Karnataka Budget 2021: ರೈತ ನಾಯಕ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಬಜೆಟ್‌ನಲ್ಲಿ ರೈತರಿಗೆ ಕೊಟ್ಟಿದ್ದೇನು?

ಈ ಬಾರಿಯ ಬಜೆಟ್ ಗಾತ್ರ 2,46,206 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಇದರಲ್ಲಿ ತೀವ್ರ ಸಂಕಷ್ಟದಲ್ಲಿರುವ ಸುಧಾರಣೆಯ ಅಗತ್ಯ ಇರುವ ಕೃಷಿ ಕ್ಷೇತ್ರಕ್ಕೆ ಯಡಿಯೂರಪ್ಪ ಮೀಸಲಿಟ್ಟಿರುವುದು ಕೇವಲ 31,028 ಕೋಟಿ ರೂಪಾಯಿ ಅನುದಾನ.  

Written by - Yashaswini V | Last Updated : Mar 8, 2021, 02:33 PM IST
  • ಕೃಷಿ ವಿವಿಗಳಲ್ಲಿ ರೈತರ ಮಕ್ಕಳು ಕೃಷಿ ಪದವಿ ಪಡೆಯಲು ಇದ್ದ ಮೀಸಲಾತಿ ಶೇಕಡಾ 40ರಿಂದ 50ಕ್ಕೆ ಹೆಚ್ಚಳ
  • ಗೋಹತ್ಯೆ ತಡೆಯೋದಕ್ಕೆ ಪ್ರತಿಜಿಲ್ಲೆಗೆ ಒಂದರಂತೆ ಗೋಶಾಲೆ ನಿರ್ಮಾಣ ಮಾಡಲು ಅನುಮೋದನೆ ನೀಡಿದ ಬಜೆಟ್
  • ಕುರಿ, ಮೇಕೆ, ಕುಕ್ಕುಟ ತಳಿಗಳ ಅಭಿವೃದ್ದಿಗೆ ಕ್ರಮ; ನಂದಿಗುರ್ಗ ಮೇಕೆ ತಳಿಗಳ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ
Karnataka Budget 2021: ರೈತ ನಾಯಕ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಬಜೆಟ್‌ನಲ್ಲಿ ರೈತರಿಗೆ ಕೊಟ್ಟಿದ್ದೇನು? title=
Karnataka Budget 2021 for Farmers

ಬೆಂಗಳೂರು: ರೈತ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Chef Minister B.S. Yediyurappa) ಸೋಮವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ (Budget) ರೈತ ಸಮುದಾಯಕ್ಕೆ ಏನು ಸಿಕ್ಕಿದೆ ಎಂಬ ಮಾಹಿತಿಗಳು ಇಲ್ಲಿವೆ.

ಕೊರೋನಾ ಸಂಕಷ್ಟ ಹಾಗೂ ತೆರಿಗೆ ಸಂಗ್ರಹ ಇಳಿಕೆ, ಸರ್ಕಾರದ ಆದಾಯ ಕಡಿಮೆ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.  ಯಡಿಯೂರಪ್ಪ (BS Yediyurappa) ಬಜೆಟ್ ಗಾತ್ರವನ್ನು ಹೆಚ್ಚಳ ಮಾಡಿದ್ದಾರೆ. ಕಳೆದ ಬಾರಿ 2,37,893 ಕೋಟಿ ರೂಪಾಯಿ ಮೊತ್ತದ ಬಜೆಟ್ ಇತ್ತು. ಈ ಬಾರಿಯ ಬಜೆಟ್ ಗಾತ್ರ 2,46,206 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಇದರಲ್ಲಿ ತೀವ್ರ ಸಂಕಷ್ಟದಲ್ಲಿರುವ ಸುಧಾರಣೆಯ ಅಗತ್ಯ ಇರುವ ಕೃಷಿ ಕ್ಷೇತ್ರಕ್ಕೆ ಯಡಿಯೂರಪ್ಪ ಮೀಸಲಿಟ್ಟಿರುವುದು ಕೇವಲ 31,028 ಕೋಟಿ ರೂಪಾಯಿ ಅನುದಾನ.

