Ration Card Holders : APL ಮತ್ತು BPL ಕಾರ್ಡ್ ಹೊಂದಿರುವವರಿಗೊಂದು ಮಹತ್ವದ ಮಾಹಿತಿ!

ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ APL ಮತ್ತು BPL ಕಾರ್ಡ್ ಹೊಂದಿದ್ದರೆ ಅವುಗಳನ್ನು ಜೂನ್ 30ರೊಳಗೆ ನಿಮ್ಮ ತಾಲೂಕು ದಂಡಾಧಿಕಾರಿಗಳಿಗೆ ಹಿಂದಿರುಗಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. 

Last Updated : May 29, 2021, 12:53 PM IST
  • ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ APL ಮತ್ತು BPL ಕಾರ್ಡ್ ಹೊಂದಿದ್ದರೆ
  • ಜೂನ್ 30ರೊಳಗೆ ನಿಮ್ಮ ತಾಲೂಕು ದಂಡಾಧಿಕಾರಿಗಳಿಗೆ ಹಿಂದಿರುಗಿಸಬೇಕು
  • ನೌಕರಿ ಕಳೆದುಕೊಳ್ಳುವ ಸಂಭವ ಕೂಡ ಇದೆ
Ration Card Holders : APL ಮತ್ತು BPL ಕಾರ್ಡ್ ಹೊಂದಿರುವವರಿಗೊಂದು ಮಹತ್ವದ ಮಾಹಿತಿ! title=

ಬೆಂಗಳೂರು : ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ APL ಮತ್ತು BPL ಕಾರ್ಡ್ ಹೊಂದಿದ್ದರೆ ಅವುಗಳನ್ನು ಜೂನ್ 30ರೊಳಗೆ ನಿಮ್ಮ ತಾಲೂಕು ದಂಡಾಧಿಕಾರಿಗಳಿಗೆ ಹಿಂದಿರುಗಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. 

ಯಾರಿಗೆ ಅವಶ್ಯಕತೆ ಇದೆ ಅವರುಗಳು ಕಾರ್ಡ್(Ration Card)​​ಗಳನ್ನು ಪಡೆಯಬಹುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ : Heavy Rainfall : ಮೇ 31ಕ್ಕೆ ಮುಂಗಾರು ಪ್ರವೇಶ : ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ!

ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ನೌಕರರು(Government Employees), ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು, ನಿಗಮಗಳು/ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು, ಆದಾಯ ತೆರಿಗೆ, ಸೇವಾತೆರಿಗೆ, ವ್ಯಾಟ್​​, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟರ್​ಗಿಂತಲೂ ಹೆಚ್ಚಿನ ಒಣ ಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರು APL ಮತ್ತು BPL ಕಾರ್ಡ್ ಹೊಂದಿದ್ದರೆ ಅವುಗಳನ್ನು ಜೂನ್ 30ರೊಳಗೆ ತಹಶೀಲ್ದಾರರಿಗೆ ಹಿಂದಿರುಗಿಸಬೇಕು. 

ಇದನ್ನೂ ಓದಿ : HD Kumaraswamy : 'ಹಿಂದೆ ಮಾಡಿದ್ದ ಪಾಪದ ಫಲವನ್ನ ಇಂದು ಬಿಜೆಪಿ ಅನುಭವಿಸುತ್ತಿದೆ'

ನಗರ ಪ್ರದೇಶದಲ್ಲಿ ಸಾವಿರ ಅಡಿಗಳಿಗಿಂತಲೂ ಅಧಿಕವಾಗಿರುವ ವಿಸ್ತೀರ್ಣದ ಮನೆ ಹೊಂದಿರುವ ಕುಟುಂಬಗಳು, ಜೀವನ ಉಪಯೋಗಕ್ಕಾಗಿ ಸ್ವತ ಓಡಿಸುವ ಟ್ರ್ಯಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಹೊರತುಪಡಿಸಿ ಉಳಿದ ನಾಲ್ಕು ಚಕ್ರವಾಹನ ಹೊಂದಿರುವ ಕುಟುಂಬಗಳು, ವಾರ್ಷಿಕ ಕುಟುಂಬ ಆದಾಯ(Family Annual Income)ವು 1.20 ಲಕ್ಷಗಳಿಗಿಂತಲೂ ಅಧಿಕ ಇರುವ ಕುಟುಂಬಗಳು ಸರ್ಕಾರ ನಿಗದಿ ಪಡಿಸಿದ ಮಾನದಂಡಗಳ ಅನ್ವಯAPL ಮತ್ತು BPL ಕಾರ್ಡ್ ಹೊಂದಲು ಅನರ್ಹರಾಗಿರುತ್ತಾರೆ. ಒಂದು ವೇಳೆ ಹಿಂದಿರುಗಿಸದೆ ಇದ್ದರೆ, ದಂಡ ಕಟ್ಟಬೇಕಾಗುತ್ತದೆ. ಅಲ್ಲದೆ ನೌಕರಿ ಕಳೆದುಕೊಳ್ಳುವ ಸಂಭವ ಕೂಡ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : " ಮಹಿಳೆಯರ ಆತ್ಮಗೌರವ ರಕ್ಷಣೆಗಾಗಿ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಲಿ "

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News