ನವದೆಹಲಿ: ವಾಸ್ತು ಶಾಸ್ತ್ರ(Vastu shastra)ದ ಪ್ರಕಾರ ಮನೆ ಅಥವಾ ಕಚೇರಿಯಲ್ಲಿ ಸಸಿಗಳನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ ಮರಗಳು ಮತ್ತು ಸಸ್ಯಗಳಿಂದ ಹೊರಹೊಮ್ಮುವ ಸಕಾರಾತ್ಮಕ ಶಕ್ತಿಯು ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆ ಅಥವಾ ಕಚೇರಿಯಲ್ಲಿ ಮರಗಳು ಮತ್ತು ಗಿಡಗಳನ್ನು ನೆಡುವುದು ಅದೃಷ್ಟವನ್ನು ತರುತ್ತದೆ ಎಂದು ವಾಸ್ತುಶಾಸ್ತ್ರ ತಜ್ಞರು ನಂಬುತ್ತಾರೆ. ಇದರೊಂದಿಗೆ ಧನಾತ್ಮಕ ಶಕ್ತಿಯ ಪರಿಣಾಮವು ಜೀವನದಲ್ಲಿ ಹೆಚ್ಚಾಗುತ್ತದೆ.
ಬಿದಿರಿನ ಸಸ್ಯ(Bamboo Vastu Tips)ವನ್ನು ಪವಾಡವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಬಿದಿರಿನ ಸಸ್ಯವು ಅದೃಷ್ಟವನ್ನು ಬೆಳಗಿಸಲು ವಿಶೇಷವೆಂದು ಪರಿಗಣಿಸಲಾಗಿದೆ. ಆದರೆ ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಬಿದಿರಿನ ಸಸ್ಯವನ್ನು ಇರಿಸದಿದ್ದರೆ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಬಿದಿರಿಗೆ ಸಂಬಂಧಿಸಿದ ವಿಶೇಷ ವಾಸ್ತು ಸಲಹೆಗಳನ್ನು ತಿಳಿದುಕೊಳ್ಳಿರಿ.
ಇದನ್ನೂ ಓದಿ: ಮಹಿಳೆಯರು ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ, ಸಂಸಾರ ಜೀವನ ಹಾಳಾಗುವುದಕ್ಕೆ ಇದೂ ಕಾರಣವಾಗಬಹುದು
ಬಿದಿರಿನ ಗಿಡ ನೆಡುವಾಗ ಈ ವಿಷಯಗಳ ಬಗ್ಗೆ ನೆನಪಿಡಿ
- ವಾಸ್ತುಶಾಸ್ತ್ರದ ಪ್ರಕಾರ ನೀವು ಮನೆಯಲ್ಲಿ ಬಿದಿರಿನ ಗಿಡ(Bamboo Plant Benefits)ವನ್ನು ನೆಟ್ಟರೆ, ಅದನ್ನು ಕಿಟಕಿಯ ಬಳಿ ಅಥವಾ ಸೂರ್ಯನ ಬೆಳಕು ಬರುವ ಸ್ಥಳದಲ್ಲಿ ಇಡಬೇಡಿ. ಏಕೆಂದರೆ ಈ ಸಸ್ಯವು ಹಾಳಾಗುತ್ತದೆ. ಸೂರ್ಯನು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತಾನೆ. ಹೀಗಾಗಿ ಸೂಕ್ತ ಸ್ಥಳದಲ್ಲಿ ಬಿದಿರಿನ ಸಸ್ಯವನ್ನು ಇಡಬೇಕು.
- ಬಿದಿರಿನ ಸಸ್ಯವನ್ನು ನೆಡಲು ಉತ್ತಮ ದಿಕ್ಕು ಪೂರ್ವ. ಈ ದಿಕ್ಕಿನಲ್ಲಿ ಬಿದಿರಿನ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಇದರೊಂದಿಗೆ ಮನೆಯ ಜನರ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ.
- ವಾಸ್ತು ಶಾಸ್ತ್ರದ ಪ್ರಕಾರ 2-3 ಅಡಿ ಎತ್ತರಕ್ಕೆ ಬೆಳೆಯುವ ಬಿದಿರು ಗಿಡಗಳು(Bamboo Tree) ಶುಭ. ಕಚೇರಿಯಲ್ಲಿ ಬಿದಿರಿನ ಗಿಡ ನೆಡುವುದರಿಂದ ಪರಿಸರ ಶುದ್ಧವಾಗಿರುತ್ತದೆ. ಅಲ್ಲದೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದಲ್ಲದೇ ಕಚೇರಿಯಲ್ಲಿ ನೆಟ್ಟಿರುವ ಬಿದಿರು ಗಿಡದ ನೀರನ್ನು ವಾರಕ್ಕೊಮ್ಮೆ ಬದಲಾಯಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ.
- ಬಿದಿರಿನ ಗಿಡ(Bamboo Plant)ವನ್ನು ನೆಡುವುದರಿಂದ ರೋಗಗಳು ದೂರವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ. ಅಲ್ಲದೆ ಬಿದಿರಿನ ಗಿಡವನ್ನು ಮಲಗುವ ಕೋಣೆಯಲ್ಲಿಯೂ ಇಡಬಹುದು. ಇದು ದಾಂಪತ್ಯ ಜೀವನದಲ್ಲಿ ಮಧುರತೆಯನ್ನು ತರುತ್ತದೆ.
- ಗಾಜಿನ ಪಾತ್ರೆ ಅಥವಾ ಬಟ್ಟಲಿನಲ್ಲಿ ನೀರು ಸುರಿದು ಬಿದಿರಿನ ಗಿಡವನ್ನು ಕೆಂಪು ರಿಬ್ಬನ್‌ನಿಂದ ಕಟ್ಟಿ ಇಡಬೇಕು. ವೃತ್ತಿಯಲ್ಲಿ ಯಶಸ್ಸನ್ನು ಪಡೆಯಲು ಅಧ್ಯಯನ ಕೊಠಡಿಯಲ್ಲಿ 4 ಬಿದಿರಿನ ಗಿಡಗಳನ್ನು ನೆಡುವುದು ಉತ್ತಮ.
ಇದನ್ನೂ ಓದಿ: ಹೋಳಿ ದಿನ ರೂಪುಗೊಳ್ಳುತ್ತಿದೆ ಮೂರು ರೀತಿಯ ರಾಜಯೋಗ, ಯಾರ ಮೇಲೆ ಏನು ಪರಿಣಾಮ ?
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee News Kannada ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.