ್ಲೇ ಹಿಂದಿರುಗುತ್ತದೆ. 

ಇದನ್ನೂ ಓದಿ- Vastu Shastra: ನಿಮ್ಮ ದೇವರ ಕೋಣೆಯಲ್ಲಿ ಎಷ್ಟು ಮೂರ್ತಿಗಳಿವೆ? ಈಗಲೇ ಪರಿಶೀಲಿಸಿ, ಇಲ್ದಿದ್ರೆ... !

ನಿಂಬೆ ಮತ್ತು ಹಸಿರು ಮೆಣಸಿನಕಾಯಿ:
ದುಷ್ಟ ಕಣ್ಣಿನಿಂದ ದೂರವಿರುವುದು ವ್ಯಾಪಾರ ಅಥವಾ ವ್ಯವಹಾರದಲ್ಲಿ ಪ್ರಗತಿಗೆ ವಿಶೇಷ ವಿಷಯವಾಗಿದೆ. ಇದಕ್ಕೆ ನಿಂಬೆ ಮತ್ತು ಹಸಿರು ಮೆಣಸಿನಕಾಯಿಯನ್ನು ಬಳಸಬೇಕು. ಒಂದು ನಿಂಬೆಹಣ್ಣು ಮತ್ತು ಏಳು ಹಸಿರು ಮೆಣಸಿನಕಾಯಿಗಳನ್ನು ತೆಗೆದುಕೊಂಡು ಹಾರವನ್ನು ಮಾಡಿ. ಅಂಗಡಿಯಲ್ಲಿ ಗ್ರಾಹಕರು ನೋಡಬಹುದಾದ ಅಂತಹ ಸ್ಥಳದಲ್ಲಿ ಕಟ್ಟಿ. ಇದರಿಂದ ವ್ಯವಹಾರಕ್ಕೆ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುತ್ತದೆ. 

ಕಚ್ಚಾ ನೂಲು ಬಳಕೆ :
ಹಸಿ ಹತ್ತಿಯನ್ನು ಕೇಸರಿ ದ್ರಾವಣದಲ್ಲಿ ನೆನೆಸಿಡಿ. ಇದರ ನಂತರ, ಅದನ್ನು ನಿಮ್ಮ ವ್ಯಾಪಾರ ಸ್ಥಳದಲ್ಲಿ ಯಾವುದಾದರೂ ಸ್ಥಳದಲ್ಲಿ ಕಟ್ಟಿಕೊಳ್ಳಿ ಅಥವಾ ಅದನ್ನು ಗಾಲ್ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ.   

ಇದನ್ನೂ ಓದಿ- Vastu Tips For Home: ಬಡತನದಿಂದ ಹೊರಬರಲು ನಿಮ್ಮ ಮನೆಯ ಸುತ್ತ ಈ ಗಿಡಗಳನ್ನು ತೆಗೆದುಹಾಕಿ

ಸರಿಯಾದ ಆಸನ ದಿಕ್ಕು
ವ್ಯಾಪಾರ ಸ್ಥಳದಲ್ಲಿ ಯಾವಾಗಲೂ ನೀವು ಈಶಾನ್ಯ ಮೂಲೆಯಲ್ಲಿ ಕುಳಿತುಕೊಳ್ಳಿ. ಹೀಗೆ ಕುಳಿತುಕೊಳ್ಳುವುದರಿಂದ ವ್ಯಾಪಾರ ಸ್ಥಳದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ಇದರಿಂದಾಗಿ ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News