ರಾಜ್ಯದ ಕೃಷಿ (Agriculture) ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಕೃಷಿ ಪದವಿ ಪಡೆಯಲು ಈವರೆಗೆ ಶೇಕಡಾ 40ರಷ್ಟು ಸೀಟುಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಬಾರಿಯ ಬಜೆಟ್‌ನಲ್ಲಿ ಈ ಮಿತಿಯನ್ನು ಶೇಕಡಾ 50ಕ್ಕೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

ಇದನ್ನೂ ಓದಿ - Karnataka Budget 2021: ಬಿಎಸ್‌ವೈ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?

ಗೋಹತ್ಯೆ ತಡೆಯೋದಕ್ಕೆ ಪ್ರತಿಜಿಲ್ಲೆಗೆ ಒಂದರಂತೆ ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದ ಯಡಿಯೂರಪ್ಪ, ದೇಸಿ ತಳಿಗಳಾದ ಘೀರ್, ಸಾಹಿವಾಲ್, ವಂಗೋಲ್, ದೇವಣಿ ತಳಿಗಳ ಅಭಿವೃದ್ಧಿಗೆ ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ತಳಿಯ ಸಂವರ್ಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಆಕಸ್ಮಿಕ ಮರಣಹೊಂದು ಕುರಿ ಪರಿಹಾರಕ್ಕೆ ಅನುಗ್ರಹ ಕೊಡುಗೆ ಮುಂದುವರಿಕೆ ಮಾಡಲಾಗುವುದು. ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನಲ್ಲಿ ಆಯುರ್ವೇದ ಔಷಧಿ ಅಳವಡಿಗೆ ಕೇಂದ್ರ ಸ್ಥಾಪನೆ ಮಾಡಲಾಗುವುದು. 2 ಕೋಟಿ ರೂಪಾಯಿ ವೆಚ್ಚದಲ್ಲಿ ಔಷಧಿ ಅಳವಡಿಕೆ ಕೇಂದ್ರ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

ಕುರಿ, ಮೇಕೆ, ಕುಕ್ಕುಟ ತಳಿಗಳ ಅಭಿವೃದ್ದಿಗೂ ಕ್ರಮ ಕೈಗೊಳ್ಳಲಾಗಿದೆ. ಮೇಕೆ ಮಾಂಸ ಉತ್ಪಾದನೆ ಪ್ರೋತ್ಸಾಹಕ್ಕೆ ಕ್ರಮ ಕೈಗೊಳ್ಳಲಾಗುವುದು. ನಂದಿಗುರ್ಗ ಮೇಕೆ ತಳಿಗಳ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ - Karnataka Budget 2021 : `ಸರ್ವಧರ್ಮಕ್ಕೂ ಸಮಪಾಲು' ಇಲ್ಲಿದೆ ಬಜೆಟ್ ಹೈಲೈಟ್ಸ್

ಬೆಂಗಳೂರಿನ ಹೆಸರಘಟ್ಟದಲ್ಲಿ 100 ಎಕರೆ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಹಸಿರೆಲೆ ಗೊಬ್ಬರಕ್ಕೆ 10 ಕೋಟಿ ರೂಪಾಯಿ ನೀಡಲಾಗುವುದು. ಸಾವಯವ, ಸಿರಿಧಾನ್ಯ ಮಾರಾಟಕ್ಕೆ ಇ ಮಾರುಕಟ್ಟೆ ಪ್ರೈ. ಲಿಮಿಟೆಡ್, ಅಡಕೆ ಪರಿಹಾರ ಬೆಲೆ ಪ್ರೋತ್ಸಾಹಕ್ಕೆ 25 ಕೋಟಿ ರೂಪಾಯಿ ನೀಡಲಾಗುವುದು. ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಿಸಲು 25 ಕೋಟಿ ನೀಡಲಾಗುವುದು. ಬ್ಯಾಡಗಿ ಮೆಣಸಿನಕಾಯಿಗಾಗಿ ಗುಣ ವಿಶ್ಲೇಷಣಾ ಘಟಕ ಸ್ಥಾಪನೆ ಮಾಡಲಾಗುವುದು. ಸಾವಯವ ಕೃಷಿಗೆ 500 ಕೋಟಿ ರೂಪಾಯಿ ನೀಡಲಾಗುವುದು. ಸಿಂಗೇನ ಅಗ್ರಹಾರದಲ್ಲಿ ತರಕಾರಿ ಮಾರುಕಟ್ಟೆ, ಗೋದಾಮು ಮತ್ತು ಅಂಗಡಿ ನಿರ್ಮಾಣ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News