/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಅರಮನೆ ಮೈದಾನದಲ್ಲಿ ಈ ಬಾರಿಯ ವಿಶ್ವ ಕುಂದಾಪುರ ಕನ್ನಡ ಹಬ್ಬ

Kundapra Kannada Dina: ವಿಶ್ವ ಕುಂದಾಪುರ ಕನ್ನಡ ಹಬ್ಬವನ್ನು ಪ್ರತಿವರ್ಷವೂ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬಂದಿದೆ. ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ಅಗಸ್ಟ್ 17,18 ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ.ಇದಕ್ಕೆ ಪೂರ್ವಭಾವಿಯಾಗಿ ಇಂದು ಥೀಮ್ ಸಾಂಗ್ ಮತ್ತು ಪೋಸ್ಟರ್ ಅನಾವರಣ ಕಾರ್ಯಕ್ರಮ  ಮಾಗಡಿ ರಸ್ತೆಯ ಕೊಟ್ಟಿಗೆಪಾಳ್ಯದ ಸುದೀಕ್ಷಾ ಕನ್ವೆನ್ಶನ್ ಹಾಲ್ ನಲ್ಲಿ ನಡೆಯಿತು.

Written by - Savita M B | Last Updated : Jul 8, 2024, 05:41 PM IST
  • ಕುಂದಾಪ್ರ ಕನ್ನಡ ಹಬ್ಬದಲ್ಲಿ ಹಲವುರು ಶ್ರಮಿಸುತ್ತಿದ್ದಾರೆ.
  • ಈ ಭಾರಿಯ ಕುಂದಾಪುರ ಕನ್ನಡದ ವಿಶೇಷತೆಗಳು
ಅರಮನೆ ಮೈದಾನದಲ್ಲಿ ಈ ಬಾರಿಯ ವಿಶ್ವ ಕುಂದಾಪುರ ಕನ್ನಡ ಹಬ್ಬ title=

ಬೆಂಗಳೂರು: ಉದ್ಗಾಟಕರಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತಾಡಿ, ಕುಂದಾಪ್ರ ಕನ್ನಡ ಹಬ್ಬದಲ್ಲಿ ಹಲವುರು ಶ್ರಮಿಸುತ್ತಿದ್ದಾರೆ. ಸದಾ ಈ ಪ್ರಯತ್ನಕ್ಕೆ ನನ್ನ ಬೆಂಬಲ ಇರಲಿದೆ. ಕುಂದಾಪುರ ಸಂಸ್ಕ್ರತಿಗೆ ಸಂಬಂಧಿಸಿದ ಹೊಸ ಪ್ರಯೋಗ ಮಾಡುತ್ತಿದ್ದು ,ಕುಂದಾಪುರ ಹಬ್ಬದಲ್ಲಿ ಅದನ್ನ ರಿವೀಲ್ ಮಾಡೋದಾಗಿ  ಹೇಳಿದ್ರು.

ಕಾರ್ಯಕ್ರಮದಲ್ಲಿ ಚಿತ್ರ ಸಾಹಿತಿ  ಪ್ರಮೋದ್ ಮರವಂತೆ, ಸತೀಶ್ ಶೆಟ್ಟಿ, ಉಪೇಂದ್ರ ಶೆಟ್ಟಿ, ಕುಂದಾಪ್ರ  ಕನ್ನಡ ಪ್ರತಿಷ್ಠಾನದ ದೀಪಕ್ ಶೆಟ್ಟಿ,ರಾಘವೇಂದ್ರ ಕಾಂಚನ್, ನರಸಿಂಹ ಬೀಜಾಡಿ,ಅಜಿತ್ ಶೆಟ್ಟಿ ಉಳ್ತೂರು ,ಉದಯ್ ಹೆಗ್ಡೆ ಉಪಸ್ಥಿತರಿದ್ದು ಶುಭ ಹಾರೈಸಿದ್ರು.ಈ ವೇಳೆ ವಿಶ್ವ ಕುಂದಾಪುರ ಕನ್ನಡ ಹಬ್ಬದ ಥೀಮ್ ಸಾಂಗ್, ಪೋಸ್ಟರ್ ರಿಲೀಸ್ ಮಾಡಲಾಯ್ತು.

