ವರ್ಗಾವಣೆ ವ್ಯಾಪಾರ :ಯತ್ನಾಳ್ ಆರೋಪಕ್ಕೆ ಸದನದಲ್ಲಿ ಗದ್ದಲ

Basanagowda Patil Yatnal : ವಿಜಯಪುರ ಜಿಲ್ಲೆಯ ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆ ವಿಚಾರ ಪ್ರಸ್ತಾಪ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ಮದ್ಯೆ ತೀವ್ರ ಗದ್ದಲ ಕಂಡು ಸದನವನ್ನು ಕೆಲ ಕಾಲ ಮುಂದೂಡಲಾಯಿತು.  

Written by - Prashobh Devanahalli | Edited by - Savita M B | Last Updated : Jul 11, 2023, 03:02 PM IST
  • ಬಸವರಾಜ ರಾಯರೆಡ್ಡಿ ಕ್ರಿಯಾಲೋಪ ಎತ್ತಿದರು‌.
  • ಶೂನ್ಯವೇಳೆಯಲ್ಲಿ ಈ ರೀತಿಯಲ್ಲಿ ಚರ್ಚೆ ನಡೆಸಲು ಅವಕಾಶ ಇಲ್ಲ
  • ಯಾರು ವ್ಯಾಪಾರ ಮಾಡಿದ್ದಾರೆ? ವ್ಯಾಪಾರ ಪದವನ್ನು ಕಡತದಿಂದ ತೆಗೆದು ಹಾಕಿ ಎಂದು ಆಗ್ರಹಿಸಿದರು.
ವರ್ಗಾವಣೆ ವ್ಯಾಪಾರ :ಯತ್ನಾಳ್ ಆರೋಪಕ್ಕೆ ಸದನದಲ್ಲಿ ಗದ್ದಲ title=

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ‌ ಹಿಂದೆ ಇದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಿ ಅರ್ಹತೆ ಇಲ್ಲದ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ವರ್ಗಾವಣೆಯಲ್ಲಿ ನೀವು ವ್ಯಾಪಾರ ಮಾಡಿರಬಹುದು, ನಾವು ಮಾಡಿಲ್ಲ, ಎಂದರು.ಇದಕ್ಕೆ ಸಚಿವ ಭೈರತಿ ಸುರೇಶ್ ವಿರೋಧ ವ್ಯಕ್ತಪಡಿಸಿದರು.

ಭೈರತಿ ಸುರೇಶ್ : ನೀವು ವ್ಯಾಪಾರ ಮಾಡಿದ್ದೀರಿ, ನಾವು ಮಾಡಿಲ್ಲ ಎಂದರೆ ಹೇಗೆ? ನೀವು ಮಾತ್ರ ಸತ್ಯ ಹರಿಶ್ಚಂದ್ರರು ಅಂತಾನಾ? ಸುಮ್ಮನೆ ಏನೋ ಹೇಳ್ತಿರಲ್ವಾ? ಎಂದು ತಿರುಗೇಟು ‌ನೀಡಿದರು.

ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ:ಹಿರಿಯ ನಾಯಕರಾಗಿ ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು. ನೀವು ವ್ಯಾಪಾರ ಮಾಡಿದ್ದೀರಿ ನಾವು ಮಾಡಿಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು. ವ್ಯಾಪಾರಕ್ಕೆ ಬಂದಿದ್ದಾರೆ ಅವರೆ ಅವರೇನು ಸತ್ಯ ಹರಿಶ್ಚಂದ್ರರ ಮೊಮ್ಮೊಕ್ಕಳಾ? ಎಂದು   ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಕೂಡಾ ಸಾಥ್ ನೀಡಿದರು‌.

