Vairamudi Utsava: ವಿಶ್ವ ಪ್ರಸಿದ್ದ ವೈರಮುಡಿ ಉತ್ಸವಕ್ಕೆ ದೀಪಾಲಂಕಾರದ ರಂಗು

ವೈರಮುಡಿ ಉತ್ಸವದ (Vairamudi Utsava) ಅಂಗವಾಗಿ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇಗುಲ, ರಾಜಬೀದಿ, ಕಲ್ಯಾಣಿ ಹಾಗೂ ಯೋಗಾ ನರಸಿಂಹಸ್ವಾಮಿ ಬೆಟ್ಟ ಹಾಗೂ ಬೆಟ್ಟದ ಮೇಲಿನ ದೇಗುಲಕ್ಕೆ ವಿಶೇಷವಾಗಿ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.

Written by - Yashaswini V | Last Updated : Mar 14, 2022, 04:06 PM IST
  • ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ
  • ವೈರಮುಡಿ ಉತ್ಸವಕ್ಕಾಗಿ ಮೇಲುಕೋಟೆಯಲ್ಲಿ ವಿಶೇಷ ದೀಪಾಲಂಕಾರ
  • ದ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ಮೇಲುಕೋಟೆ ವಿಶೇಷ ದೀಪಾಲಂಕಾರದ ವೈಭವ
Vairamudi Utsava: ವಿಶ್ವ ಪ್ರಸಿದ್ದ ವೈರಮುಡಿ ಉತ್ಸವಕ್ಕೆ ದೀಪಾಲಂಕಾರದ ರಂಗು  title=
Melkote Vairamudi Utsava

ಮಂಡ್ಯ: ಸಕ್ಕರೆನಾಡು‌ ಮಂಡ್ಯದಲ್ಲಿ ಇಂದು ಐತಿಹಾಸಿಕ ವಿಶ್ವಪ್ರಸಿದ್ದ ವೈರಮುಡಿ ಉತ್ಸವ ನಡೆಯುತ್ತಿದೆ. ಐತಿಹಾಸಿಕ ಉತ್ಸವಕ್ಕೆ ಮೇಲುಕೋಟೆಯನ್ನು  ನವ ವಧುವಿನಂತೆ ಸಿಂಗರಿಸಲಾಗಿದ್ದು, ವಿಶೇಷ ದೀಪಾಲಂಕಾರ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ (Mandya District) ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ  ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣದಿಂದ ಸರಳವಾಗಿ ನಡೆದಿದ್ದ ಈ ವೈರಮುಡಿ ಉತ್ಸವವನ್ನು ಇದೀಗ ಕೊರೊನಾ ಪ್ರಕರಣಗಳು ಇಳಿಮುಖವಾಗಿರುವ ಹಿನ್ನಲೆಯಲ್ಲಿ ಮತ್ತೆ ಅದ್ದೂರಿಯಾಗಿ ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು, ಸಕಲ ಸಿದ್ದತೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ ಉತ್ಸವಕ್ಕೆ ಮೇಲುಕೋಟೆಯನ್ನು ನವ ವಧುವಿನಂತೆ ಸಿಂಗಾರ ಮಾಡಲಾಗಿದೆ. ಮೇಲುಕೋಟೆಯ ಈ ವೈರಮುಡಿ ಉತ್ಸವಕ್ಕೆಈ ಬಾರಿ ವಿಶೇಷ ಬಣ್ಣದ ದೀಪಾಲಂಕಾರದ ವ್ಯವಸ್ಥೆ ಮಾಡಿದ್ದು ಬಣ್ಣದ ದೀಪಗಳಿಂದ ಮೇಲುಕೋಟೆ ಕಂಗೊಳಿಸುತ್ತಿದೆ.

ಇದನ್ನೂ ಓದಿ- Video: ಹಾಲು ಕುಡಿಯುವ ಕಲ್ಲಿನ ಬಸವ, ರಾತ್ರೋ ರಾತ್ರಿ ಬಸವಣ್ಣನ ಗುಡಿಗೆ ಲಗ್ಗೆಯಿಟ್ಟ ಭಕ್ತರು

ಇನ್ನು ವೈರಮುಡಿ ಉತ್ಸವದ (Vairamudi Utsava) ಅಂಗವಾಗಿ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇಗುಲ, ರಾಜಬೀದಿ, ಕಲ್ಯಾಣಿ ಹಾಗೂ ಯೋಗಾ ನರಸಿಂಹಸ್ವಾಮಿ ಬೆಟ್ಟ ಹಾಗೂ ಬೆಟ್ಟದ ಮೇಲಿನ ದೇಗುಲಕ್ಕೆ ವಿಶೇಷವಾಗಿ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ದ್ರೋಣ್ ಕ್ಯಾಮರಾದಲ್ಲಿನ ಈ ಬಣ್ಣದ ಅಲಂಕಾರ ದೃಶ್ಯ ಮೈ ಮನ ಸೂರೆಗೊಳ್ಳುವಂತಿದೆ. ಅಲ್ಲದೆ ಬೆಟ್ಟದ ಕೆಳಗೆ ಮತ್ತು ಗೋಪುರಕ್ಕೆ ಈ ಬಾರಿ ಲೇಸರ್ ಲೈಟ್ ನಿಂದ ಚಿತ್ತಾರ ಬಿಡಿಸಿದ್ದು ಇದು ಜನರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ- ಮೇಲುಕೋಟೆಯ ಕಲ್ಯಾಣಿಯಲ್ಲಿ ವಿಜೃಂಭಣೆಯಿಂದ ಜರುಗಿದ ಚೆಲುವನಾರಾಯಣ ತೆಪ್ಪೋತ್ಸವ

ಇಂದು ಸಂಜೆ  ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು, ಈ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಿದ್ದು ಬೆಟ್ಟದ ಕೆಳಗಿನ ದಳವಾಯಿ ಕೆರೆಯಲ್ಲಿ ಗಂಗಾರತಿ ಮಾಡಲಿದ್ದಾರೆ. ಅದಕ್ಕಾಗಿ ಈ ಕೆರೆ ಮದ್ಯೆ ವಿಶೇಷ ವೇದಿಕೆ ನಿರ್ಮಿಸಿದ್ದು ಅಲ್ಲಿ ಕೂಡ ಬಣ್ಣದ ಚಿತ್ತಾರ ಬಿಡಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News