ಬೆಂಗಳೂರು: ಗಾಂಧಿವಾದಿ ಸ್ವತಂತ್ರ ಹೋರಾಟಗಾರ ಹಾಗೂ ಏಕೀಕರಣ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿರುವ ಎಸ್.ನಿಜಲಿಂಗಪ್ಪನವರರ ಜನ್ಮ ದಿನಾಚರಣೆಯನ್ನು ಇಂದು ಎಲ್ಲೆಡೆ ಆಚರಿಸಲಾಗುತ್ತಿದೆ.
ಕರ್ನಾಟಕದಿಂದ ಎಐಸಿಸಿ ಅಧ್ಯಕ್ಷ ಹುದ್ದೆಗೆ ಏರಿದ ಮೊದಲ ಕನ್ನಡಿಗ ಎನ್ನುವ ಹೆಗ್ಗಳಿಕೆ ನಿಜಲಿಂಗಪ್ಪನವರಿಗೆ ಇದೆ.1969 ರಲ್ಲಿ ಅವರು ಕಾಂಗ್ರೆಸ್ ಪಕ್ಷವು ಬಂಡಾಯವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅವರು ಈ ಉನ್ನತ ಪದವಿಯನ್ನು ಅಲಂಕರಿಸಿದ್ದರು. ಅಷ್ಟೇ ಅಲ್ಲದೆ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಈಗ ನಿಜಲಿಂಗಪ್ಪನವರ ಜನ್ಮದಿನದ ನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸ್ಮರಿಸುತ್ತಾ"ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಪ್ರಮುಖ ನೇತಾರ, ಕರ್ನಾಟಕ ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿ ಶ್ರೀ ಎಸ್.ನಿಜಲಿಂಗಪ್ಪನವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. ಜನರಿಂದ ನವಕರ್ನಾಟಕ ನಿರ್ಮಾತೃ ಎಂಬ ಬಿರುದು ಪಡೆದಿದ್ದ ನಿಜಲಿಂಗಪ್ಪನವರು ಈ ನಾಡಿಗೆ ನೀಡಿದ ಕೊಡುಗೆಗಳು ಹಾಗೂ ಸೇವೆ ಅಪಾರವಾದುದು ಎಂದು ಟ್ವೀಟ್ ಮಾಡಿದ್ದಾರೆ.
"ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಪ್ರಮುಖ ನೇತಾರ, ಕರ್ನಾಟಕ ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿ ಶ್ರೀ ಎಸ್.ನಿಜಲಿಂಗಪ್ಪನವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
ಜನರಿಂದ ನವಕರ್ನಾಟಕ ನಿರ್ಮಾತೃ ಎಂಬ ಬಿರುದು ಪಡೆದಿದ್ದ ನಿಜಲಿಂಗಪ್ಪನವರು ಈ ನಾಡಿಗೆ ನೀಡಿದ ಕೊಡುಗೆಗಳು ಹಾಗೂ ಸೇವೆ ಅಪಾರವಾದುದು." ಮುಖ್ಯಮಂತ್ರಿ : @BSBommai pic.twitter.com/b5eNbYkwtB— CM of Karnataka (@CMofKarnataka) December 10, 2022
ಇದೆ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ "ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿ ನಾಯಕರಾಗಿ, ಮುಖ್ಯಮಂತ್ರಿಯಾಗಿ ನಾಡು, ನುಡಿಯ ಸೇವೆಗೈದ ಕಾಂಗ್ರೆಸ್ ನ ಕಟ್ಟಾಳು ಎಸ್. ನಿಜಲಿಂಗಪ್ಪ ಅವರದು ಮಾದರಿ ವ್ಯಕ್ತಿತ್ವ. ನಿಜಲಿಂಗಪ್ಪನವರ ಹೋರಾಟದ ಬದುಕು, ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ, ಗೌರವದಿಂದ ನಮಿಸುವೆ" ಎಂದು ಸ್ಮರಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿ ನಾಯಕರಾಗಿ, ಮುಖ್ಯಮಂತ್ರಿಯಾಗಿ ನಾಡು, ನುಡಿಯ ಸೇವೆಗೈದ ಕಾಂಗ್ರೆಸ್ ನ ಕಟ್ಟಾಳು ಎಸ್. ನಿಜಲಿಂಗಪ್ಪ ಅವರದು ಮಾದರಿ ವ್ಯಕ್ತಿತ್ವ.
ನಿಜಲಿಂಗಪ್ಪನವರ ಹೋರಾಟದ ಬದುಕು, ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ, ಗೌರವದಿಂದ ನಮಿಸುವೆ. pic.twitter.com/nqHRoQm7FF
— Siddaramaiah (@siddaramaiah) December 10, 2022
ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅವರು 1969 ರಲ್ಲಿ ಎಐಸಿಸಿ ಅಧ್ಯಕ್ಷ ರಾಗಿದ್ದಂತಹ ಸಂದರ್ಭದಲ್ಲಿ ವಿದೇಶಿ ಪತ್ರಕರ್ತನ ಜೊತೆಗೆ ಪಕ್ಷದಲ್ಲಿ ಎದ್ದಿರುವ ಬಂಡಾಯದ ಕುರಿತಾಗಿ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.