ಮಂಗಳೂರು ರೈಲು ನಿಲ್ದಾಣ ಸಂಪರ್ಕಿಸುವ ಐದು ರೈಲುಗಳ ಸಂಚಾರ ರದ್ದು

ಇನ್ನೂ ಕೆಲವು ರೈಲುಗಳ ಸಂಚಾರ ಕೂಡಾ ರದ್ದಾಗುವ ಸಾಧ್ಯತೆ.

Last Updated : Aug 17, 2018, 01:31 PM IST
ಮಂಗಳೂರು ರೈಲು ನಿಲ್ದಾಣ ಸಂಪರ್ಕಿಸುವ ಐದು ರೈಲುಗಳ ಸಂಚಾರ ರದ್ದು title=

ಮಂಗಳೂರು: ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಭಾರೀ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಮಂಗಳೂರು ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಇನ್ನೂ ಕೆಲವು ರೈಲುಗಳ ಸಂಚಾರ ಸಹ ರದ್ದಾಗುವ ಸಾಧ್ಯತೆ ಇದೇ ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರದ್ದಾಗಿರುವ ರೈಲುಗಳ ವಿವರ
* ಮಂಗಳೂರು-ಚೆನ್ನೈ ಎಗ್ಮೋರ್ ಎಕ್ಸ್ ಪ್ರೆಸ್ ರೈಲು
* ಮಂಗಳೂರು ಸೆಂಟ್ರಲ್- ನಾಗರಕೊಯ್ಲ್ ಜಂಕ್ಷನ್ ನಡುವೆ ಸಂಚರಿಸಬೇಕಿದ್ದ ಎರ್ನಾಡ್ ಎಕ್ಸ್ ಪ್ರೆಸ್ ರೈಲು
* ಮಂಗಳೂರು-ನಾಗರಕೊಯ್ಲ್ ಎಕ್ಸ್ ಪ್ರೆಸ್
* ಮಂಗಳೂರು-ಕೊಯಂಬತ್ತೂರ್ ಎಕ್ಸ್ ಪ್ರೆಸ್
* ಕಣ್ಣೂರು-ತಿರುವನಂತಪುರಂ ಜನ ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. 

ಏತನ್ಮಧ್ಯೆ, ಆಗಸ್ಟ್ 14 ರಂದು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ಹೊರಟಿದ್ದ ಹಜರತ್ ನಿಜಾಮುದ್ದೀನ್-ತಿರುವನಂತಪುರಂ ರಾಜಧಾನಿ ಎಕ್ಸ್ ಪ್ರೆಸ್ ರೈಲು ಕೋಝಿಕ್ಕೋಡ್  ವರೆಗೆ ಮಾತ್ರ ಸಂಚರಿಸುವ ಸಾಧ್ಯತೆ ಇದೆ.

Trending News