Budh Margi: 2023 ಪ್ರಾರಂಭವಾದ ತಕ್ಷಣ ಈ ರಾಶಿಯ ಜನರು ಇದ್ದಕ್ಕಿದ್ದಂತೆ ಬಹಳ ಹಣ ಗಳಿಸುತ್ತಾರೆ!

Mercury Transit 2022: ಜನವರಿ 13ರಂದು ಬುಧ ಸಂಕ್ರಮಣವು ಕೆಲವು ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬುಧ ಗ್ರಹದ ನೇರ ಚಲನೆಯು ಈ ಜನರಿಗೆ ಧನಲಾಭ ಮತ್ತು ವೃತ್ತಿಯಲ್ಲಿ ಪ್ರಗತಿಯನ್ನು ತರುತ್ತದೆ.

Written by - Puttaraj K Alur | Last Updated : Nov 22, 2022, 08:18 PM IST
  • ಬುಧ ಗ್ರಹದ ನೇರ ಸಂಚಾರವು ವೃಶ್ಚಿಕ ರಾಶಿಯವರಿಗೆ ಶುಭ ಫಲಿತಾಂಶ ನೀಡಲಿದೆ
  • ಬುಧನು ಪಥದಲ್ಲಿರುವುದರಿಂದ ಕುಂಭ ರಾಶಿಯವರಿಗೆ ತ್ವರಿತ ಲಾಭ ದೊರೆಯಲಿದೆ
  • ಮೀನ ರಾಶಿಯವರಿಗೆ ವೃತ್ತಿ ಮತ್ತು ಹಣದ ವಿಷಯದಲ್ಲಿ ಬಹಳಷ್ಟು ಪ್ರಯೋಜನಗಳಿವೆ
Budh Margi: 2023 ಪ್ರಾರಂಭವಾದ ತಕ್ಷಣ ಈ ರಾಶಿಯ ಜನರು ಇದ್ದಕ್ಕಿದ್ದಂತೆ ಬಹಳ ಹಣ ಗಳಿಸುತ್ತಾರೆ! title=
ಬುಧ ಮಾರ್ಗಿ 2023

ನವದೆಹಲಿ: ಜ್ಯೋತಿಷ್ಯದ ಪ್ರಕಾರ ಬುಧ ಗ್ರಹವು ಡಿಸೆಂಬರ್ 2022ರಲ್ಲಿ 2 ಬಾರಿ ಸಂಚರಿಸಲಿದೆ ಇದರ ನಂತರ ಬುಧವು 2023ರ ಆರಂಭದಲ್ಲಿಯೇ ಹಿಮ್ಮೆಟ್ಟಲಿದೆ. ಜನವರಿ 13ರಂದು ಬುಧ ಸಂಕ್ರಮಣವು ಕೆಲವು ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬುಧ ಗ್ರಹದ ನೇರ ಚಲನೆಯು ಈ ಜನರಿಗೆ ಧನಲಾಭ ಮತ್ತು ವೃತ್ತಿಯಲ್ಲಿ ಪ್ರಗತಿಯನ್ನು ತರುತ್ತದೆ. ವ್ಯಾಪಾರದಲ್ಲಿ ಭರ್ಜರಿ ಲಾಭ ಸಿಗಲಿದೆ. ಇದರೊಂದಿಗೆ ನಿಮ್ಮ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ. ಬುಧನು ಬಲಭಾಗದಲ್ಲಿರುವುದರಿಂದ ಯಾವ ರಾಶಿಯವರಿಗೆ ಗರಿಷ್ಠ ಲಾಭ ಸಿಗುತ್ತದೆ ಎಂದು ತಿಳಿಯಿರಿ.

ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನ

ವೃಶ್ಚಿಕ ರಾಶಿ: ಬುಧ ಗ್ರಹದ ನೇರ ಸಂಚಾರವು ವೃಶ್ಚಿಕ ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡಲಿದೆ. ಇವರಿಗೆ ಹಣ ಗಳಿಸುವಂತೆ ಮಾಡುತ್ತದೆ. ವ್ಯವಹಾರದಲ್ಲಿ ದೊಡ್ಡ ಲಾಭವು ಸಿಗಲಿದೆ. ನೀಮಗೆ ಅನೇಕ ಶುಭ ಸುದ್ದಿಗಳು ಸಹ ಸಿಗಲಿವೆ. ಹಠಾತ್ ಧನಲಾಭವಿರುತ್ತದೆ. ಬೇರೆಡೆ ಸಿಲುಕಿರುವ ನಿಮ್ಮ ಹಣವನ್ನು ಮರಳಿ ಪಡೆಯುತ್ತೀರಿ. ಮಾತಿನ ಶಕ್ತಿಯ ಮೇಲೆ ಪ್ರಯೋಜನಗಳನ್ನು ಪಡೆಯುತ್ತೀರಿ. ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: Chanakya Niti: ಮಹಿಳೆಯರು ಈ ಕಾರಣಗಳಿಂದ ತಮ್ಮ ಜೀವನದಲ್ಲಿ ಅತಿಯಾದ ನಷ್ಟ ಅನುಭವಿಸುತ್ತಾರೆ

ಕುಂಭ ರಾಶಿ: ಬುಧನು ಪಥದಲ್ಲಿರುವುದರಿಂದ ಕುಂಭ ರಾಶಿಯವರಿಗೆ ತ್ವರಿತ ಲಾಭ ದೊರೆಯಲಿದೆ. ಇವರ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಆದಾಯದಲ್ಲಿನ ಹೆಚ್ಚಳವು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಹಣ ಪಡೆಯಲು ಹೊಸ ಮಾರ್ಗಗಳು ಕಂಡುಬರುತ್ತವೆ. ವೃತ್ತಿ ಜೀವನದಲ್ಲಿ ದೊಡ್ಡ ಅವಕಾಶ ಸಿಗಬಹುದು. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಹೂಡಿಕೆಯಿಂದ ಲಾಭವಾಗಲಿದೆ. ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು.

ಮೀನ ರಾಶಿ: ಬುಧಗ್ರಹದ ಚಲನೆಯಲ್ಲಿನ ಬದಲಾವಣೆಗಳು ಮೀನ ರಾಶಿಯವರಿಗೆ ವೃತ್ತಿ ಮತ್ತು ಹಣದ ವಿಷಯದಲ್ಲಿ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತವೆ. ವೃತ್ತಿಯಲ್ಲಿ ಬಡ್ತಿ ಪಡೆಯುವ ಅಥವಾ ದೊಡ್ಡ ಸಾಧನೆಗಳನ್ನು ಮಾಡುವ ಸಾಧ್ಯತೆಗಳಿವೆ. ಇಲ್ಲಿಯವರೆಗೆ ಕುಂಠಿತವಾಗಿದ್ದ ಉದ್ಯೋಗಸ್ಥರ ಪ್ರಗತಿ ಈಗ ಸಾಕಾರಗೊಳ್ಳಲಿದೆ. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ವ್ಯಾಪಾರ ಮಾಡುವವರಿಗೂ ದೊಡ್ಡ ಲಾಭ ಸಿಗುತ್ತದೆ. ಲಾಭವೂ ಹೆಚ್ಚಾಗಲಿದೆ. ಆತ್ಮೀಯರ ಸಹಕಾರದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ.

ಇದನ್ನೂ ಓದಿ: Health Tips: ಪ್ರತಿದಿನ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲೇಬೇಡಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News