Akshay Tritiya 2022 Shubh Muhurat - ಜೋತಿಶ್ಯಾಚಾರ್ಯರ ಪ್ರಕಾರ ಅಕ್ಷಯ ತೃತಿಯಾವನ್ನು ಸಾಯಂ ಸಿದ್ಧ ಮುಹೂರ್ತ ಎಂದು ಭಾವಿಸಲಾಗುತ್ತದೆ. ಈ ದಿನ ಯಾವುದೇ ಕೆಲಸವನ್ನು ಮಾಡಲು ಪಂಚಾಗವನ್ನು ನೋಡುವ ಅವಶ್ಯಕತೆ ಇಲ್ಲ. ಅಕ್ಷಯ ತೃತಿಯಾ ದಿನ ಮಾಡಲಾದ ಕೆಲಸ ಅಕ್ಷಯವಾಗುತ್ತದೆ ಅದು ಎಂದಿಗೂ ಕೂಡ ನಾಶವಾಗುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆ. ಈ ಬಾರಿಯ ಅಕ್ಷಯ ತೃತಿಯಾ ರೋಹಿಣಿ ನಕ್ಷತ್ರ, ಶೋಭನ ಯೋಗ ಹಾಗೂ ವೃಷಭ ರಾಶಿಯ ಚಂದ್ರಮಾ ಜೊತೆಗೆ ಬರಲಿದೆ ಎನ್ನಲಾಗಿದೆ. ಈ ಬಾರಿ ಮಂಗಳವಾರ ಹಾಗೂ ರೋಹಿಣಿ ನಕ್ಷತ್ರ ಒಟ್ಟಿಗೆ ಬಂದಿರುವುದರಿಂದ ಮಂಗಳ ರೋಹಿಣಿ ಯೋಗ ನಿರ್ಮಾಣಗೊಳ್ಳುತ್ತಿದೆ. ಶೋಭನ ಯೋಗದ ಕಾರಣ ಈ ದಿನದ ಮಹತ್ವ ಇನ್ನೂ ಹೆಚ್ಚಾಗಲಿದೆ. ಇದಲ್ಲದೆ ಐದು ದಶಕಗಳ ಬಳಿಕ ಗ್ರಹಗಳ ವಿಶೇಷ ಯೋಗ ನಿರ್ಮಾಣಗೊಳ್ಳುತ್ತಿದೆ.
ಈ ಬಾರಿ ತುಂಬಾ ವಿಶೇಷವಾಗಿರಲಿದೆ
ಅಕ್ಷಯ ತೃತಿಯಾ ದಿನ ಧನ-ಸಮೃದ್ಧಿಯ ಕಾರಕ ಗ್ರಹ ಶುಕ್ರ ಹಾಗೂ ಕಾರ್ಯಸಿದ್ಧಿಯ ಗ್ರಹ ಚಂದ್ರ ಇಬ್ಬರೂ ಕೂಡಾ ತನ್ನ ಉಚ್ಚರಾಶಿಯಲ್ಲಿ ಇರಲಿದ್ದು, ಇದು ಅತ್ಯಂತ ಶುಭ ಹಾಗೂ ಅಪರೂಪದ ಯೋಗವಾಗಿದೆ. ಈ ದಿನ ಚಿನ್ನ, ಚಿನ್ನಾಭರಣ, ವಾಹನ ಅಥವಾ ಯಾವುದೇ ಹೊಸ ವಸ್ತುವನ್ನು ಖರೀದಿಸುವುದು ಜೀವನದಲ್ಲಿ ಧನ-ಸಮೃದ್ಧಿ ಹೆಚ್ಚಿಸಲಿದೆ.
ಇದನ್ನೂ ಓದಿ-Chanakya Niti: ಈ ಮೂರು ಸಂಗತಿಗಳಿಂದ ಆದಷ್ಟು ದೂರವಿರಿ, ಜೀವನವೇ ಹಾಳು ಮಾಡುತ್ತವೆ
ಅಕ್ಷಯ ತೃತೀಯಾ ಶುಭ ಮುಹೂರ್ತ
ಅಕ್ಷಯ ತೃತಿಯಾ ತಿಥಿ ಆರಂಭ - ಮೇ 3 ರಂದು ಬೆಳಗ್ಗೆ 5:30ಕ್ಕೆ.
ತಿಥಿ ಸಮಾಪ್ತಿ - ಮೇ 4 ರಂದು ಬೆಳಗ್ಗೆ 7.32ರವರೆಗೆ.
ರೋಹಿಣಿ ನಕ್ಷತ್ರ-ಮೇ 3 ರಂದು 12.34ಕ್ಕೆ ಆರಂಭಗೊಂದು ಮೇ 4ರ ಬೆಳಗ್ಗೆ 3.18ರವರೆಗೆ ಇರಲಿದೆ.
ಇದನ್ನೂ ಓದಿ- Name Astrology: ಈ ಅಕ್ಷರದಿಂದ ಆರಂಭವಾಗುವ ಹೆಸರಿನ ಪುತ್ರಿ ತಂದೆಯ ಪಾಲಿಗೆ ಲಕ್ಕಿ ಸಾಬೀತಾಗುತ್ತಾಳೆ
ಪೂಜೆಗಾಗಿ ಶ್ರೇಷ್ಠ ಕಾಲ - ಬೆಳಗ್ಗೆ 6.18 ರಿಂದ 8.14ರ ನಡುವಿನ ಸ್ಥಿರ ಲಗ್ನ (ವೃಶ್) ಶ್ರೇಷ್ಠ ಮುಹೂರ್ತ ಆಗಿರಲಿದ್ದು, ಅಕ್ಷಯ ತೃತಿಯಾ ಪೂಜೆಗೆ ಇದು ವಿಶೇಷವಾಗಿರಲಿದೆ. ಇದಲ್ಲದೆ ಬಳಗ್ಗೆ 9 ಗಂಟೆಗೂ ಕೂಡ ಶುಭ ಮೂಹುರ್ತ ಆರಂಭಗೊಳ್ಳುತ್ತಿದ್ದು, ಇದು ಮಧ್ಯಾಹ್ನದವರೆಗೆ ಇರಲಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.