ಈ ಭಾರಿಯ ಕುಂದಾಪುರ ಕನ್ನಡದ ವಿಶೇಷತೆಗಳು
ಬೆಂಗಳೂರಿನ ಹಲವು ಏರಿಯಾಗಳಿಂದ ಪುರವಣಿಗೆಯೊಂದಿಗೆ ದಿಬ್ಬಣವು ಅರಮನೆ ಮೈದಾನಕ್ಕೆ ಬರಲಿದೆ.ಬಳಿಕ ನುಡಿ ಚಾವುಡಿಯ ಮೂಲಕ ಅಗಸ್ಟ್ 17 ರ ಶನಿವಾರ ಮಧ್ಯಾನ್ಹ ಉದ್ಘಾಟನಾ ಕಾರ್ಯಕ್ರಮ ಇರಲಿದ್ದು ಚಿತ್ರತಾರೆಯರು,ಗಣ್ಯರುಉಪಸ್ಥಿತರಿರಲಿದ್ದಾರೆ.ಕುಂದಾಪುರ ಕನ್ನಡ ಹಬ್ಬದಲ್ಲಿ ಬೆಂಗಳೂರಿನಲ್ಲಿ ಅತಿದೊಡ್ಡ ಐತಿಹಾಸಿಕ ಜೋಡಾಟ ಯಕ್ಷಗಾನ, ಹಂದಾಡಿ ಮತ್ತು ತಂಡದ ಹಂದಾಡ್ತಾ ನೆಗ್ಯಾಡಿಯ ವಿಭಿನ್ನ ನಗೆನಾಟಕ ,ಕುಂದಾಪುರದ ಗ್ರಾಮೀಣ ಕ್ರೀಡೆಗಳನ್ನ ಒಳಗೊಂಡ ಬಯಲಾಟ ,ರಥೋತ್ಸವ, ಆಫ್ರಿಕಾದ ಜಂಬೆ- ಕುಂದಾಪುರದ ಚಂಡೆಯ ಜುಗಲ್ಬಂದಿ ಕಾರ್ಯಕ್ರಮದಲ್ಲಿ ಆಫ್ರಿಕಾ- ಕುಂದಾಪುರ ಕಲಾ ಸಮಾಗಮ,ಭುಭಬಲದ ಪರಾಕ್ರಮ ಎಂಬ ಹಗ್ಗ ಜಗ್ಗಾಟ ಸ್ಪರ್ಧೆ,ಯುವಕ-ಯುವತಿಯರಿಗಾಗಿ ಕುಂದಾಪುರ ಕನ್ನಡ ಡಿಜೆ,ಕುಂದಗೀತೆಗಳ  ಡಾನ್ಸ್ ಕುಂದಾಪುರ ಡಾನ್ಸ್, ಕುಂದಾಪುರ ಕನ್ನಡ ಚಿತ್ರ ಪ್ರದರ್ಶನ,ಕುಂದಾಪುರ ನೆಲಮೂಲದ ಸಿನಿ ತಾರಾ ಮೆರಗು,ಕಡಲೂರಿನ ವಸ್ತು,ಒಡವೆ,ವಸ್ತ್ರ ಮೊದಲಾದವುಗಳ ಪ್ರದರ್ಶನ,ಮಾರಾಟ,ಕರಾವಳಿ ಖಾದ್ಯ ಮೇಳ ಸೇರಿ ಈ ಭಾರಿ ವೈವಿಧ್ಯಮಯ ಕಾರ್ಯಕ್ರಮಗಳು ಇರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.