ಆಟೋ ಚಾಲಕರ ಸುಲಿಗೆಗೆ ಲಗಾಮು ಹಾಕಲು ಮುಂದಾದ ಸಂಚಾರಿ ಪೊಲೀಸರು, BMRCL

ಪ್ರಯಾಣಿಕರಿಂದ ಆಟೋ ಚಾಲಕರ ಬೇಕಾಬಿಟ್ಟಿ ಸುಲಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಾಗೂ BMRCL ಯೋಜನೆ ರೂಪಿಸಿದೆ.  ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣದ ಎದುರು ಪ್ರೀಪೇಯ್ಡ್ ಆಟೋ ನಿಲ್ದಾಣವನ್ನು ಆರಂಭಿಸಲು ಪ್ಲಾನ್ ಮಾಡಲಾಗುತ್ತಿದೆ.

Written by - Yashaswini V | Last Updated : Jan 6, 2023, 01:11 PM IST
  • ಈ ಪ್ರೀಪೇಯ್ಡ್ ಆಟೋ ಬೂತ್ ಗಳು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 12.30ರವರೆಗೆ ಕಾರ್ಯ ನಿರ್ವಹಿಸುತ್ತವೆ.
  • ಸಂಚಾರಿ ಪೊಲೀಸ್ ಮತ್ತು ಬಿಎಂಆರ್‌ಸಿಎಲ್ ಸಿಬ್ಬಂದಿ ಜಂಟಿಯಾಗಿ ಕಾರ್ಯ ನಿರ್ವಹಣೆ
  • ಪ್ರಯಾಣಿಕರಿಗೆ ಗಮ್ಯಸ್ಥಾನವನ್ನು ತಲುಪಲು ಹೆಚ್ಚು ಹಣ ಪಾವತಿಸುವ ಅಗತ್ಯವಿರುವುದಿಲ್ಲ.
ಆಟೋ ಚಾಲಕರ ಸುಲಿಗೆಗೆ ಲಗಾಮು ಹಾಕಲು ಮುಂದಾದ ಸಂಚಾರಿ ಪೊಲೀಸರು, BMRCL  title=
Prepaid Auto

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಂತಹ ಸನ್ನಿವೇಶದಲ್ಲೇ ಆದರೂ ಆಟೋದಲ್ಲಿ ಪ್ರಯಾಣಿಸಬೇಕೆಂದರೆ ಒಂದಲ್ಲಾ, ಎರಡಲ್ಲ.... ನೂರು ಬಾರಿ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ, ಪ್ರಯಾಣಿಕರ ಸ್ಥಿತಿ ಹೇಗಿದೆ ಎಂಬುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಆಟೋ ಚಾಲಕರು ಪ್ರಯಾಣಿಕರಿಂದ ಬೇಕಾಬಿಟ್ಟಿ ಹಣ ಸುಲಿಗೆ ಮಾಡುತ್ತಿದ್ದಾರೆ. ಇನ್ಮುಂದೆ ಆಟೋ ಚಾಲಕರ ಈ ಸುಲಿಗೆಗೆ ಬ್ರೇಕ್ ಬೀಳಲಿದೆ. 

ಹೌದು, ಪ್ರಯಾಣಿಕರಿಂದ ಆಟೋ ಚಾಲಕರ ಬೇಕಾಬಿಟ್ಟಿ ಸುಲಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಾಗೂ BMRCL ಯೋಜನೆ ರೂಪಿಸಿದೆ.  ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣದ ಎದುರು ಪ್ರೀಪೇಯ್ಡ್ ಆಟೋ ನಿಲ್ದಾಣವನ್ನು ಆರಂಭಿಸಲು ಪ್ಲಾನ್ ಮಾಡಲಾಗುತ್ತಿದೆ.

5  ಪ್ರೀಪೇಯ್ಡ್ ಆಟೋ ಬೂತ್ ಆರಂಭಕ್ಕೆ BMRCL ಚಿಂತನೆ:
ವಾಸ್ತವವಾಗಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ BMRCL ವತಿಯಿಂದ ಆರಂಭದಲ್ಲಿ 5 ಮೆಟ್ರೋ ನಿಲ್ದಾಣಗಳಲ್ಲಿ  ಪ್ರೀಪೇಯ್ಡ್ ಆಟೋಗಳ ಬೂತ್ ಆರಂಭಿಸಲು ಯೋಜಿಸಲಾಗುತ್ತಿದೆ. ಇದರ ಸಹಾಯದಿಂದ ಪ್ರಯಾಣಿಕರು ನಿಗದಿತ ಹಣದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪಲು ಸಹಕಾರವಾಗಲಿದೆ. ಈ ಬೂತ್‌ಗಳಲ್ಲಿ ಪ್ರಯಾಣಿಕರು ಸೇವಾ ಶುಲ್ಕವಾಗಿ ₹2 ಪಾವತಿಸಬೇಕು.