ಕ್ರಿಯಾಲೋಪ ಎತ್ತಿದ ಬಸವರಾಜ ರಾಯರೆಡ್ಡಿ 
ಯತ್ನಾಳ್ ಮಾತಿಗೆ ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ ಕ್ರಿಯಾಲೋಪ ಎತ್ತಿದರು‌. ಶೂನ್ಯವೇಳೆಯಲ್ಲಿ ಈ ರೀತಿಯಲ್ಲಿ ಚರ್ಚೆ ನಡೆಸಲು ಅವಕಾಶ ಇಲ್ಲ. ಯಾರು ವ್ಯಾಪಾರ ಮಾಡಿದ್ದಾರೆ? ವ್ಯಾಪಾರ ಪದವನ್ನು  ಕಡತದಿಂದ ತೆಗೆದು ಹಾಕಿ ಎಂದು ಆಗ್ರಹಿಸಿದರು.

ಇದನ್ನೂ ಓದಿ-ವಿವಿ ಪುರಂನ ಫುಡ್ ಸ್ಟ್ರೀಟ್ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಬೈರತಿ ಸಿಡಿಮಿಡಿ
ಯತ್ನಾಳ್ ಹೇಳಿಕೆಗೆ ಗರಂ ಆದ ಸಚಿವ ಬೈರತಿ ಸುರೇಶ್, ವ್ಯಾಪಾರ ವಹಿವಾಟು ಮಾಡಲು ಯತ್ನಾಳ್ ಅವರಿಗೆ ದರ್ದು ನಿಮಗೆ ಇರಬಹುದು,  ನನಗಿಲ್ಲ. ನನ್ನ ಬಳಿ  ಸೌಜನ್ಯಕ್ಕಾದರೂ ಅಧಿಕಾರಿ ಬಂದು ಮಾತನಾಡಿಲ್ಲ ಅಂದಿದ್ದಾರೆ. ಹಾಗಾದರೆ ವ್ಯವಹಾರ ಮಾಡಲು ಬಿಡಬೇಕಾ ನಿಮ್ಮ ಬಳಿ ಎಂದು ಬೈರತಿ ಯತ್ನಾಳ್ ವಿರುದ್ಧ ಕಿಡಿಕಾರಿದರು. ಇದಕ್ಕೆ ಬಿಜೆಪಿ ಸದಸ್ಯರು ತೀಕ್ಷ್ಣ ಪ್ರತಿಕ್ರಿಯೆ ನೀಡಿದಾಗ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ನನಗೆ ಆ ಅಧಿಕಾರಿ ಯಾರು ಎಂದು ಗೊತ್ತಿಲ್ಲ, ಅದಕ್ಕೆ ವ್ಯಾಪಾರ ಎಂದು ಹೇಳಬಹುದಾ? ಹಳೇ ಅಧಿಕಾರಿಗೂ ನಿಮಗೂ ಸಂಬಂಧ ಇದೆ ಎಂದು ನನಗೂ ಸಂಶಯ ಇದೆ ಎಂದು ಯತ್ನಾಳ್ ವಿರುದ್ಧ ಬೈರತಿ ಸುರೇಶ್ ಮತ್ತಷ್ಟು ವಾಗ್ದಾಳಿ ನಡೆಸಿದರು. 

ನಾನಾಗಿದ್ದರೆ 24 ಗಂಟೆಯಯಲ್ಲಿ ಪಕ್ಷದಿಂದ ಡಿಸ್ಮಿಸ್ ಮಾಡುತ್ತಿದ್ದೆ ಎಂದ ಡಿಕೆಶಿ
ಇದೇ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್, ‌ಅಧಿಕಾರಿಗಳ ಬದಲಾವಣೆ ಸಹಜ ಪ್ರಕ್ರಿಯೆ. ಆದರೆ ಯತ್ನಾಳ್ ವ್ಯವಹಾರ ಪದ ಬಳಕೆ ಮಾಡಿದ್ದಾರೆ. ಆದರೆ ಯತ್ನಾಳ್ ಗೆ ರೂಡಿ ಇದೆ. ಸಿಎಂ ಹುದ್ದೆ 2500 ಕೋಟಿಗೆ ಮಾರಾಟಕ್ಕೆ ಇದೆ. ಮಂತ್ರಿ ಹುದ್ದೆ ಸಾವಿರ ಕೋಟಿ ಮಾರಾಟಕ್ಕೆ ಇದೆ ಎಂದಿದ್ದರು ಎಂದರು.

