ರಾಜ್ಯ ಬಜೆಟ್ 2018: ಉತ್ತರ ಕರ್ನಾಟಕ ಭಾಗಕ್ಕೆ ಸಮ್ಮಿಶ್ರ ಸರ್ಕಾರ ಘೋಷಿಸಿದ ಯೋಜನೆಗಳೇನು?

ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಭಾಗಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ. 

Last Updated : Jul 5, 2018, 07:37 PM IST
ರಾಜ್ಯ ಬಜೆಟ್ 2018: ಉತ್ತರ ಕರ್ನಾಟಕ ಭಾಗಕ್ಕೆ ಸಮ್ಮಿಶ್ರ ಸರ್ಕಾರ ಘೋಷಿಸಿದ ಯೋಜನೆಗಳೇನು? title=

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಭಾಗಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ. 

ಈ ಹಿಂದಿನ ಸರ್ಕಾರಗಳು ಬಜೆಟ್‌ ಮತ್ತು ಯೋಜನೆಗಳ ವಿಷಯದಲ್ಲಿ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯೂ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಅಬಿವೃದ್ಧಿಗೆ ಗಮನಹರಿಸಿದ್ದು ಅಷ್ಟಕ್ಕಷ್ಟೇ. ಆದರೆ ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರ ಕುಮಾರಸ್ವಾಮಿ ಅವರು ಮೊದಲ ಬಜೆಟ್'ನಲ್ಲಿಯೇ ಉತ್ತರ ಕರ್ನಾಟಕ ಭಾಗಕ್ಕೆ ಹಲವು ಯೋಜನೆಗಳನ್ನು ಘೋಸಿಸಿದ್ದು, ಉತ್ತರ ಕರ್ನಾಟಕದ ಆಶೋತ್ತರಗಳಿಗೆ ಸಮ್ಮಿಶ್ರ ಸರ್ಕಾರ ಸ್ಪಂದಿಸಲಿದೆ ಎಂಬ ಆಶಾಭಾವನೆಯನ್ನು ಜನರಲ್ಲಿ ಮೂಡಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನರಿಗೆ ಬಜೆಟ್'ನಲ್ಲಿ ನೀಡಿದ ಹೈಲೈಟ್ಸ್'ಗಳ ವಿವರ ಇಲ್ಲಿದೆ...

* ಕಲಬುರ್ಗಿ ನಗರದಲ್ಲಿ ಎಸ್ಸಿ/ಎಸ್ಟಿ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೇಂದ್ರ ಸ್ಥಾಪನೆ.
* ಬೆಳಗಾವಿ, ಕಲ್ಬುರ್ಗಿಯಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ತೃತಿಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
* ಗದಗ, ಕೊಪ್ಪಳದಲ್ಲಿ ಸೂಪರ್ ಸ್ಪೆಷಲ್ ಆಸ್ಪತ್ರೆ
* ಗದಗ ಕೊಪ್ಪಳದಲ್ಲಿ ಇಸ್ರೆಲ್ ಮಾದರಿ ನೀರಾವರಿ ಸೌಲಭ್ಯ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಯೋಜನೆಯನ್ನು ಜಾರಿ ಮಾಡಲಾಗುವುದು.
* ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮಗಳಿಗೆ ನೀರಾವರಿ ಕಲ್ಪಿಸಲು 100 ಕೋಟಿ ರೂ. ಮೀಸಲು
* ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯಕ್ಕೆ 3 ಕೊಟಿ ರೂಪಾಯಿ ಮೀಸಲು.
* ಮೆಣಸಿನ ಕಾಯಿ, ಗೋಡಂಬಿ, ಕಾಳು ಮೆಣಸು, ಜೀರಿಗೆ, ಕೊತ್ತಂಬರಿ ಮತ್ತು ಮೆಂತ್ಯ ದೀರ್ಘಕಾಲ ಸಂರಕ್ಷಣೆಗೆ ನಿರ್ವಾತ ತಂತ್ರಜ್ಞಾನ ಘಟಕವನ್ನು ಈ ಭಾಗದಲ್ಲಿ ಸ್ಥಾಪಿಸಲಾಗುವುದು.
* ಧಾರವಾಡ, ಕಲಬುರಗಿಯಲ್ಲಿ ಘನೀಕೃತ ವೀರ್ಯ ನಳಿಕೆಗಳ ವಿತರಣಾ ಕೇಂದ್ರ ಸ್ಥಾಪನೆಗೆ ಸುಮಾರು 2 ಕೋಟಿ ರೂ. ವೆಚ್ಚ
* ಕೊಪ್ಪಳದಲ್ಲಿ ಆಟಿಕೆ ತಯಾರಿಕ ಘಟಕ
* ವಸ್ತ್ರೋಧ್ಯಮ ಪ್ರೋತ್ಸಾಹ ಧನ ಯೋಜನೆ ಅಡಿ ಬಳ್ಳಾರಿಯಲ್ಲಿ ಟೆಕ್ಸ್‌ಟೈಲ್‌ ತಯಾರಿಕಾ ಘಟಕ
* ಕಲ್ಬುರ್ಗಿ ಜಿಲ್ಲೆಯನ್ನು ಭಾರತದ ಸೋಲಾರ್‌ ಜಿಲ್ಲೆಯಾಗಿ ಅಭಿವೃದ್ಧಿ
* ಧಾರವಾಡ ಕೃಷಿ ವಿವಿಗೆ 3 ಕೋಟಿ ರೂಪಾಯಿ ಅನುದಾನ
* ಕಾರವಾರ, ಯಾದಗಿರಿ, ಹಾವೇರಿ ಜಿಲ್ಲೆಗಳಲಿ ಇಸ್ರೆಲ್ ಮಾದರಿ ನೀರಾವರಿ ಯೋಜನೆಗೆ 150 ರೂಪಾಯಿ ಮೀಸಲು
* ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಮತ್ತು ಅಂಕಾಲಜಿಗೆ ಸಂಬಂಧಿಸಿದ ಆರೋಗ್ಯ ಸೇವೆಗಳ ಘಟಕ ಮತ್ತು ಟ್ರಾಮಾ ಘಟಕ ಆರಂಭ.

Trending News