ಇದನ್ನೂ ಓದಿ- ಈ ಸರ್ಕಾರಿ ಬ್ಯಾಂಕ್‌ನ ಗ್ರಾಹಕರಿಗೆ ಶಾಕ್, 9 ಸೇವೆಗಳ ಶುಲ್ಕದಲ್ಲಿ ಭಾರೀ ಬದಲಾವಣೆ

ಪ್ರೀಪೇಯ್ಡ್ ಆಟೋ ಬೂತ್ ವಿಶೇಷತೆಗಳು:
* ಈ ಪ್ರೀಪೇಯ್ಡ್ ಆಟೋ ಬೂತ್  ಗಳು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 12.30ರವರೆಗೆ ಕಾರ್ಯ ನಿರ್ವಹಿಸುತ್ತವೆ.
* ಸಂಚಾರಿ ಪೊಲೀಸ್ ಮತ್ತು ಬಿಎಂಆರ್‌ಸಿಎಲ್ ಸಿಬ್ಬಂದಿ ಜಂಟಿಯಾಗಿ ಕಾರ್ಯ ನಿರ್ವಹಣೆ
* ಪ್ರಯಾಣಿಕರಿಗೆ ಗಮ್ಯಸ್ಥಾನವನ್ನು ತಲುಪಲು ಹೆಚ್ಚು ಹಣ ಪಾವತಿಸುವ ಅಗತ್ಯವಿರುವುದಿಲ್ಲ.
* ಪ್ರಯಾಣಿಕರು ಕೌಂಟರ್‌ಗಳಲ್ಲಿ ತಮ್ಮ ಗಮ್ಯಸ್ಥಾನದ ಬಗ್ಗೆ ಮಾಹಿತಿ ನೀಡಿ ನಿಗದಿತ ಮೊತ್ತವನ್ನು ಮಾತ್ರ ಪಾವತಿಸಬಹುದು.
* ಚಾಲಕ ಮತ್ತು ಪ್ರಯಾಣಿಕರ ದೂರವಾಣಿ ಸಂಖ್ಯೆಗಳು ಪ್ರೀಪೇಯ್ಡ್  ಕೌಂಟರ್‌ಗಳಲ್ಲಿ ದಾಖಲಾಗುವುದರಿಂದ ಇದು ಸುರಕ್ಷಿತವಾಗಿದೆ.
* ಆಟೊರಿಕ್ಷಾ ನೋಂದಣಿ ಸಂಖ್ಯೆಯನ್ನು  ದಾಖಲಿಸಿಕೊಳ್ಳಲಾಗುತ್ತೆ
* ಪ್ರಯಾಣದ ಕೊನೆಯಲ್ಲಿ ಪಾವತಿಸಬೇಕಾದ ಮೊತ್ತದ ಚೀಟಿ ಪ್ರೀಪೇಯ್ಡ್ ಆಟೋ ಬೂತ್ ನಲ್ಲಿಯೇ ಲಭ್ಯವಾಗುವುದರಿಂದ ನಂತರ ಆಟೋ ಚಾಲಕರು ಮನಬಂದಂತೆ ಹಣ ಪಡೆಯಲು ಸಾಧ್ಯವಾಗುವುದಿಲ್ಲ.

ಪ್ರೀಪೇಯ್ಡ್ ಆಟೋ ದರ:
>> 2 ಕಿಲೋ ಮೀಟರ್‌ಗೆ ₹30 
>> 2 ಕಿ.ಮೀ ನಂತರ(ಪ್ರತಿ ಕಿ.ಮೀ) ಗೆ ₹15 ದರ ನಿಗದಿಗೊಳಿಸುವ ಸಾಧ್ಯತೆ ಇದೆ.

ಇದನ್ನೂ ಓದಿ- ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದಲ್ಲಿ ನಿಷ್ಪ್ರಯೋಜನಕವಾಗುವುದು ಪ್ಯಾನ್ ಕಾರ್ಡ್ !
 
ಮೊದಲ ಹಂತದಲ್ಲಿ ಯಾವ್ಯಾವ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ಸೌಲಭ್ಯ ಲಭ್ಯವಾಗಲಿದೆ:

1. ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಒಂದು ಬೂತ್

2.  ಬನಶಂಕರಿ ನಿಲ್ದಾಣದಲ್ಲಿ ಒಂದು ಬೂತ್

3. ನಾಗಸಂದ್ರ ಮೆಟ್ರೊ ನಿಲ್ದಾಣದಲ್ಲಿ ಎರಡು ಬೂತ್

4. ಎಂ.ಜಿ. ರೋಡ್‌ ಮೆಟ್ರೋ ನಿಲ್ದಾಣದಲ್ಲಿ ಒಂದು ಪ್ರೀಪೇಯ್ಡ್ ಆಟೋ ಬೂತ್ ಸ್ಥಾಪಿಸುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News