ಇಂದು ಚಳಿಗಾಲದ ಅಧಿವೇಶನ....ಏನೆಲ್ಲಾ ಚರ್ಚೆ ಆಗುತ್ತೆ ಗೊತ್ತಾ..?

Session: ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣಸೌಧದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.ಈ ಅಧಿವೇಶನದ ಸ್ಪೀಕರ್‌ ಯು ಟಿ ಖಾದರ್‌ ರವರು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದ್ದಾರೆ.  

Written by - Zee Kannada News Desk | Last Updated : Dec 9, 2024, 11:47 AM IST
  • ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣಸೌಧದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.
  • ಈ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್‌ ಭಾಗವಹಿಸಲಿದ್ದಾರೆ.
  • ಮಕ್ಕಳಿಗೆ ವಿಶೇಷವಾಗಿ ಸೈನ್ಸ್‌ ಎಕ್ಸಿಬೀಷನ್‌ , ಗಾಂಧಿಯವರ ಎಕ್ಸಿಬೀಷನ್‌ ಮಾಡಲಾಗುವುದು ಎಂದಿದ್ದಾರೆ.
ಇಂದು ಚಳಿಗಾಲದ ಅಧಿವೇಶನ....ಏನೆಲ್ಲಾ ಚರ್ಚೆ ಆಗುತ್ತೆ ಗೊತ್ತಾ..? title=

Session: ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣಸೌಧದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.ಈ ಅಧಿವೇಶನದ ಸ್ಪೀಕರ್‌ ಯು ಟಿ ಖಾದರ್‌ ರವರು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದ್ದಾರೆ.

ಮೊದಲಿಗೆ ಅನುಭವ ಮಂಟಪದ ಭಾವಚಿತ್ರವು ಅನಾವರಣಗೊಂಡು ತದನಂತರ ಈ ಅಧಿವೇಶನವು ಬೆಳಿಗ್ಗೆ ೧೧ ಗಂಟೆಗೆ ಪ್ರಾರಂಭವಾಗಲಿದೆ.  ಈ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್‌ ಭಾಗವಹಿಸಲಿದ್ದಾರೆ, ಮತ್ತು ಹೊಸದಾಗಿ ಆಯ್ಕೆಯಾದ ಮೂವರು ಶಾಸಕರು ಪ್ರಮಾಣವಚನ ಮಾಡಲಿದ್ದಾರೆ.

ಪ್ರಶ್ನೋತ್ತರ ಕಲಾಪವು ಬೆಳಿಗ್ಗೆ ನಡೆಯಲಿದ್ದು,ಮಧ್ಯಾಹ್ನದ ಬಳಿಕ ಬಿ ಎಸ್‌ ಸಿ ಸಭೆಯಲ್ಲಿ ಕಾರ್ಯ ಕಲಾಪಗಳ ಚರ್ಚೆ ನಡೆಯಲಿದೆ. ಹಾಗೆಯೆ ಸರ್ಕಾರದಿಂದಾ ಐದು ವಿಧೇಯಕಗಳು ಪ್ರಸ್ತಾಪ ಆಗಲಿದ್ದು ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ,ಸರಕು ಸಾಗಾಣಿಕೆ ತಿದ್ದುಪಡಿ ಕಾಯ್ದೆ,ಶಾಸಕರು ಮೂರು ಕಾಸಗಿ ಬಿಲ್‌ ಗಳನ್ನು ಸಹ ಮಂಡನೆ ಆಗಲಿವೆ.ಅದೇ ರೀತಿಯಾಗಿ ಸಭಾಧ್ಯಕ್ಷರ ಪೀಠವನ್ನು ಸಹ ನಿರ್ಮಾಣವಾಗಲಿದೆ.

ಈ ಅಧಿವೇಶನಕ್ಕೆ ೮ ಸಾವಿರ ಬೆಳಗಾವಿ ಜನರು ಅಧಿವೇಶನಕ್ಕೆ ಬರುತ್ತಿದ್ದು,ಅವರಿಗೆ ಊಟ,ವಸತಿಯ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಹಾಗು ಸಂಪೂರ್ಣ ಭದ್ರತೆಗಾಗಿ ೬ಸಾವಿರ ಪೋಲಿಸ್‌ ಸಿಬ್ಬಂದಿಯ ಯೋಜನೆಯನ್ನು ಸಹ  ಮಾಡಲಾಗಿದೆ ಎಂದಿದ್ದಾರೆ.

ಅಧಿವೇಶನ ಸಂದರ್ಭದಲ್ಲಿ ಒಂದು ವೇಳೆ ಪ್ರತಿಭಟನೆ ಗಲಾಟೆಗಳು ಸಂಭವಿಸದ್ದಲ್ಲಿ ಪ್ರತ್ಯೇಕ ಟೆಂಟ್‌ ನಿರ್ಮಾಣವನ್ನಾ ಮಾಡಲಾಗಿದೆ. ಮಕ್ಕಳಿಗೆ ವಿಶೇಷವಾಗಿ ಸೈನ್ಸ್‌ ಎಕ್ಸಿಬೀಷನ್‌ , ಗಾಂಧಿಯವರ ಎಕ್ಸಿಬೀಷನ್‌ ಮಾಡಲಾಗುವುದು ಎಂದಿದ್ದಾರೆ.

ಅದೇರೀತಿಯಾಗಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ನಡೆಯಬೇಕೆಂದು ತಿಳಿಸಿದ್ದಾರೆ. ಹಾಗೆಯೆ ಶೀಘ್ರದಲ್ಲೆ ಶಾಸಕರ ಭವನದ ನಿರ್ಮಾಣದ ಬಗ್ಗೆ ಚರ್ಚೆ ನಡೆಯಬೇಕು ಇನ್ನು ಹೆಚ್ಚಿನ ದಿನಗಳಕಾಲ ಸುವರ್ಣಸೌಧದಲ್ಲಿ ಅಧಿವೇಶನಕ್ಕೆ ಅವಕಾಶ ಇದೆ ,  ಎಂದು ಈ ಕುರಿತು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡ್ತೀವಿ ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News