ಇದಕ್ಕೆ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದಕ್ಕೆ, ಕೂತ್ಕೋಳಯ್ಯ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿಕೆಶಿ, ನನ್ನ ಬಳಿ ಇತಿಹಾಸ ಇದೆ. ನಿಮ್ಮ ಸಿಎಂ ಸುಮ್ಮನೆ ಕೂತುಕೊಂಡರು ಎಂದರೆ ನಾನು ಸುಮ್ಮನೆ ಕುಳಿತುಕೊಂಡಿರಲಿಲ್ಲ. ನಿನ್ನ ನಾಲಗೆ ಮೇಲೆ ಹಿಡಿತ ಇರಲಿ. ಅವರು ಏನೇ ಸುಮ್ಮನೆ ಇದ್ದರು, ನಾನಾಗಿದ್ದರೆ 24 ಗಂಟೆಯಯಲ್ಲಿ ಪಕ್ಷದಿಂದ ಡಿಸ್ಮಿಸ್ ಮಾಡುತ್ತಿದ್ದೆ ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು. ಇದಕ್ಕೆ ತಿರುಗೇಟು ನೀಡಿದ ಯತ್ನಾಳ್,‌ ನಿಮ್ಮಂತಹ ಪಕ್ಷಕ್ಕೆ ನಾನು ಏಕೆ ಬರುತ್ತಿದ್ದೆ? ನಿಮ್ಮಂತ ಭ್ರಷ್ಟ ಬಂಡೆ ನಾನೇಕೆ ಹೆದರಬೇಕು? ಎಂದರು.

ಬಿಜೆಪಿ ಧರಣಿ 
ಗದ್ದಲ ತೀವ್ರಗೊಂಡ ಹಿನ್ನಲೆಯಲ್ಲಿ ಸಚಿವರ ಹೇಳಿಕೆ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು‌. 

ಇದನ್ನೂ ಓದಿ-Photo Gallery: ಜಿ-20 ಪ್ರತಿನಿಧಿಗಳಿಂದ ತುಂಗಭದ್ರಾ ನದಿಯಲ್ಲಿ ಬೋಟ್ ಸವಾರಿ

ಇದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಸಚಿವ ಬೈರತಿ ವಿರುದ್ಧ ಮತ್ತಷ್ಟು ಕಿಡಿಕಾರಿ, ಯಾವ ಸಚಿವರು ಹೀಗೆ ಮಾತನಾಡಿ ರದ್ದು ಮಾತನಾಡಿದ್ದು ನಾನು ನೋಡಿಲ್ಲ, ಅಧಿಕಾರ ಶಾಶ್ವತನಾ? ಅದೇನು ನೋಡೇ ಬಿಡೋಣ? ಯಾವ ಅಧಿಕಾರಿ ಹಾಕ್ತಿರೋ ಹಾಕಿ,ಒಂದು ಕೈ ನೋಡೇ ಬಿಡೋಣ.‌ ನೀವು ಹೇಳಿದ್ದು ಕೇಳಲು ಆಗಲ್ಲ. ಖಂಡಿತಾ ವ್ಯವಹಾರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯತ್ನಾಳ್ ಆಕ್ಷೇಪಕ್ಕೆ ಕಾರಣ ಏನು? 
ವಿಜಯಪುರ ಪಾಲಿಗೆಗೆ ನೂತನ ಅಧಿಕಾರಿ ನೇಮಕ ಮಾಡಿದ್ದಕ್ಕೆ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದು ಸದನದಲ್ಲಿ ಕೋಲಾಹಲಕ್ಕೆ‌ ಕಾರಣವಾಗಿತ್ತು. ಅರ್ಹತೆ ಇಲ್ಲದ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ ಎಂಬುದು ಯತ್ನಾಳ್ ಆರೋಪವಾಗಿದೆ. ಹೊಸತಾಗಿ ನೇಮಕಗೊಂಡ ಅಧಿಕಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News