ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಪಾರ್ಥಿವ ಶರೀರ ನಾಳೆ ರಾಜ್ಯಕ್ಕೆ: ಸಿಎಂ ಕುಮಾರಸ್ವಾಮಿ

ಬುಧವಾರ ಬೆಳಗಿನ ಜಾವ ಐದೂ ಪಾರ್ಥಿವ ಶರೀರವನ್ನೂ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಲಂಕಾ ವಿಮಾನದಲ್ಲಿ ಆಗಮಿಸಲಿವೆ ಎಂದು ಸಿಎಂ ಹೇಳಿದ್ದಾರೆ.

Last Updated : Apr 23, 2019, 08:56 PM IST
ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಪಾರ್ಥಿವ ಶರೀರ ನಾಳೆ ರಾಜ್ಯಕ್ಕೆ: ಸಿಎಂ ಕುಮಾರಸ್ವಾಮಿ title=

ಬೆಂಗಳೂರು: ಶ್ರೀಲಂಕಾದಲ್ಲಿ ಭಾನುವಾರ ಉಗ್ರರು ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಕನ್ನಡಿಗರ ಪಾರ್ಥಿವ ಶರೀರವನ್ನು ನಾಳೆ ರಾಜ್ಯಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶ್ರೀಲಂಕಾ ಸಚಿವಾಲಯದ ಜತೆ ನಿರಂತರ ಸಂಪರ್ಕದಲ್ಲಿದ್ದು ಮುಖ್ಯ ಕಾರ್ಯದರ್ಶಿಗೂ ಸೂಚನೆ ನೀಡಲಾಗಿದೆ. ಏಳು ಪಾರ್ಥಿವ ಶರೀರಗಳನ್ನು ಗುರುತಿಸಿದ್ದು ಮರಣೋತ್ತರ ಪ್ರಕ್ರಿಯೆ ಶೀಘ್ರ ಮುಗಿಸಲು ಮನವಿ ಮಾಡಲಾಗಿದೆ. ಬುಧವಾರ ಬೆಳಗಿನ ಜಾವ ಐದೂ ಪಾರ್ಥಿವ ಶರೀರವನ್ನೂ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಲಂಕಾ ವಿಮಾನದಲ್ಲಿ ಆಗಮಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಭಾನುವಾರ ನಡೆದ ಭೀಕರ ಬಾಂಬ್​ ಸ್ಫೋಟದಲ್ಲಿ 9 ಮಂದಿ ಕನ್ನಡಿಗರು ಮೃತಪಟ್ಟಿದ್ದಾರೆ. ಇವರಲ್ಲಿ ಜೆಡಿಎಸ್ ಮುಖಂಡರಾದ ಲಕ್ಷ್ಮಣ ಗೌಡ ರಮೇಶ್, ಕೆ.ಎಂ. ಲಕ್ಷ್ಮೀನಾರಾಯಣ, ಎಂ. ರಂಗಪ್ಪ ಹಾಗೂ ಕೆ.ಜಿ. ಹನುಮಂತರಾಯಪ್ಪ ಮೃತಪಟ್ಟಿದ್ದಾರೆ. ಈ ಭೀಕರ ಸ್ಫೋಟದಲ್ಲಿ ಒಟ್ಟಾರೆ 290ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
 

Trending News