ಬೆಂಗಳೂರು: ದೆಹಲಿಯಲ್ಲಿ 3 ದಿನ ಇದ್ದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಲು ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೆ ಅವಕಾಶವೇ ಸಿಕ್ಕಿಲ್ಲ. ಇದೇ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.
‘ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾಗದೆ ಅವಮಾನಿಸಿ ಕಳಿಸಿದ್ದ ಬಿಜೆಪಿ ಹೈಕಮಾಂಡ್ ಈಗ ಡಿ.ವಿ.ಸದಾನಂದಗೌಡರ ಮುಖವನ್ನೂ ನೋಡದೆ ವಾಪಾಸ್ ಕಳಿಸಿದೆ. ನಾಯಕರು ಎಚ್.ಡಿ.ಕುಮಾರಸ್ವಾಮಿಯವರನ್ನು ಕರೆದುಕೊಂಡು ಹೋಗಿದ್ದರೆ ಕನಿಷ್ಠ ದೆಹಲಿ ನಾಯಕರ ಮುಖವನ್ನಾದರೂ ನೋಡುವ ಸೌಭಾಗ್ಯ ಸಿಗುತ್ತಿತ್ತೇನೋ!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
‘ಕುಮಾರಸ್ವಾಮಿಯವರಿಗೆ ಸುಲಭದಲ್ಲಿ ಸಿಗುವ ಹೈಕಮಾಂಡ್ ಬಿಜೆಪಿ ನಾಯಕರಿಗೆ ಸಿಗದಿರುವುದೇಕೆ ? ಕರ್ನಾಟಕದಲ್ಲಿ ಸಾಂವಿಧಾನಿಕ ಹುದ್ದೆಯಾದ ವಿಪಕ್ಷ ನಾಯಕನ ಸ್ಥಾನ ಹಲವು ತಿಂಗಳುಗಳಿಂದ ಖಾಲಿಯಿರುವುದು ಬಿಜೆಪಿಗೆ ಗಂಭೀರ ವಿಷಯವಲ್ಲವೇ? ಯಡಿಯೂರಪ್ಪನವರು ಹಾಗೂ ಸದಾನಂದಗೌಡರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು ಇಂತಹವರನ್ನೇ ಅವಮಾನಿಸುತ್ತಿರುವುದರಿಂದ ಬಿಜೆಪಿಗರ ಸ್ವಾಭಿಮಾನಕ್ಕೆ ದಕ್ಕೆಯಾದಂತೆ ಅಲ್ಲವೇ? ಇಂತಹ ಅವಮಾನ, ತಿರಸ್ಕಾರಗಳಿಗೆ ಒಳಪಟ್ಟರೂ ಸಹಿಸಿಕೊಳ್ಳುತ್ತಿರುವುದು ಗುಲಾಮಗಿರಿಯ ಸಂಕೇತವಲ್ಲವೇ ಬಿಜೆಪಿ?’ ಎಂದು ಕಾಂಗ್ರೆಸ್ ಕುಟುಕಿದೆ.
ಯಡಿಯೂರಪ್ಪನವರನ್ನು ಭೇಟಿಯಾಗದೆ ಅವಮಾನಿಸಿ ಕಳಿಸಿದ್ದ ಬಿಜೆಪಿ ಹೈಕಮಾಂಡ್ ಈಗ ಸದಾನಂದಗೌಡರ ಮುಖವನ್ನೂ ನೋಡದೆ ವಾಪಾಸ್ ಕಳಿಸಿದೆ.
ನಾಯಕರು ಕುಮಾರಸ್ವಾಮಿಯವರನ್ನು ಕರೆದುಕೊಂಡು ಹೋಗಿದ್ದರೆ ಕನಿಷ್ಠ ದೆಹಲಿ ನಾಯಕರ ಮುಖವನ್ನಾದರೂ ನೋಡುವ ಸೌಭಾಗ್ಯ ಸಿಗುತ್ತಿತ್ತೇನೋ!
ಕುಮಾರಸ್ವಮಿಯವರಿಗೆ ಸುಲಭದಲ್ಲಿ ಸಿಗುವ ಹೈಕಮಾಂಡ್ ಬಿಜೆಪಿ ನಾಯಕರಿಗೆ…
— Karnataka Congress (@INCKarnataka) October 27, 2023
ಇದನ್ನೂ ಓದಿ: ನನ್ನ ಸಹೋದರನ ಬಳಿ ಇನ್ನೊಂದು ಪ್ಲಾಸ್ಟಿಕ್ ಉಗುರು ಇದೆ
ಆರಗ ಜ್ಞಾನೇಂದ್ರರ ಬ್ರಾಂಡ್ ಯಾವುದು..?
ಹುಲಿ ಉಗುರು ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ತಿರುಗೇಟು ನೀಡಿರುವ ಕಾಂಗ್ರೆಸ್, ‘ನಿಮ್ಮ ಬ್ರಾಂಡ್ ಯಾವುದು?’ ಎಂದು ಪ್ರಶ್ನಿಸಿದೆ. ನಿಮಗೆ ಚೆನ್ನಾಗಿಯೇ ಕಿಕ್ ಹೊಡೆದಂತಿದೆ?! ಕಾಯ್ದೆ ಕಾನೂನುಗಳ ಕನಿಷ್ಠ ಜ್ಞಾನ ಇಲ್ಲದೆ ತೀರ ಬಾಲಿಶವಾಗಿ ಮಾತನಾಡುತ್ತಿರುವ ತಾವು 4 ವರ್ಷ ರಾಜ್ಯದ ಗೃಹಸಚಿವರಾಗಿದ್ದು ಘೋರ ದುರಂತ!’ವೆಂದು ಟೀಕಿಸಿದೆ.
‘ವನ್ಯಜೀವಿಗಳ ಉತ್ಪನ್ನಗಳ ಬಳಕೆ ಹಾಗೂ ಸಂಗ್ರಹ ವನ್ಯಜೀವಿಗಳ ಹತ್ಯೆಗೆ ಪ್ರೋತ್ಸಾಹಿಸುವ ಸಾಧ್ಯತೆ ಇರುವುದರಿಂದ ಜಾಗೃತಿ ಮೂಡಿಸುವ ಹಾಗೂ ಕಾನೂನು ಪಾಲಿಸುವ ಸಲುವಾಗಿ ಪ್ರಕರಣ ದಾಖಲಿಸಲಾಗುತ್ತಿದೆ. ಸರ್ಕಾರದ ಕಾನೂನು ಪಾಲನೆಯನ್ನು ಪ್ರೋತ್ಸಾಹಿಸಬೇಕೆ ಹೊರತು ಕೊಂಕು ತೆಗೆಯುವುದಲ್ಲ, ಹುಲಿ ಕೊಲ್ಲುವ ಟಿಪ್ಪು ಫೋಟೋ ನೋಡಿ ಜನರೂ ಹುಲಿ ಕೊಲ್ಲಲು ಹೋಗುತ್ತಾರೆ ಎನ್ನುವುದು ಮೂರ್ಖತನದ ಪರಮಾವಧಿ. ಜ್ಞಾನೇಂದ್ರರವರೇ, ಹೊಯ್ಸಳರ ಲಾಂಛನವೂ ಹುಲಿ ಕೊಲ್ಲುವುದೇ ಆಗಿದೆ… ಅದನ್ನೂ ತೆಗೆಯಬೇಕು ಎನ್ನುತ್ತೀರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ವರ್ತೂರು ಸಂತೋಷ್ ಗೆ ಬಿಗ್ ರಿಲೀಫ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.