ಬೆಂಗಳೂರು: ಬೆಳಗಾವಿಯಲ್ಲಿ ಬಿಜೆಪಿ ಸೋಲು(Karnataka MLC Election) ಕಂಡಿರುವ ವಿಚಾರವಾಗಿ ಬಿಜೆಪಿಗೆ ಧಮ್ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದೆ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿ ಕಿಡಿಕಾರಿರುವ ಬಿಜೆಪಿ, ‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಾಗ ನಿಮ್ಮ ಧಮ್ ಎಲ್ಲಿತ್ತು’ ಎಂದು ಪ್ರಶ್ನಿಸಿದೆ.
‘ತಮ್ಮನ್ನು ಯಾರಾದರೂ ಟೀಕಿಸಿದಾಗ ಮಾತ್ರ ಸಿದ್ದರಾಮಯ್ಯನವರಿಗೆ ಸಂಸದೀಯ ನಡವಳಿಕೆ, ಸಂಸದೀಯ ಮಾತಿನ ನೆನಪಾಗುತ್ತದೆ. ಆದರೆ ತಾವು ಮಾತ್ರ ಸದಾ ಅಸಂಸದೀಯ ವರ್ತನೆ, ಅಸಂಸದೀಯ ಮಾತುಗಳನ್ನೇ ಆಯ್ದುಕೊಳ್ಳುತ್ತಾರೆ. ಸಿದ್ದರಾಮಯ್ಯನವರೇ ಬಿಜೆಪಿ(BJP)ಯವರಿಗೆ ಧಮ್ ಇಲ್ಲ ಅದಕ್ಕೆ ಸೋತಿದ್ದಾರೆ ಎಂಬ ಮಾತನ್ನು ತಮಗೂ ಅನ್ವಯಿಸಬಹುದಲ್ಲವೇ?’ ಅಂತಾ #ಬುರುಡೆರಾಮಯ್ಯ(Siddaramaiah) ಹ್ಯಾಶ್ ಟ್ಯಾಗ್ ಬಳಿಸಿ ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಡಿಕೆಶಿಗೆ ಕಠೋರ ಉತ್ತರ ನೀಡುತ್ತೇನೆ, ಸಿದ್ದರಾಮಯ್ಯ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ
ಮಾನ್ಯ @siddaramaiah ಅವರೇ,
ನೀವು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿರಿ. ಬಾದಾಮಿಯಲ್ಲಿ ಅಲ್ಪ ಮತದಿಂದ ಗೆದ್ದಿದ್ದಿರಿ. ನಿಮ್ಮ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಸೋತು ಶರಣಾಯಿತು.
ಆಗ ನಿಮಗೆ "ಧಮ್" ಎಂಬ ಶಬ್ದ ನೆನಪಿಗೆ ಬರಲಿಲ್ಲವೇ?#ಬುರುಡೆರಾಮಯ್ಯ
— BJP Karnataka (@BJP4Karnataka) December 15, 2021
‘ಮಾನ್ಯ ಸಿದ್ದರಾಮಯ್ಯ ಅವರೇ ನೀವು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ(Chamundeshwari Constituency)ದಲ್ಲಿ ಹೀನಾಯವಾಗಿ ಸೋತಿರಿ. ಬಾದಾಮಿಯಲ್ಲಿ ಅಲ್ಪ ಮತದಿಂದ ಗೆದ್ದಿದ್ದಿರಿ. ನಿಮ್ಮ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಸೋತು ಶರಣಾಯಿತು. ಆಗ ನಿಮಗೆ ‘ಧಮ್’ ಎಂಬ ಶಬ್ದ ನೆನಪಿಗೆ ಬರಲಿಲ್ಲವೇ?’ ಅಂತಾ ಬಿಜೆಪಿ ಟೀಕಿಸಿದೆ.
‘ಧಮ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ(Siddaramaiah) ಅವರೇ ಸರಿಯಾಗಿ ವಿಚಾರಿಸಿದರೆ ನಿಮಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವಂತ ಕ್ಷೇತ್ರವೇ ಇಲ್ಲ. ಬಾದಾಮಿ ಬಿಡುವುದಕ್ಕೆ ಈಗಾಗಲೇ ನಿರ್ಧರಿಸಿದ್ದೀರಿ. ವಲಸೆ ಹಕ್ಕಿಗೆ ವಿಶ್ರಾಂತಿಗೂ ಗೂಡು ಇಲ್ಲದಂತಾಗಿದೆ. ನಿಮ್ಮ ಧಮ್ ಎಲ್ಲಿ ಹೋಯಿತು #ಬುರುಡೆರಾಮಯ್ಯ?’ ಅಂತಾ ಬಿಜೆಪಿ ಕುಟುಕಿದೆ.
ಧಮ್ ಬಗ್ಗೆ ಮಾತನಾಡುವ @siddaramaiah ಅವರೇ,
ಸರಿಯಾಗಿ ವಿಚಾರಿಸಿದರೆ ನಿಮಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವಂತ ಕ್ಷೇತ್ರವೇ ಇಲ್ಲ.
ಬಾದಾಮಿ ಬಿಡುವುದಕ್ಕೆ ಈಗಾಗಲೇ ನಿರ್ಧರಿಸಿದ್ದೀರಿ. ವಲಸೆ ಹಕ್ಕಿಗೆ ವಿಶ್ರಾಂತಿಗೂ ಗೂಡು ಇಲ್ಲದಂತಾಗಿದೆ.
ನಿಮ್ಮ ಧಮ್ ಎಲ್ಲಿ ಹೋಯಿತು #ಬುರುಡೆರಾಮಯ್ಯ?
— BJP Karnataka (@BJP4Karnataka) December 15, 2021
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ವಿರುದ್ಧ ಹೋರಾಟ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.