ಬೆಂಗಳೂರು: ಮಾರಣಾಂತಿಕ ಕಾಯಿಲೆ ನಿಪಾ ಈಗ ಕರ್ನಾಟಕದಲ್ಲಿಯೂ ಪತ್ತೆಯಾಗಿದೆ.ಈಗಾಗಲೇ ಕೇರಳದಲ್ಲಿ ಹಲವಾರು ಸಾವುಗಳಿಗೆ ಕಾರಣವಾಗಿರುವ ಈ ರೋಗ ವ್ಯಾಪಕವಾಗಿ ಹರಡುತ್ತಿದೆ.
ಈ ರೋಗದ ವೈರಸ್ ಗಳು ಮಂಗಳೂರಿನಲ್ಲಿ 20 ವರ್ಷದ ಮಹಿಳೆ ಮತ್ತು 7೫ ವರ್ಷದ ವ್ಯಕ್ತಿಯಲ್ಲಿ ಕಂಡು ಬಂದಿದೆ ಎಂದು ತಿಳಿದುಬಂದಿದೆ. ಇತ್ತೀಚಿಗೆ ಕೇರಳ ಪ್ರವಾಸಕ್ಕೆ ಹೋದಾಗ ಅವರಲ್ಲಿ ಈ ರೋಗಾಣು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಜಿಲ್ಲಾ ವೈದ್ಯಾಧಿಕಾರಿ ಬಿ ವಿ ರಾಜೇಶ್ " ಅವು ಇನ್ನು ನಿಪಾ ವೈರಸ್ ಎಂದು ಇನ್ನು ಧೃಡಪಟ್ಟಿಲ್ಲ ಆದ್ದರಿಂದ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ " ಎಂದು ತಿಳಿಸಿದರು.ಈಗಾಗಲೇ ರಕ್ತ ಸ್ಯಾಂಪಲ್ ಗಳನ್ನು ಮಣಿಪಾಲ್ ವೈರಸ್ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದೆ, ಫಲಿತಾಂಶಕ್ಕಾಗಿ ಇನ್ನು ನಿರೀಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಕೇರಳಾದಲ್ಲಿ ಈಗಾಗಲೇ ಈ ರೋಗದಿಂದಾಗಿ ಸುಮಾರು 10 ಜನರು ಮೃತಪಟ್ಟಿದ್ದಾರೆ.ಆದ್ದರಿಂದ ಸರ್ಕಾರ ಈಗ ಈ ರೋಗ ಹರಡದಂತೆ ಮುನ್ನಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜನರಿಗೆ ಸೂಚಿಸಿದೆ.