ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ನಡುವಿನ ಕಾಳಗ ಹೆಚ್ಚಾಗುತ್ತಲೇ ಇದೆ. ಅದಕ್ಕೆ ಟ್ವಿಟ್ಟರ್, ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ಅದಕ್ಕೆ ನಮ್ಮ ಕೇಂದ್ರ ಸಚಿವ ಸದಾನಂದಗೌಡರೂ ಹೊರತಾಗಿಲ್ಲ.
ಭಾಗ್ಯಗಳ ಹೆಸರಲ್ಲಿ ಜನರ ಸ್ವಾಭಿಮಾನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಛಿದ್ರಗೊಳಿಸಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಆರೋಪಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿರುವ ಸದಾನಂದಗೌಡ-
1) ಭಾಗ್ಯಗಳ ಹೆಸರಲ್ಲಿ ಜನರ ಸ್ವಾಭಿಮಾನ ಛಿದ್ರ
2) ಜಾತಿ ಗಣತಿಯ ಹೆಸರಲ್ಲಿ ಜನರ ಭಾವನೆ ಗಳ ಛಿದ್ರ
3) ಅಭಿವೃದ್ಧಿಯ ಹೆಸರಲ್ಲಿ ಹೊಡೆದ ಕಮಿಷನ್ ನಿಂದ ಕಟ್ಟಿದ್ದ ಕಟ್ಟಡ ಗಳು ಛಿದ್ರ
4) ಹೊಸ ಧರ್ಮ ಕೊಡಿಸುವ ತಂತ್ರ ಹೂಡಿ ಜನರ ಛಿದ್ರ, ಇದನ್ನೆಲ್ಲಾ ಮಾಡಿದ್ದು ಛಿದ್ದ್ರಾಮೈಯ್ಯ ಎಂದು ಆರೋಪಿಸಿದ್ದಾರೆ.
1) ಭಾಗ್ಯಗಳ ಹೆಸರಲ್ಲಿ ಜನರ ಸ್ವಾಭಿಮಾನ ಛಿದ್ರ
2) ಜಾತಿ ಗಣತಿಯ ಹೆಸರಲ್ಲಿ ಜನರ ಭಾವನೆ ಗಳ ಛಿದ್ರ
3) ಅಭಿವೃದ್ಧಿಯ ಹೆಸರಲ್ಲಿ ಹೊಡೆದ ಕಮಿಷನ್ ನಿಂದ ಕಟ್ಟಿದ್ದ ಕಟ್ಟಡ ಗಳು ಛಿದ್ರ
4) ಹೊಸ ಧರ್ಮ ಕೊಡಿಸುವ ತಂತ್ರ ಹೂಡಿ ಜನರ ಛಿದ್ರ
ಇದನ್ನೆಲ್ಲಾ ಮಾಡಿದ್ದು ಛಿದ್ದ್ರಾಮೈಯ್ಯ— Sadananda Gowda (@DVSBJP) March 25, 2018